Advertisement
ವಾಹಿನಿಗಳ ಪ್ಯಾಕ್: ಗಡುವು ಅಂತ್ಯಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿಯಮಗಳಂತೆ, ಗ್ರಾಹಕರು ಡಿಟಿಎಚ್ ಮೂಲಕ ತಮ್ಮ ಆಯ್ಕೆಯ ವಾಹಿನಿಗಳನ್ನು ಆರಿಸಿಕೊಳ್ಳಲು ಕಡೆಯ ದಿನ ಮಾ. 31 ಆಗಿದ್ದು, ಆ ಗಡುವು ಮುಕ್ತಾಯವಾಗಿದೆ.
2019ರ ಎ.1ರಿಂದ ಯಾವುದೇ ಉದ್ಯೋ ಗಿಯು ತನ್ನ ಕಂಪೆನಿಯನ್ನು ಬದಲಿಸಿ ದಾಗ ತನ್ನ ಪಿಎಫ್ ಖಾತೆಯ ವರ್ಗಾವಣೆಗಾಗಿ ಪ್ರತ್ಯೇಕ ಅರ್ಜಿಯನ್ನು ಕೊಡಬೇಕಿಲ್ಲ. ಇಪಿಎಫ್ಒನ ಸ್ವಯಂ ಚಾಲಿತ ವ್ಯವಸ್ಥೆಯಡಿ ಉದ್ಯೋಗಿ ಹೊಸ ಕಂಪೆನಿ ಯನ್ನು ಸೇರಿಕೊಂಡ ಒಂದು ತಿಂಗಳೊಳಗಾಗಿ ಅವರ ಪಿಎಫ್ ಖಾತೆ ಬದ ಲಾಗುತ್ತದೆ. ಲಿಂಕ್ ಗಡುವು ವಿಸ್ತರಣೆ
ಈ ನಡುವೆ ಆಧಾರ್ ಮತ್ತು ಪಾನ್ ಕಾರ್ಡ್ ಗಳ ಲಿಂಕಿಂಗ್‌ಗಾಗಿ ವಿಧಿಸಲಾಗಿದ್ದ ಮಾ. 31ರ ಗಡುವನ್ನು ಕೇಂದ್ರ ಸರಕಾರ ಸೆ. 30ರ ವರೆಗೆ ವಿಸ್ತರಿಸಿದೆ. ಆದರೆ ಎ. 1ರ ಅನಂತರ ಸಲ್ಲಿಸಲಾಗುವ ಆದಾಯ ತೆರಿಗೆ ರಿಟರ್ನ್Õ ವೇಳೆ ತೆರಿಗೆದಾರರು ಆಧಾರ್, ಪಾನ್ ಸಂಖ್ಯೆಗಳನ್ನು ಪ್ರತ್ಯೇಕವಾಗಿ ಉಲ್ಲೇಖೀಸುವುದು ಕಡ್ಡಾಯ ವಾಗಲಿದೆ. ಇದು 6ನೇ ಬಾರಿ ಗಡುವು ವಿಸ್ತರಣೆಯಾಗುತ್ತಿರುವುದು.
Related Articles
ಎ. 1ರಿಂದ ನೀವು ಪ್ರಯಾಣ ಮಾಡಬಯಸಿದ್ದ ರೈಲನ್ನು ನಿಗದಿತ ಸಮಯದೊಳಗೆ ತಲುಪುವಲ್ಲಿ ತಡವಾಗಿ ಆ ರೈಲು ಸ್ಟೇಷನ್‌ನಿಂದ ಹೊರಟು ಹೋದರೆ ನಿಮ್ಮ ಹಣ ನಿಮಗೆ ಮರುಪಾವತಿಯಾಗುತ್ತದೆ. ಇಂಥ ಸಂದರ್ಭಗಳಲ್ಲಿ ಆ ನಿರ್ದಿಷ್ಟ ಪ್ರಯಾಣಕ್ಕಾಗಿ ನೀಡ ಲಾಗಿರುವ ಎರಡು ಪಿಎನ್‌ಆರ್ ಸಂಖ್ಯೆಯನ್ನು ದಾಖ ಲಿಸ ಬೇಕು. ಆ ಎರಡೂ ಟಿಕೆಟ್‌ಗಳಲ್ಲಿ ನಿಮ್ಮ ಹೆಸರು ಇನ್ನಿತರ ವಿವರ ಒಂದೇ ರೀತಿ ಇರಬೇಕು.
Advertisement
ಜಿಎಸ್‌ಟಿ ದರ ಶೇ.1ಕ್ಕೆ ಇಳಿಕೆಕಡಿಮೆ ವೆಚ್ಚದ ಮನೆಗಳ ಮೇಲೆ ವಿಧಿಸಲಾಗುತ್ತಿದ್ದ ಜಿಎಸ್‌ಟಿ ಶೇ. 8ರಿಂದ ಶೇ.1ಕ್ಕೆ ಇಳಿಯಲಿದೆ. ಅಧಿಕ ವೆಚ್ಚದ ಮನೆಗಳ ಮೇಲಿನ ಜಿಎಸ್‌ಟಿಯು ಶೇ. 12ರಿಂದ ಶೇ. 5ಕ್ಕೆ ಇಳಿಯಲಿದೆ. ಕೆಲವು ಕಾರುಗಳ ದರ ಏರಿಕೆ
ಮಾರುಕಟ್ಟೆಯಲ್ಲಿನ ಕೆಲವು ಕಾರು ಕಂಪೆನಿಗಳು ದರ ಪರಿಷ್ಕರಿಸಲು ನಿರ್ಧರಿಸಿವೆ. ಎ. 1ರಿಂದ 125 ಸಿ.ಸಿ. ಮತ್ತು ಅದಕ್ಕಿಂತ ಹೆಚ್ಚಿನ ಶಕ್ತಿಶಾಲಿ ಎಂಜಿನ್ ಇರುವ ಮೋಟಾರ್ ಬೈಕ್‌ಗಳಲ್ಲಿ ಆ್ಯಂಟಿ ಲಾಕ್ ಬ್ರೇಕಿಂಗ್ ವ್ಯವಸ್ಥೆ ಕಡ್ಡಾಯವಾಗಿ ಇರಲಿದೆ. 125 ಸಿಸಿ ಒಳಗಿನ ಬೈಕುಗಳಲ್ಲಿ ಕಾಂಬಿ ಬ್ರೇಕಿಂಗ್ ವ್ಯವಸ್ಥೆ ಇರಲಿದೆ. ಆರೋಗ್ಯ ಮತ್ತು ಶಿಕ್ಷಣ ಸೆಸ್
ಆರೋಗ್ಯ, ಶಿಕ್ಷಣ ಸೆಸ್ ಶೇ. 3ರಿಂದ ಶೇ. 4ಕ್ಕೆ ಹೆಚ್ಚಾಗಲಿದೆ. 2018ರ ಬಜೆಟ್‌ನಲ್ಲಿ ಈ ಸೆಸ್ ಏರಿಸಲಾಗಿರಲಿಲ್ಲ. 2018-19ರ ಹಣಕಾಸು ವರ್ಷದಿಂದ ಈ ಹೊಸ ನಿಯಮ ಜಾರಿಗೆ ಬರಲಿದ್ದು, ಇದು ಸರ್‌ಚಾರ್ಜ್ ಒಳಗೊಂಡಿರುತ್ತದೆ. ಸೆಬಿ ನಿಯಮಗಳಲ್ಲಿ ಬದಲು
ಮ್ಯೂಚುವಲ್ ಫಂಡ್‌ಗೆ ಸಂಬಂಧಪಟ್ಟಂತೆ ಸೆಬಿಯ ಕೆಲವು ನಿಯಮಗಳಲ್ಲಿ ಬದಲಾವಣೆ ಯಾಗಲಿವೆ. ಅದರಂತೆ, ಒಟ್ಟು ಹೂಡಿಕೆ ಅನುಪಾತ (ಟಿಇಆರ್) ಶೇ. 2.25ರಷ್ಟಾಗಲಿದೆ. ಇದನ್ನು ಹೂಡಿಕೆದಾರರಿಂದಲೇ ವಸೂಲಿ ಮಾಡಲಾಗು ತ್ತದೆ. ಈಕ್ವಿಟಿ ಹೊರತಾದ ಇನ್ನಿತರ ಹೂಡಿಕೆಗಳಿಗೆ ಟಿಇಆರ್ ಶೇ. 1ರಷ್ಟಿರಲಿದೆ. ಡಿಮ್ಯಾಟ್ ವ್ಯವಹಾರಗಳಿಗೆ
ಮಾತ್ರ ಮಾನ್ಯತೆ
ಎ. 1ರಿಂದ ಡಿಮ್ಯಾಟ್ ಖಾತೆಗಳ ಮೂಲಕ ಮಾಡುವ ಷೇರು ವ್ಯವಹಾರಗಳಿಗಷ್ಟೇ ಮಾನ್ಯತೆ ಇರಲಿದೆ. ಹಾಗಾಗಿ ನೀವು ನಿಮ್ಮ ಷೇರು ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಭೌತಿಕ ದಾಖಲೆಗಳನ್ನು ಹೊಂದಿದ್ದಲ್ಲಿ, ತತ್‌ಕ್ಷಣವೇ ಡಿಮ್ಯಾಟ್ ಖಾತೆ ತೆರೆದು ಆ ಭೌತಿಕ ದಾಖಲೆಗಳನುಸಾರ ಡಿಜಿಟಲ್ ಮಾದರಿಯ ದಾಖಲೆಗಳನ್ನು ಪಡೆಯಬೇಕಿದೆ. ಶೇ. 10ರಷ್ಟು ತೆರಿಗೆ
ದೀರ್ಘಾವಧಿ ಹೂಡಿಕೆಗಳ ಮೇಲೆ ವಿಧಿಸಲಾ ಗುತ್ತಿದ್ದ ತೆರಿಗೆಯನ್ನು ಶೇ. 10ಕ್ಕೆ ಏರಿಸಲಾಗಿದ್ದು, ಅದು ಎ. 1ರಿಂದ ಜಾರಿಗೆ ಬರಲಿದೆ. – ಉದ್ಯೋಗಿಗಳಿಂದ ರಾಷ್ಟ್ರೀಯ ಪಿಂಚಣಿ ಯೋಜನೆಗೆ (ಎನ್‌ಪಿಎಸ್) ಹೋಗುತ್ತಿದ್ದ ದೇಣಿಗೆಯನ್ನು ಮರುಪಾವತಿಸುವಾಗ ನೀಡಲಾಗುತ್ತಿದ್ದ ಶೇ. 40ರಷ್ಟು ವಿನಾಯಿತಿ
ಇನ್ನು, ಎನ್‌ಪಿಎಸ್‌ನ ಉದ್ಯೋಗೇತರ ಗ್ರಾಹಕರಿಗೂ ಸಿಗಲಿದೆ. – 80 ಡಿಡಿಬಿ ಅಧಿನಿಯಮದ ಅಡಿಯಲ್ಲಿ ಹಿರಿಯ ನಾಗರಿಕರ ಮಾರಣಾಂತಿಕ ರೋಗಗಳಿಗೆ ಮಾಡಲಾಗುತ್ತಿದ್ದ ಖರ್ಚಿನಲ್ಲಿ ವಿನಾಯಿತಿ ನೀಡಲಾಗುತ್ತಿತ್ತು. ಹಿರಿಯ ನಾಗರಿಕರಿಗೆ 60,000 ರೂ., ಅತೀ ಹಿರಿಯ ನಾಗರಿಕರಿಗೆ 80,000 ರೂ.ಗಳ ವಿನಾಯಿತಿ ಸಿಗುತ್ತಿತ್ತು. ಎ. 1ರಿಂದ ಜಾರಿಗೊಳ್ಳಲಿರುವ ಹೊಸ ನಿಯಮಗಳ ಪ್ರಕಾರ, ಮೇಲ್ಕಂಡ ಎರಡೂ ವಿಭಾಗಗಳ ಹಿರಿಯ ನಾಗರಿಕರಿಗೆ ತಲಾ 1 ಲಕ್ಷ ರೂ. ವಿನಾಯಿತಿ ಸಿಗಲಿದೆ.