Advertisement

ದ್ವೇಷ ಭಾಷಣಕ್ಕೆ ಕಾನೂನು ಆಯೋಗದ ಹೊಸ ಪ್ಲಾಸ್ಟರ್‌!

03:50 AM Mar 25, 2017 | |

ಹೊಸದಿಲ್ಲಿ: “ದ್ವೇಷದ ಭಾಷಣ’ಕಾರರ ಬಾಯಿಗೆ ಹೊಲಿಗೆ ಹಾಕಲು ಕಾನೂನು ಆಯೋಗ ಎರಡು ಹೊಸ ಅಸ್ತ್ರಗಳನ್ನು ಕೇಂದ್ರ ಸರಕಾರದ ಮುಂದಿಟ್ಟಿದೆ. “ಅಪರಾಧ ಕಾನೂನು – 2017’ರ ತಿದ್ದುಪಡಿ ವರದಿ ಇದಾಗಿದ್ದು, 153 “ಸಿ’, 505 “ಎ’ ಕಲಂಗಳನ್ನು ಸೂಚಿಸಿದೆ. ಪ್ರಚೋದನಕಾರಿ ಮತ್ತು ಹಗೆತನ ಭಾಷಣಗಳನ್ನು ಅಪರಾಧವಾಗಿ ಪರಿಗಣಿಸಿ, 153 ಸಿ ಸೆಕ್ಷನ್‌ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದು. ಧರ್ಮ, ಜಾತಿ, ಲಿಂಗ, ಸಮುದಾಯ, ಭಾಷೆಗೆ ವಿರುದ್ಧವಾಗಿ ಮಾತಧಿನಾಡಿದರೆ ಅದು ಕಾನೂನಿಗೆ ವಿರುದ್ಧವಾಗುತ್ತದೆ. 2 ವರ್ಷ ಜೈಲು ಶಿಕ್ಷೆ, ಕನಿಷ್ಠ 5 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ. ಅಲ್ಲದೆ, ಪ್ರಚೋದನಾತ್ಮಕ ಹೇಳಿಕೆಗಳನ್ನು ಜಾಲತಾಣಗಳಲ್ಲಿ ಪ್ರಕಟಿಸಿ, ಸುಳ್ಳು ಹಬ್ಬಿಸುವಂತೆ ಮಾಡುವುದು ಕೂಡ ಅಪರಾಧವಾಗುತ್ತದೆ. 

Advertisement

505 ಎ ಕಲಂ ಅಡಿಯಲ್ಲಿ ಭಯ ಹುಟ್ಟಿಸುವ, ಎಚ್ಚರಿಕೆ ನೀಡುವ, ಹಿಂಸೆಗೆ ಪ್ರಚೋದಿಸುವ ಭಾಷಣಗಳನ್ನು ಅಪರಾಧ ಎಂದು ಪರಿಗಣಿಸಲು ಸಲಹೆ ನೀಡಿದೆ. ಪರ ವ್ಯಕ್ತಿಯ ವಿರುದ್ಧ ಉಗ್ರ ಪದಗಳ ಬಳಕೆ ಕೂಡ ಇಲ್ಲಿ ಅಪರಾಧ. ಈ ಅಪರಾಧ ಎಸಗುವವರು ಕನಿಷ್ಠ 1 ವರ್ಷ ಜೈಲು, 5 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next