Advertisement

Karnataka: ಪಟಾಕಿ ದುರಂತ ತಡೆಯಲು ಹೊಸ ನೀತಿ: ಡಿ.ಕೆ.ಶಿವಕುಮಾರ್‌

10:50 PM Oct 08, 2023 | Team Udayavani |

ಬೆಂಗಳೂರು: ಕರ್ನಾಟಕ-ತಮಿಳುನಾಡು ಗಡಿಭಾಗದ ಅತ್ತಿಬೆಲೆಯಲ್ಲಿ ಸಂಭವಿಸಿದ ಪಟಾಕಿ ಗೋದಾಮು ದುರಂತ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ಹಾಗೂ ರಾಜ್ಯ ಪೊಲೀಸ್‌, ಸುರಕ್ಷೆಗಾಗಿ ಹೊಸ ಕ್ರಮಗಳನ್ನು ಕೈಗೊಂಡಿವೆ.

Advertisement

ದಸರಾ-ದೀಪಾವಳಿ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಪಟಾಕಿ ಮಳಿಗೆಗಳು ಮತ್ತು ಗೋದಾಮುಗಳು ಹೆಚ್ಚಾಗಲಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಂದ ರಾಜ್ಯಾದ್ಯಂತ ಅವುಗಳ ಸುರಕ್ಷೆ ಬಗ್ಗೆ ಪರಿಶೀಲನೆಗೆ ಆರಂಭವಾಗಲಿದೆ. ಸರಕಾರವೂ ಹೊಸ ನೀತಿಗೆ ಸಿದ್ಧತೆ ನಡೆಸಿದೆ.

ಹೊಸ ನೀತಿ ನಿರೂಪಣೆಗೆ ಸಿದ್ಧತೆ
ರವಿವಾರ ಮುಖ್ಯಮಂತ್ರಿಗಳ ಜತೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ದೀಪಾವಳಿ-ದಸರಾ ಹಬ್ಬಗಳು ಹತ್ತಿರವಾಗುತ್ತಿರುವುದರಿಂದ ರಾಜ್ಯಾದ್ಯಂತ ಪಟಾಕಿಗಳನ್ನು ಸಂಗ್ರಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಟಾಕಿ ದುರಂತಗಳು ನಡೆಯದಂತೆ ಹೊಸ ನೀತಿಯನ್ನು ಜಾರಿಗೆ ತರಲಾಗುವುದು. ಪಟಾಕಿ ಗೋದಾಮುಗಳ ಸುರಕ್ಷೆಯನ್ನು ಪರಿಶೀಲಿಸಲು ಪೊಲೀಸ್‌ ಇಲಾಖೆ ಹಾಗೂ ಜಿÇÉಾಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ ರಾಜ್ಯದಲ್ಲಿರುವ ಪಟಾಕಿ ಗೋದಾಮುಗಳ ಸರ್ವೇ ನಡೆಸಲಾಗುವುದು ಎಂದು ಹೇಳಿದರು.

ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಆಲೋಕ್‌ ಮೋಹನ್‌ ಮಾತನಾಡಿ, ಪಟಾಕಿ ಗೋದಾಮಿಗೆ ಪರವಾನಿಗೆ ಕೊಟ್ಟಿರುವ ಇಲಾಖೆ ಅಧಿಕಾರಿಗಳು ಸಹಿತ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಭವಿಷ್ಯದಲ್ಲಿ ಇಂಥ ಘಟನೆಗಳು ನಡೆಯದಂತೆ ಇಲಾಖೆ ಎಚ್ಚರಿಕೆ ವಹಿಸಲಿದೆ. ಪ್ರತಿಯೊಂದು ಪಟಾಕಿ ಗೋದಾಮುಗಳಿಗೂ ಪೊಲೀಸರು ಭೇಟಿ ಪರಿಶೀಲಿಸಲಿದ್ದಾರೆ ಎಂದು ಹೇಳಿದರು.

35 ಮಂದಿ ಪೈಕಿ 14 ಮಂದಿ ಸಾವು
ಘಟನೆ ವೇಳೆ ಪಟಾಕಿ ಗೋದಾಮಿನಲ್ಲಿ 35 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಈ ಪೈಕಿ 14 ಮಂದಿ ಮೃತಪಟ್ಟಿದ್ದಾರೆ. ಇದು ನಿಜಕ್ಕೂ ದುರಂತ. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ಸಿಬಂದಿ ಸ್ಥಳಕ್ಕೆ ದೌಡಾಯಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿಯ ಜ್ವಾಲೆ ಅಕ್ಕಪಕ್ಕದ ಕಟ್ಟಡಗಳಿಗೆ ವ್ಯಾಪಿಸದಂತೆ ತಡೆದಿ¨ªಾರೆ. ಇಷ್ಟು ದೊಡ್ಡ ಮಟ್ಟದ ಅವಘಡಕ್ಕೆ ಕಾರಣ ಏನು ಎಂಬುದು ತನಿಖೆಯಿಂದಷ್ಟೇ ತಿಳಿದು ಬರಲಿದೆ. ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲ¿ ತಂಡ ಸ್ಥಳ ಪರಿಶೀಲಿಸಿದೆ. ಘಟನೆ ಸಂಬಂಧ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಡಿಜಿಪಿ ಆಲೋಕ್‌ ಮೋಹನ್‌ ಹೇಳಿದರು.

Advertisement

ಅತ್ತಿಬೆಲೆ ಪಟಾಕಿ ಘಟಕದ ದುರಂತದ ಬಗ್ಗೆ ತಿಳಿದು ನೋವುಂಟಾಗಿದೆ. ಘಟನೆಗೆ ಕಾರಣರಾದವರನ್ನು ರಾಜ್ಯ ಸರಕಾರ ಸುಮ್ಮನೆ ಬಿಡುವುದಿಲ್ಲ. ಜತೆಗೆ ಮುಂದೆ ಇಂಥ ದುರಂತಗಳು ನಡೆಯದಂತೆ ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗುವುದು.
– ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next