Advertisement

ಕಾರ್ಮಿಕ ಪರ ಹೊಸ ಕಾನೂನು

07:25 AM Jul 08, 2020 | Lakshmi GovindaRaj |

ಚಿಕ್ಕಬಳ್ಳಾಪುರ: ರಾಜ್ಯದ ಅಸಂಘಟಿತ ಕಾರ್ಮಿಕರನ್ನು ಸಂಘಟಿತ ವಲಯಕ್ಕೆ ಸೇರಿಸುವ ನಿಟ್ಟಿನಲ್ಲಿ ತಮಿಳುನಾಡು ಮಾದರಿಯಲ್ಲಿ ಕಾರ್ಮಿಕರಿಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಬರುವ ಅಧಿವೇಶನದಲ್ಲಿ  ಹೊಸದಾಗಿ ಎರಡು ಕಾನೂನು ಜಾರಿಗೆ ತರಲಾಗುವುದು ಎಂದು ರಾಜ್ಯ ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ ತಿಳಿಸಿದರು.

Advertisement

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾನೂನುಗಳ ಜಾರಿ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯದ ಇಎಸ್‌ಐ ಆಸ್ಪತ್ರೆಗಳಲ್ಲಿ ಕಾರ್ಮಿಕರಿಗೆ ಯಾವುದೇ ರೀತಿ ಔಷಧಿಗಳ ಕೊರತೆ ಇಲ್ಲ. ಕೇಂದ್ರ ಸರ್ಕಾರ ಪ್ರತಿ ವರ್ಷ ಇಎಸ್‌ಐ  ಆಸ್ಪತ್ರೆಗಳಿಗೆ ಔಷಧಿ ಖರೀದಿಗಾಗಿಯೇ 400 ಕೋಟಿ ಅನುದಾನ ನೀಡುತ್ತಿದೆ ಎಂದರು.

ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ: ಕೆಲವು ಕಡೆ ಕಾರ್ಮಿಕರಿಗೆ ಸಮರ್ಪಕವಾಗಿ ಪಿಎಫ್, ಇಎಸ್‌ಐ ಸೌಲಭ್ಯಗಳನ್ನು ಕೊಡುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿವೆ. ಪಿಎಫ್ ಕಡಿತ ಮಾಡಿದರೂ ಕಾರ್ಮಿಕರಿಗೆ ಮರಳಿ ಪಾವತಿ ಮಾಡದೇ  ಕಾರ್ಮಿಕರಿಗೆ ವಂಚಿಸಲಾಗುತ್ತಿದೆಯೆಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಪಿಎಫ್ ವಂಚಿತ ಕಾರ್ಮಿಕರು ನೇರವಾಗಿ ಇಲಾಖೆಗೆ ಪತ್ರ ಬರೆಯಬಹುದು ಅಥವಾ ಕಚೇರಿಗೆ ಇ-ಮೇಲ್‌ ಮಾಡಬಹುದು ಎಂದರು.

ಪರಿಹಾರ ಕೋರಿ ಮನವಿ: ಇದೇ ಸಂದರ್ಭದಲ್ಲಿ ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌ಗೆ ಚಿಕ್ಕಬಳ್ಳಾಪುರ ಛಾಯಾ ಗ್ರಾಹಕರ ಸಂಘದಿಂದ ಕೋವಿಡ್‌ 19 ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಛಾಯಾ ಗ್ರಾಹಕರಿಗೆ ಇತರೆ ವರ್ಗಕ್ಕೆ  ಘೋಷಿಸಿರುವಂತೆ ನಮಗೂ ಪರಿಹಾರ ಕೊಡಬೇಕೆಂದು ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next