Advertisement
ಅವರು ಶನಿವಾರ ಕೊಳಲಗಿರಿ ಚರ್ಚ್‌ನ ಸೌಹಾರ್ದ ಸಭಾಭವನದಲ್ಲಿ ಉಪ್ಪೂರು ಗ್ರಾಮ ಮಟ್ಟದ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭು ಗಳು. ಜನಪ್ರತಿನಿಧಿಗಳು, ಅಧಿಕಾರಿಗಳು ಅವರ ಸೇವೆಗಾಗಿ ಇರುವವರು ಎಂದರು.
ಮಾದರಿ ಕ್ಷೇತ್ರ: ಉಡುಪಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ದಾಖಲೆಯ 1,873 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾರ್ಯಕೈಗೊಳ್ಳಲಾಗಿದೆ. ತಾಂತ್ರಿಕ ಅಡಚಣೆ ಹೊರತುಪಡಿಸಿ ದಿನದ 24 ಗಂಟೆ ವಿದ್ಯುತ್ ದೊರೆಯುವ ಏಕೈಕ ಕ್ಷೇತ್ರವಿದ್ದರೆ ಅದು ಉಡುಪಿಯಾಗಿದೆ ಎಂದು ಸಚಿವ ಪ್ರಮೋದ್ ಹೇಳಿದರು.
Related Articles
ಉಡುಪಿ ಕ್ಷೇತ್ರದಲ್ಲಿ ನರ್ಮ್ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಚಿವರು ಹೇಳಿದರು.
Advertisement
ಉಪ್ಪೂರಿಗೆ ದಾಖಲೆ ಅನುದಾನ: ಉಪ್ಪೂರಿನಿಂದ ಮಣಿಪಾಲಕ್ಕೆ ಕೇವಲ 5 ನಿಮಿಷದಲ್ಲಿ ಸಂಪರ್ಕಕ್ಕೆ ಶೀಂಬ್ರ ಪರಾರಿ ಸೇತುವೆ ಅಂದಾಜು 10 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಳ್ಳು ತ್ತಿದೆ. ಜತೆಗೆ 43 ಕೋಟಿ ರೂ. ಅನುದಾನದಲ್ಲಿ ತಾಂತ್ರಿಕ ಶಿಕ್ಷಣದ ಕಾಲೇಜು ನಿರ್ಮಾಣ ಹಂತದಲ್ಲಿದೆ ಎಂದು ಸಚಿವ ಪ್ರಮೋದ್ ಹೇಳಿದರು.
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಲ್ಲಾ ಎಸ್‌ಪಿ ಡಾ| ಸಂಜೀವ ಎಂ. ಪಾಟೀಲ್, ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ, ವಿಶೇಷ ತಹಶೀಲ್ದಾರ್ ಪ್ರದೀಪ್ ಕುಡೇಕರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೋಹನ್‌ರಾಜ್, ಚರ್ಚ್ ಧರ್ಮ ಗುರುಗಳಾದ ವಂ| ಜೋಸೆಫ್ ರೋಡ್ರಿಗಸ್, ತಾ.ಪಂ. ಮಾಜಿ ಸದಸ್ಯ ಸಂಜೀವ ಪೂಜಾರಿ, ಪಂಚಾಯತ್ ಅಧ್ಯಕ್ಷೆ ಆರತಿ ಪೂಜಾರಿ ಉಪಸ್ಥಿತರಿದ್ದರು. ತಾ.ಪಂ. ಸದಸ್ಯ ದಿನಕರ ಹೇರೂರು ಸ್ವಾಗತಿಸಿ, ಪಿಡಿಒ ರಾಜೇಂದ್ರ ವಂದಿಸಿದರು. ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕರ್ಕೇರ ಪ್ರಸ್ತಾವನೆ ಗೈದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರ್ವಹಿಸಿದರು.
66 ಜನಸಂಪರ್ಕ ಸಭೆ ಪೂರ್ಣ: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರ ಸಭೆಯ ಎಲ್ಲ ವಾರ್ಡ್ ಹಾಗೂ ಎಲ್ಲ ಗ್ರಾಮಗಳಲ್ಲಿ ಜನಸಂಪರ್ಕ ಸಭೆ ಜರಗಿದೆ. ಇಲಾಖಾ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆಯಿಸಿ ಪ್ರತಿಯೊಬ್ಬರ ಅಹವಾಲನ್ನು ಸ್ವೀಕರಿಸಿ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹರಿಸುವ ಕಾರ್ಯಕ್ರಮ ಇದಾಗಿದೆ. ಉಪ್ಪೂರಿನಲ್ಲಿ ಕೊನೆಯದಾಗಿ 66ನೇ ಜನಸಂಪರ್ಕ ಸಭೆ ನಡೆಯಿತು.