ಬೆಂಗಳೂರು: ಪ್ರತಿಯೊಂದು ಜಿಲ್ಲೆಗಳಲ್ಲಿ ಗೋ ಶಾಲೆ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೋಮವಾರ(ಮಾರ್ಚ್ 08, 2021) ಮಂಡಿಸಿದ್ದ 2021-22ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯರಿಗೆ ಇತಿಹಾಸ-ಭವಿಷ್ಯ ಸೃಷ್ಟಿಸುವ ಸಾಮರ್ಥ್ಯವಿದೆ : ರಾಹುಲ್ ಗಾಂಧಿ
ರಾಜ್ಯದಲ್ಲಿ ಗೋ ಹತ್ಯೆ ತಡೆಗಾಗಿ ಜಿಲ್ಲೆಗೊಂದು ಗೋಶಾಲೆ ಸ್ಥಾಪಿಸಲಾಗುವುದು, ಅಲ್ಲದೇ ದೇಸಿ ತಳಿಗಳಾದ ಸಾಹಿವಾಲ್, ಥಾರ್, ಗೀರ್, ಓಂಗೋಲ್, ದೇವಣಿ ತಳಿಗಳ ಸಂವರ್ಧನೆಗಾಗಿ ಸಮಗ್ರ ಗೋಸಂಕುಲ ಸಮೃದ್ಧಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಬಿಎಸ್ ವೈ ತಿಳಿಸಿದ್ದಾರೆ.
ಬೆಂಗಳೂರಿನ ಹೆಸರಘಟ್ಟದಲ್ಲಿ 100 ಎಕರೆ ವಿಸ್ತೀರ್ಣದಲ್ಲಿ ಹಸು, ಕೋಳಿ ಮತ್ತು ವಿವಿಧ ದೇಶಿ ಪಶುತಳಿಗಳ ಸಂವರ್ಧನೆ ಮತ್ತು ಪ್ರದರ್ಶನಕ್ಕಾಗಿ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಬಿಎಸ್ ವೈ ಬಜೆಟ್ ನಲ್ಲಿ ಘೋಷಿಸಿದ್ದಾರೆ.
ಮೇಕೆ ತಳಿಗಳ ಅಭಿವೃದ್ಧಿಗೆ 1 ಕೋಟಿ ರೂಪಾಯಿ, ನಾರಿಸುವರ್ಣ ಕುರಿತಳಿ ಸಂವರ್ಧನೆಗೆ ಕೊಪ್ಪಳದಲ್ಲಿ ಸಂವರ್ಧನಾ ಕೇಂದ್ರ ನಿರ್ಮಾಣ, ಆಕಸ್ಮಿಕವಾಗಿ ಕುರಿಗಳು ಸಾವನ್ನಪ್ಪಿದ್ದರೆ ಅದಕ್ಕೆ ಪರಿಹಾರ ನೀಡುವ ಯೋಜನೆಯನ್ನು ಈ ವರ್ಷವೂ ಮುಂದುವರಿಸುವುದಾಗಿ ಹೇಳಿದರು.