ಬೆಂಗಳೂರು: ಸರ್ಕಾರದ ವಿವಿಧ ಸೇವೆಯನ್ನು ಗ್ರಾಮ ಪಂಚಾಯತಿ ಮೂಲಕ ಜನ ಸಾಮಾನ್ಯರಿಗೆ ತಲುಸಲು ಹೊಸ ಯೋಜನೆ ರೂಪಿಸುತ್ತಿದ್ದು, ಜನವರಿ 26ರಂದು ಐದು ಜಿಲ್ಲೆಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ನೂತನ ಯೋಜನೆ ಅಮೃತ ಗ್ರಾಮ ಪಂಚಾಯತಿ ಯೋಜನೆಗೆ ವಿಧಾನ ಸೌಧದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಗಿರಿರಾಜ್ ಸಿಂಗ್ ಅವರೊಂದಿಗೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದ ಜನರಿಗೆ ಪಿಂಚಣಿ ಸೇರಿದಂತೆ ಸರ್ಕಾರದ ಎಲ್ಲ ಸೇವೆ ಗ್ರಾಮ ಪಂಚಾಯತಿ ಮೂಲಕವೇ ತಲುಪಿಸಲೂ ಬೇಕಾದ ಯೋಜನೆ ರೂಪಿಸುತ್ತಿದ್ದೇವೆ. ಪ್ರಾಯೋಗಿಕವಾಗಿ ಐದು ಜಿಲ್ಲೆಗಳಲ್ಲಿ ಜನರಿಗೆ ಬೇಕಾಗುವ ಸೇವೆಯಿಂದ ಆನ್ಲೈನ್ ಗ್ರಾಮ ಪಂಚಾಯತಿ ಮೂಲಕ ಸಿಗುವಂತೆ ಮಾಡಬೇಕು. ಇದಕ್ಕೆ ಬೇಕಾದ ಸಿದ್ಧತೆ ಈಗಿಂದಲೇ ಇಲಾಖೆ ಮಾಡಿಕೊಳ್ಳಬೇಕು. ಗ್ರಾಪಂಗಳು ಗ್ರಾಮ ಸೇವಾ ಸಂಸ್ಥೆಯಾಗಿ ಬದಲಾಗಬೇಕು. ಗ್ರಾಮ ಸೇವಕರಿಗೆ ವಿಶೇಷ ಕ್ರೇಡಿಟ್ ನೀಡಿ, ಸರ್ಕಾರಿ ಕಚೇರಿಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಲ್ಲುವ ಬದಲಿಗೆ ಗ್ರಾಮ ಪಂಚಾಯತಿ ಮೂಲಕ ನೀಡಬೇಕು ಎಂದರು.
ಪ್ರಜಾಪ್ರಭುತ್ವ ಯಶ್ವಸ್ವಿಗೆ ಎಲ್ಲರ ಪಾಲ್ಗೊಳ್ಳುವಿಗೆ ಅತ್ಯಗತ್ಯ. ಜನರ ಭಾಗಿದಾರತ್ವ ಅಗತ್ಯ. ನಮ್ಮದು ಎನ್ನುವ ಭಾವನೆಯಿಂದ ಕೆಲಸ ಮಾಡಬೇಕು. ಪಂಚಾಯತ್ ರಾಜ್ ವ್ಯವಸ್ಥೆ ಮೊದಲಿನಿಂದಲೂ ಇದೆ. ಸ್ವತಂತ್ರ್ಯ ನಂತರ ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಹಾಗೂ ಅಬ್ದೂಲ್ ನಜೀರ್ ಸಾಬ್ ಇದಕ್ಕೆ ಹೊಸ ರೂಪ ನೀಡಿದ್ದಾರೆ. ಪಂಚಾಯತ್ ರಾಜ್ ಜನರ ಸುತ್ತ ಅಭಿವೃದ್ಧಿ ಆಗಬೇಕು. ಅವರಿಂದಲೇ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ತತ್ವ ಆದರ್ಶದಲ್ಲಿ ಯೋಜನೆ ರೂಪಿಸಿದ್ದೇವೆ. ಜನರ ಯೋಜನೆಗೆ ಮೇಲಿನಿಂದ ಅನುದಾನ ಬರಬೇಕು ಎಂದರು.
ಅಮೃತ ಯೋಜನೆಯಲ್ಲಿ 2300 ಕೋಟಿ ರೂ.ಗಳಷ್ಟು ಕೆಲಸ ಮಾಡುತ್ತೇವೆ. ಪ್ರೋತ್ಸಾಹಧನ ಸೇರಿದರೆ2500 ಕೋಟಿ ಆಗಲಿದೆ. ಶಾಲೆ, ಗ್ರಂಥಾಲಯ, ತ್ಯಾಜ್ಯ ನಿರ್ವಹಣೆ. ಒಂದು ಪಂಚಾಯತಿಗೆ ಸರಾಸರಿ ನೂರು ಕೋಟಿ ಖರ್ಚು ಮಾಡಲಿದ್ದೇವೆ. ಮಾರ್ಚ್ 31ರೊ ಪ್ರೋತ್ಸಾಹ ಧನ ನೀಡದರೆ, ಮುಂದಿನ ವರ್ಷ 1500 ಗ್ರಾಮ ಪಂಚಾಯತಿ ಆಯ್ಕೆ ಮಾಡಲಿದ್ದೇವೆ. 10ರಿಂದ 15 ಗ್ರಾಮ ತಾಲೂಕುಗಳಲ್ಲಿ ಅಭಿವೃದ್ಧಿ ಆಗಲಿದೆ ಎಂದು.
ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ಚರಪ್ಪ ಇದ್ದರು.