Advertisement

ಹೀಗಿದೆ ಹೊಸ 10 ರೂ. ನೋಟು

10:35 AM Jan 06, 2018 | Karthik A |

ಹೊಸದಿಲ್ಲಿ: ಶೀಘ್ರದಲ್ಲೇ ಚಲಾವಣೆಗೆ ಬರಲಿರುವ ಚಾಕೊಲೇಟ್‌ ಬಣ್ಣದ ನೂತನ 10 ರೂ. ನೋಟುಗಳ ಚಿತ್ರವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಇದೀಗ ಬಹಿರಂಗಗೊಳಿಸಿದೆ. ಈಗಾಗಲೇ 500, 2000 ಹಾಗೂ 50 ರೂ. ಮುಖಬೆಲೆಯ ನೋಟುಗಳನ್ನು ಆರ್‌ಬಿಐ ಬಿಡುಗಡೆ ಮಾಡಿದ್ದು, ಈ ಸಾಲಿಗೆ 10 ರೂ. ನೋಟುಗಳೂ ಸೇರಲಿವೆ. ಮಹಾತ್ಮಾ ಗಾಂಧಿ ಸರಣಿಯ ನೋಟುಗಳ ಮೇಲೆ ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ಸಹಿ ಇರಲಿದೆ. ಈ ಹೊಸ ನೋಟುಗಳ ಮೇಲೆ ದೇಶದ ಸಾಂಸ್ಕೃತಿಕ ಇತಿಹಾಸವನ್ನು ಸಾರುವ ಕೊನಾರ್ಕ್‌ ಸೂರ್ಯ ದೇಗುಲದ ಚಿತ್ರ ಇರಲಿದೆ.

Advertisement

ನೋಟಿನ ವೈಶಿಷ್ಟ್ಯ
– 63 ಮಿ.ಮೀ. ಅಗಲ ಹಾಗೂ 123 ಮಿ.ಮೀ ಉದ್ದ ಮುಂಭಾಗದಲ್ಲಿ ಮಹಾತ್ಮಾ ಗಾಂಧಿ ಚಿತ್ರ, ಸೂಕ್ಷ್ಮ ಅಕ್ಷರಗಳಲ್ಲಿ ಆರ್‌ಬಿಐ, ಭಾರತ ಹಾಗೂ ಇಂಡಿಯಾ ಎಂಬ ಅಕ್ಷರಗಳು

– ಮುಂಭಾಗದ ಅಂಚಿನಲ್ಲಿ ಆರ್‌ಬಿಐ ಗವರ್ನರ್‌ ಸಹಿ, ಆರ್‌ಬಿಐ ಚಿಹ್ನೆ

– ಮುಂಭಾಗದ ಬಲ ಬದಿಯಲ್ಲಿ ಅಶೋಕ ಸ್ತಂಭದ ಚಿತ್ರ. 

– ಹಿಂಭಾಗದ ಎಡ ಭಾಗದಲ್ಲಿ ಮುದ್ರಣದ ವರ್ಷ ಹಾಗೂ ಸ್ವಚ್ಛ ಭಾರತದ ಲೋಗೋ

Advertisement
Advertisement

Udayavani is now on Telegram. Click here to join our channel and stay updated with the latest news.

Next