Advertisement

ಕೃಷಿ ಕಾಯ್ದೆಯಿಂದ ರೈತರಿಗೆ ಹೊಸ ಅವಕಾಶ: ಮೋದಿ

07:28 AM Nov 30, 2020 | Suhan S |

ಹೊಸ ದಿಲ್ಲಿ : ರೈತರ “ದಿಲ್ಲಿ ಚಲೋ’ ಹೋರಾಟದ ಬಗ್ಗೆ ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಪರೋಕ್ಷ ಅನಿಸಿಕೆ ವ್ಯಕ್ತಪಡಿಸಿದ್ದಾರೆ. “ನೂತನ ಕೃಷಿ ಕಾಯ್ದೆ ರೈತರನ್ನು ಯಾವುದೇ ಕಾರಣಕ್ಕೂ ನಿಯಂತ್ರಿಸುವುದಿಲ್ಲ. ಬದಲಾಗಿ ರೈತರ ಮುಂದೆ ಹೊಸ ಹಕ್ಕು ಮತ್ತು ಅವಕಾಶಗಳನ್ನು ತೆರೆದಿಡಲಿದೆ’ ಎಂದು ತಿಳಿಸಿದ್ದಾರೆ. 71ನೇ “ಮನ್‌ ಕಿ ಬಾತ್‌’ನಲ್ಲಿ ಮಾತನಾಡಿದ ಅವರು, “ರೈತರ ಬಹಳ ವರ್ಷಗಳ ಬೇಡಿಕೆಗಳನ್ನು, ಪ್ರತಿಯೊಂದು ಪಕ್ಷಗಳೂ ರೈತರಿಗೆ ನೀಡಿದ್ದ ಭರವಸೆಗಳನ್ನು ನಾವು ಪೂರೈಸಿದ್ದೇವೆ. ಪ್ರಸ್ತುತ ನೂತನ ಕೃಷಿ ಕಾಯ್ದೆ ರೈತರಿಗೆ ಹಲವು ಸ್ವಾತಂತ್ರ್ಯಗಳನ್ನು ಒದಗಿಸಲಿದೆ’ ಎಂದು ಭರವಸೆ ನೀಡಿದ್ದಾರೆ.

Advertisement

“ಅತೀ ಕಡಿಮೆ ಸಮಯದಲ್ಲಿ ರೈತರ ಸಮಸ್ಯೆಗಳನ್ನು ನಿವಾರಿಸಲು ಕಾಯ್ದೆ ನೆರವಾಗಲಿದೆ. ಈಗಾಗಲೇ ಕಳೆದ ಕೆಲವು ದಿನಗಳಿಂದ ಹೊಸ ಅವಕಾಶಗಳ ಬಾಗಿಲನ್ನು ಕಾಯ್ದೆ ತೆರೆದಿಟ್ಟಿದೆ’ ಎಂದು ತಿಳಿ ಹೇಳಿದರು.

ಸಾಂಸ್ಕೃತಿಕ ರಾಯಭಾರಿಗಳು: ಮಕ್ಕಳಿಗೆ ಭಗವದ್ಗೀತೆ ಮತ್ತು ವೇದಗಳನ್ನು ಬೋಧಿಸುತ್ತಿರುವ ಬ್ರೆಜಿಲ್‌ ವ್ಯಕ್ತಿ ಜೋನಾಸ್‌ ಮಸೆಟ್ಟಿ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. “ಕೆಲವು ವಿದೇಶಿಗರು ನಮ್ಮ ಸಂಸ್ಕೃತಿ ಅಧ್ಯಯನಿಸಲು ಭಾರತಕ್ಕೆ ಆಗಮಿ ಸುತ್ತಾರೆ. ಅನಂತರ, ಇಲ್ಲಿಯೇ ನೆಲೆಸುತ್ತಾರೆ. ಮತ್ತೆ ಕೆಲವರು ತಮ್ಮ ದೇಶಗಳಿಗೆ ಮರಳಿ, ಭಾರತದ ಸಾಂಸ್ಕೃತಿಕ ರಾಯಭಾರಿ ಗಳಂತೆ ಕೆಲಸ ಮಾಡುತ್ತಾರೆ’ ಎಂದು ಶ್ಲಾ ಸಿದರು.

ಯಾರು ಜೋನಾಸ್‌ ಮಸೆಟ್ಟಿ?: ಇವರು ಬ್ರೆಜಿಲ್‌ನ ಮೆಕಾನಿಕಲ್‌ ಎಂಜಿನಿಯರ್‌. ಭಾರತೀಯ ಸಂಸ್ಕೃತಿಗೆ ಆಕರ್ಷಿತರಾಗಿ, ಕೊಯಂಬತ್ತೂರಿನ ಆರ್ಷ ವಿದ್ಯಾ ಗುರುಕುಲಂನಲ್ಲಿ 4 ವರ್ಷ ವೇದಾಂತ ಅಭ್ಯಸಿಸಿದ್ದರು. ಬಳಿಕ ತಮ್ಮ ದೇಶಕ್ಕೆ ಮರಳಿ ತಮ್ಮ ನೂರಾರು ಶಿಷ್ಯರಿಗೆ ಭಗವದ್ಗೀತೆ ಮತ್ತು ವೇದಗಳ ಪಾಠ ಹೇಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next