Advertisement

“ಮಾವು ಬೆಳೆಗಾರರಿಗೆ ಹೊಸ ತಳಿ ಪರಿಚಯಿಸುವೆ’

01:18 PM Nov 28, 2020 | Suhan S |

ಚಿಕ್ಕಬಳ್ಳಾಪುರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಸಹಿತ ರಾಜ್ಯದ ಮಾವು ಬೆಳೆಗಾರರಿಗೆ ನೂತನತಳಿಗಳನ್ನು ಪರಿಚಯಿಸುವ ಮೂಲಕ ಉತ್ತಮ ಗುಣಮಟ್ಟದ ಮಾವು ಉತ್ಪಾದನೆ ಮತ್ತು ರಫ್ತು ಮಾಡಲು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲುಪ್ರಥಮ ಆದ್ಯತೆ ನೀಡುವುದಾಗಿ ರಾಜ್ಯ ಮಾವು ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಕೆ.ವಿ.ನಾಗರಾಜ್‌ ತಿಳಿಸಿದರು.

Advertisement

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಪೆರೇಸಂದ್ರ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್‌ ಅವರ ತಂದೆ ಕೇಶವರೆಡ್ಡಿ ಅವರಿಗೆ ಸಿಹಿ ತಿನ್ನಿಸಿ ಅಭಿನಂದಿಸಿದ ಬಳಿಕ ಉದಯವಾಣಿ ಯೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಸಚಿವ ಡಾ.ಕೆ. ಸುಧಾಕರ್‌ ಅವರ ಸಹಕಾರದಿಂದ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ಲಭಿಸಿದೆ.

ಸೌಲಭ್ಯ ಒದಗಿಸಲು ಆದ್ಯತೆ: ಕೋಚಿಮುಲ್‌ ಅಧ್ಯಕ್ಷ ರಾಗಿ ಉಭಯ ಜಿಲ್ಲೆಯ ರೈತರ ಸೇವೆ ಮಾಡಿದ್ದು, ನಿಗಮದಿಂದ ಮಾವು ಬೆಳೆಗಾರರಿಗೆ ವಿವಿಧ ರೀತಿಯಸಹಾಯಧನ, ಔಷಧ, ಗೊಬ್ಬರ ಇನ್ನಿತರೆ ಸೌಲಭ್ಯ ನೀಡಲಾಗುತ್ತಿದೆ ಎಂದು ಮಾಹಿತಿಯಿದ್ದು, ನಿಗಮದಲ್ಲಿರುವ ಸೌಲಭ್ಯಗಳ ಕುರಿತು ಅಧಿಕಾರಿಗಳೊಂದಿಗೆಸಮಾಲೋಚಿಸಿ ಹೆಚ್ಚಿನ ಸೌಲಭ್ಯ ಒದಗಿಸಲು ಆದ್ಯತೆ ನೀಡುವುದಾಗಿ ತಿಳಿಸಿದರು.

ಕೋಲ್ಡ್‌ ಸ್ಟೋರೇಜ್‌ ಸೆಂಟರ್‌: ಜಿಲ್ಲೆಯಲ್ಲಿ ಮಾವು ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಕರಣ ಘಟಕ ಮತ್ತು ಕೋಲ್ಡ್‌ ಸ್ಟೋರೇಜ್‌ ಸೆಂಟರ್‌ಗಳನ್ನು ತೆರೆಯಲು ಆದ್ಯತೆ ನೀಡುವ ಜೊತೆಗೆ ಮಾವು ಬೆಳೆಗಾರರು ಗುಣಮಟ್ಟದ ಮಾವು ಉತ್ಪಾದನೆ ಮಾಡಲು ನಿಗಮದಿಂದ ಸೌಲಭ್ಯ ಕಲ್ಪಿಸುವ ಜೊತೆಗೆ ಗ್ರಾಹಕರಿಗೆ ಉತ್ತಮ ಮಾವು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಮಾವಿನ ಹಣ್ಣಿನ ರಸದ ಕಾರ್ಖಾನೆ ತೆರೆಯಲು ಚಿಂತನೆ ನಡೆಸಿರುವುದಾಗಿ ತಿಳಿಸಿದರು.

ಕಿರು ಪರಿಚಯ: ಜಿಲ್ಲೆಯ ಕಣಜೇನಹಳ್ಳಿ ಗ್ರಾಪಂ ಸದಸ್ಯರಾಗಿ 1978 ರಿಂದ ರಾಜಕೀಯ ಜೀವನ ಆರಂಭಿಸಿದ ಕೆ.ವಿ.ನಾಗರಾಜ್‌ ಅವರು ಬಿಎಸ್ಸಿ ಪದವೀಧರರಾಗಿದ್ದು, ಕಣಜೇನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಮತ್ತು ಕೋಲಾರ ಚಿಕ್ಕಬಳ್ಳಾಪುರದ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಸುದೀರ್ಘ‌ ಸೇವೆ ಸಲ್ಲಿಸಿರುವ ಕೆ.ವಿ.ನಾಗರಾಜ್‌ ಅವರಿಗೆ ಸರ್ಕಾರ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಿದೆ. ಜೊತೆಗೆ ಇಂಡಿಯನ್‌ ವರ್ಚುವಲ್‌ ಅಕಾಡೆಮಿ ಪೀಸ್‌ ಅಂಡ್‌ ಎಜುಕೇಷನ್‌ ಸಂಸ್ಥೆಯವರು ಗೌರವ ಡಾಕ್ಟರೇಟ್‌ ಪ್ರಶಸ್ತಿ ನೀಡಿದ್ದಾರೆ.

Advertisement

ಅಧ್ಯಯನಕ್ಕಾಗಿ ವಿದೇಶ ಪ್ರವಾಸ :  ಕೋಚಿಮುಲ್‌ ನಿರ್ದೇಶಕ ಮತ್ತು ಅಧ್ಯಕ್ಷರಾಗಿ ಹೈನುಗಾರಿಕೆಕ್ಷೇತ್ರದಲ್ಲಿ ಅನುಭವಪಡೆದುಕೊಂಡಿದ್ದಾರೆ. ಇಸ್ರೇಲ್‌ ದೇಶದಲ್ಲಿ ಕೃಷಿ, ತೋಟಗಾರಿಕೆ, ಡೇರಿ ಮತ್ತು ನೀರಿನವ್ಯವಸ್ಥೆಕುರಿತು ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ. ಡೆನ್ಮಾರ್ಕ್‌, ನ್ಯೂಝಿಲೆಂಡ್‌, ಆಸ್ಟ್ರೇಲಿಯಾ, ಅಮೆರಿಕಾ ಮತ್ತು ಯುರೋಪ್‌ದೇಶಗಳಲ್ಲಿ ಆಧುನಿಕ ಹೈನುಗಾರಿಕೆ ಸೇರಿದಂತೆತಂತ್ರಜ್ಞಾನದಕುರಿತು ಅಧ್ಯಯನ ಪ್ರವಾಸ ನಡೆಸಿರುವ ಪ್ರಗತಿಪರ ರೈತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next