Advertisement

ದರ್ಗಾಜೋಗ ಹಳ್ಳಿ ಗ್ರಾಪಂಗೆ ನಾಗಭೂಷಣ್‌ ಅಧ್ಯಕ್ಷ

02:10 PM Sep 24, 2020 | Suhan S |

ದೊಡ್ಡಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿದ್ದ ತಾಲೂಕಿನ ದರ್ಗಾಜೋಗಹಳ್ಳಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಸದಸ್ಯ ಜೆ.ಎಸ್‌.ನಾಗಭೂಷಣ್‌ ಆಯ್ಕೆಯಾಗಿದ್ದಾರೆ.

Advertisement

ಎನ್‌.ಎಸ್‌.ನಟರಾಜ್‌ ಅಭ್ಯರ್ಥಿ ಎಂದೇ ಕಾಂಗ್ರೆಸ್‌ ವರಿಷ್ಠರು ಸೂಚನೆ ನೀಡಿದ್ದರು. ಆದರೆ ಕೊನೆಗಳಿಗೆಯ ರಾಜಕೀಯ ಬೆಳವಣಿಗೆಯಲ್ಲಿ ನಾಗೇಶ್‌ ಬೆಂಬಲಿತ ಸದಸ್ಯರು, ಸೆಡ್ಡು ಹೊಡೆದು ಜೆಡಿಎಸ್‌, ಬಿಜೆಪಿ ಸದಸ್ಯರ ನೆರವಿನೊಂದಿಗೆ ಜೆ.ಎಸ್‌.ನಾಗಭೂಷಣ್‌ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿಯಾಗಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್‌ ಸಮ್ಮುಖದಲ್ಲಿ 24 ಸದಸ್ಯರ ಬಲದ ಗ್ರಾಪಂಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆ.ಎಸ್‌.ನಾಗಭೂಷಣ್‌, ಎನ್‌.ಎಸ್‌.ನಟರಾಜ್‌, ಶಶಿಕಲಾ ನಾಗರಾಜ್‌ ನಾಮಪತ್ರ ಸಲ್ಲಿಸಿದ್ದರು. ಶಶಿಕಲಾ ನಾಗರಾಜ್‌ ನಾಮಪತ್ರ ಹಿಂಪಡೆದ ಕಾರಣ ನಂತರ ನಡೆದಚುನಾವಣಾಪ್ರಕ್ರಿಯೆಯಲ್ಲಿ ಜೆ.ಎಸ್‌.ನಾಗಭೂಷಣ್‌ 19, ಎನ್‌.ಎಸ್‌ .ನಟರಾಜ್‌ 5 ಮತ ಪಡೆದರು. ಈ ವೇಳೆ ಬೆಂಬಲಿಗರು ನಾಗಭೂಷಣ್‌ ಅವರನ್ನು ಅಭಿನಂದಿಸಿದರು.

………………………………………………………………………………………………………………………………………………………

ಮಠಕ್ಕೆ ಜಮೀನು: ಗೊಂದಲ ನಿವಾರಣೆ : ನೆಲಮಂಗಲ: ಸಿದ್ಧಗಂಗಾ ಮಠಕ್ಕೆ ಮಂಜೂರು ಮಾಡಲಾಗಿರುವ ತಾಲೂಕಿನ ಯಲಚಗೆರೆ ಗ್ರಾಮದ ಸರ್ವೆ ನಂ 74ರ 9.20 ಎಕರೆ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ತಹಶೀಲ್ದಾರ್‌ ಎಂ. ಶ್ರೀನಿವಾಸ್‌ ಜನರಲ್ಲಿದ್ದ ಗೊಂದಲ ನಿವಾರಿಸಿದರು.

Advertisement

ಗ್ರಾಮದ ಪರಿಶಿಷ್ಟ ಜಾತಿ, ಪಂಗಡ ಜನರಿಗೆ ನಿವೇಶನ, ರುದ್ರಭೂಮಿ ನೀಡುವಂತೆ ಮನವಿ ಮಾಡಿದ್ದರು. ‌ನಮಗೆ ಜಮೀನು ನೀಡದೇಮಠಕ್ಕೆ ನೀಡಿದ್ದಾರೆಎಂದು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಇದರ ಬಗ್ಗೆ ಬುಧವಾರ ಸ್ಥಳಕೆ R ಭೇಟಿ ನೀಡಿ ಬೇಡಿಕೆಯಂತೆ ಪ್ರತ್ಯೇಕ ಜಾಗ ನೀಡಲಾಗುತ್ತಿದೆ ಎಂದು ತಹಸೀಲ್ದಾರ್‌ ತಿಳಿಸಿದರು.

ಜನರು ಒಪ್ಪಿಗೆ: ಗ್ರಾಮದ ಜನರು ಮೃತರ ಅಂತ್ಯಕ್ರಿಯೆ ಮಾಡಿರುವ ಜಾಗ ಮಠಕ್ಕೆ ನೀಡಲಾಗಿದೆ ಎಂದು ವಿರೋಧ ವ್ಯಕ್ತಪಡಿಸಿದರು. ಆದರೆ ಅಳತೆ ಮಾಡಿದ ನಂತರ ಮಠಕ್ಕೆ ನೀಡಲಾಗಿರುವ ಜಾಗ ಸರ್ವೆ ನಂ 74ರಲ್ಲಿ ಇದ್ದು, ರುದ್ರಭೂಮಿ ಸರ್ವೆ ನಂ 75ರಲ್ಲಿ ಇದೆ. ಇದರ ಬಗ್ಗೆ ಗ್ರಾಮಸ್ಥರಲ್ಲಿ ಮನವಿ ಮಾಡಿ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ಮಠಕ್ಕೆ ಮಂಜೂರು ಮಾಡಿರುವ ಜಾಗದಲ್ಲಿ ಗ್ರಾಮಸ §ರು ಗುಡಿಸಲು ಹಾಕಿರುವುದನ್ನು ತೆರವು ಮಾಡಬೇಕು ಎಂದು ಸೂಚಿಸಲಾಗಿದ್ದು ಗ್ರಾಮಲೆಕ್ಕಾಧಿಕಾರಿಗೆ ತೆರವು ಮಾಡಿಸುವಂತೆ ಸೂಚನೆ ನೀಡಿದರು. ಗ್ರಾಮಕ್ಕೆ ನೀಡಿರುವ ಜಮೀನು ನಮಗೆಸಲ್ಲಬೇಕು, ತಹಶೀಲ್ದಾರ್‌ ಭರವಸೆ ನೀಡಿದ್ದಾರೆ. ಆದರೆ ಮಠಕ್ಕೆ ಜಮೀನು ನೀಡಿದರೆ ಗ್ರಾಮಸ್ಥರಿಗೆ ಉಳಿಯುವುದು ಅಲ್ಪ ಜಾಗ. ಹೀಗಾಗಿ ಭರವಸೆ ಮಣ್ಣಾಗದೇ ನಮ್ಮ ಬೇಡಿಕೆ ಪೂರೈಸಬೇಕು ಎಂದು ಗ್ರಾಮಸ್ಥ ಹನುಮಂತರಾಜು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next