Advertisement

Tragedy: ಪೈಪ್ ಲೈನ್ ಚೆಕ್ ಮಾಡುವ ವೇಳೆ ದುರಂತ: ನೀರಿನ ಟ್ಯಾಂಕ್ ಗೆ ಬಿದ್ದು ಮೂವರ ದುರ್ಮರಣ

08:17 AM May 10, 2024 | Team Udayavani |

ಬಳ್ಳಾರಿ: ನೀರಿನ ಪೈಪ್ ಲೈನ್ ತಪಾಸಣೆ ನಡೆಸುವ ವೇಳೆ ರಭಸವಾಗಿ ನೀರು ಹರಿದ ಪರಿಣಾಮ ನೀರಿನ ರಭಸಕ್ಕೆ ನೀರಿನ ಹೊಂಡಕ್ಕೆ ಬಿದ್ದು ಮೂವರು ಮೃತಪಟ್ಟ ಘಟನೆ ನಡೆದಿದೆ.

Advertisement

ಬಳ್ಳಾರಿಯಲ್ಲಿರುವ ಜಿಂದಾಲ್ ಕಾರ್ಖಾನೆಯಲ್ಲಿ ಈ ಅವಘಡ ಸಂಭವಿಸಿದ್ದು ಮೃತರನ್ನು ಭುವನ ಹಳ್ಳಿ ಮೂಲದ ಜೆಡೆಪ್ಪ, ಬೆಂಗಳೂರು ಮೂಲದ ಸುಶಾಂತ, ಚೆನೈ ಮೂಲದ ಮಹಾದೇವನ್ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ತೋರಣಗಲ್ಲು‌ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಘಟನೆಗೆ ನಿಖರವಾದ ಕಾರಣ ಏನು ಎನ್ನುವದರ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Daily Horoscope: ಉದ್ಯೋಗ ಸ್ಥಾನದಲ್ಲಿ ಬದಲಾದ ವಿಭಾಗಕ್ಕೆ ಹೊಂದಾಣಿಕೆ

Advertisement

Udayavani is now on Telegram. Click here to join our channel and stay updated with the latest news.

Next