Advertisement

ಕೋವಿಡ್ ಸೋಂಕು ತಡೆಗೆ ಬೆಂಗಳೂರಿನಲ್ಲಿ ಹೊಸ ನಿಯಮಗಳು: ನೆಗೆಟಿವ್ ವರದಿ ಕಡ್ಡಾಯ, ಕೈಗೆ ಸೀಲ್

01:21 PM Mar 25, 2021 | Team Udayavani |

ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ದೃಢಪಟ್ಟ ಎಲ್ಲರಿಗೂ ಕೋವಿಡ್ ದೃಢಪಟ್ಟಿದೆ ಎಂಬ ಸೀಲ್ ಹಾಕಲಾಗುವುದು ಎಂದು ಸಚಿವ ಡಾ. ಸುಧಾಕರ್ ಹೇಳಿದರು.

Advertisement

ಕೋವಿಡ್-19 ಸೋಂಕು ತಡೆಗೆ ಸಚಿವ ಡಾ.‌ ಸುಧಾಕರ್ ಅವರಿಂದ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ ಹೊರ ರಾಜ್ಯದಿಂದ ಬರುವ ಎಲ್ಲರಿಗೂ ಏ.1 ರಿಂದ ಆರ್ ಟಿಪಿಸಿ ಆರ್ ವರದಿ ನೆಗೆಟಿವ್ ಕಡ್ಡಾಯ ಜಾರಿ ಮಾಡಲಾಗುವುದು ಎಂದರು.

ಇದನ್ನೂ ಓದಿ:“ತಂದೆತಾಯಿಗೆ ರಕ್ಷಣೆ ನೀಡಿದರೆ SIT ಮುಂದೆ ಬರುತ್ತೇನೆ!” ಸಿಡಿ ಲೇಡಿಯ ಮತ್ತೊಂದು ವಿಡಿಯೋ

ನಗರದಲ್ಲಿ ನಾಲ್ಕು ತಿಂಗಳ ನಂತರ ಮತ್ತೆ ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳು ದೃಢಪಡುತ್ತಿವೆ. ಇದು ನಗರದಲ್ಲಿ ಸೋಂಕು ಹೆಚ್ಚಳವಾಗುವ ಮುನ್ಸೂಚನೆಯಾಗಿದೆ. ಕೋವಿಡ್ ನಿಯಮ ಪಾಲನೆ ಮಾಡದಿದ್ದರೆ ದಂಡ ವಿಧಿಸಲಾಗುವುದು. ಕಾರ್ಯಕ್ರಮ ಆಯೋಜನೆ ಮಾಡುವವರನ್ನು ಸಹ ಹೊಣೆಗಾರರನ್ನಾಗಿ ಮಾಡಲಾಗುವುದು. ಆಯೋಜಕರಿಗೂ ದಂಡ ವಿಧಿಸಲಾಗುವುದು ಡಾ. ಸುಧಾಕರ್ ಹೇಳಿದರು.

Advertisement

ದಿನೇ ದಿನೆ ರಾಜ್ಯದಲ್ಲಿ ಕೋವಿಡ್ 19 ಸೋಂಕು‌ ಹೆಚ್ಚಾಗುತ್ತಿದ್ದು, ಗಂಭೀರವಾಗಿ ಪರಿಗಣಿಸಬೇಕಾಗಿದೆ. ಮುಚ್ಚಿದ ಸಭಾಂಗಣದಲ್ಲಿ 200 ಜನ, ತೆರೆದ ಸಭಾಂಗಣದಲ್ಲಿ 500 ಜನರಿಗೆ ಮಾತ್ರ ಭಾಗವಹಿಸಬೇಕೆನ್ನುವ ನಿಯಮ‌ ಕಡ್ಡಾಯ ಪಾಲನೆ ಆಗಬೇಕು ಎಂದರು.

ಇದನ್ನೂ ಓದಿ: ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 53,476 ಕೋವಿಡ್ ಪ್ರಕರಣ ಪತ್ತೆ, 5 ತಿಂಗಳಲ್ಲಿ ಗರಿಷ್ಠ

ಕೋವಿಡ್ ಎರಡನೇ ಅಲೆ ತಡೆಗೆ ಕಠಿಣ ಕ್ರಮ ಕೈಗೊಂಡಿದ್ದು,  ಬೆಂಗಳೂರಿನಲ್ಲಿ ಕೋವಿಡ್ ಸೋಂಕು ತಡೆದರೆ ಉಳಿದ ಜಿಲ್ಲೆಗಳಿಗೆ ಸೋಂಕು ಹರಡುವುದಕ್ಕೆ ಕಡಿವಾಣ ಹಾಕಬಹುದು ಎಂದು ಸಚಿವರು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next