Advertisement

1 ಪುಟದ ಹೊಸ ITR ಪ್ರಕಟ: 2 ಲಕ್ಷ ಮೀರಿದ ಠೇವಣಿ ವಿವರ, ಆಧಾರ್‌ ಕಡ್ಡಾಯ

07:50 PM Mar 31, 2017 | udayavani editorial |

ಹೊಸದಿಲ್ಲಿ : ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ಒಂದು ಪುಟದ ಸರಳ ಅರ್ಜಿ ನಮೂನೆಯನ್ನು ಕೇಂದ್ರ ಸರಕಾರ ಇಂದು ಶುಕ್ರವಾರ ಅಧಿಸೂಚನೆ ಮೂಲಕ ಪ್ರಕಟಿಸಿದೆ. 

Advertisement

ನೋಟು ನಿಷೇಧದ ಬಳಿಕ ತಮ್ಮ ಖಾತೆಗೆ ಎರಡು ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತವನ್ನು ಜಮೆ ಮಾಡಿರುವವರು  ಆ ಬಗ್ಗೆ ವಿವರಣೆ ನೀಡುವುದನ್ನು ಮತ್ತು ಆಧಾರ್‌ ಕಾರ್ಡ್‌ ನಂಬರ್‌ ಕಾಣಿಸುವುದನ್ನು ಸರಕಾರ ಕಡ್ಡಾಯ ಮಾಡಿದೆ.

ಸರಕಾರ ಇಂದು ಪ್ರಕಟಿಸಿರುವ ಆದಾಯ ತೆರಿಗೆ ರಿಟರ್ನ್ ಫಾರ್ಮ್ 1 (ಸಹಜ್‌) ಈ ಹಿಂದಿನ ಏಳು ಪುಟಗಳ ಅರ್ಜಿಯನ್ನು ಬದಲಾಯಿಸಲಿದೆ. ಆದಾಯದಲ್ಲಿ ಕಳೆಯಬೇಕಿರುವ ಹಲವಾರು ಬಗೆಯ ಕಡಿತಗಳನ್ನು ಇದು ತೆಗೆದುಹಾಕಲಿದೆ. 

ತಿಂಗಳ ಸಂಬಳ, ವಸತಿ ಸೊತ್ತು ಹಾಗೂ ಬಡ್ಡಿಯ ಮೂಲಕ 50 ಲಕ್ಷ ರೂ.ವರೆಗೆ ಆದಾಯ ಪಡೆಯುವ ವ್ಯಕ್ತಿಗಳು ಸಹಜ್‌ ಅರ್ಜಿಯನ್ನು ಬಳಸಬಹುದಾಗಿದೆ.

ಪ್ರಕೃತ ಸಹಜ್‌ (ಐಟಿಆರ್‌1) ಅರ್ಜಿಯನ್ನು ತಿಂಗಳ ವೇತನ ಪಡೆಯುವ ನೌಕರರು ಮತ್ತು ಐಟಿಆರ್‌2 ಅರ್ಜಿಯನ್ನು ಔದ್ಯಮಿಕ ಆದಾಯವನ್ನು ಒಳಗೊಳ್ಳದ ಆದಾಯವಿರುವ ವ್ಯಕ್ತಿಗಳು ಮತ್ತು ಹಿಂದೂ ಅವಿಭಜಿತ ಕುಟುಂಬದವರು (ಎಚ್‌ಯುಎಫ್) ಬಳಸುತ್ತಿದ್ದಾರೆ. ಸರಕಾರ ಈಗ ಐಟಿಆರ್‌2 ಅರ್ಜಿಯನ್ನು ಈ ವರ್ಗದವರಿಗೆ ಮತ್ತು ವಿದೇಶದಲ್ಲಿ ಆಸ್ತಿಪಾಸ್ತಿ ಹೊಂದಿಲ್ಲದವರ ಬಳಕೆಯಿಂದ ತೆಗೆದು ಹಾಕಿದೆ. 

Advertisement

ಪಾನ್‌ ಹೊಂದಿರುವ 29 ಕೋಟಿ ಜನರ ಪೈಕಿ ಕೇವಲ 6 ಕೋಟಿ ಜನರು ಮಾತ್ರವೇ ಈಗ ಸರಕಾರಕ್ಕೆ ತೆರಿಗೆ ಪಾವತಿಸುತ್ತಿದ್ದಾರೆ. 

ಐಟಿಆರ್‌ 1ರ ಇ-ಫೈಲಿಂಗನ್ನು ಎಪ್ರಿಲ್‌ 1ರಿಂದಲೇ ಮಾಡಬಹುದಾಗಿದೆ. ಅಂತೆಯೇ ಜುಲೈ 31ರ ವರೆಗಿನ ಗಡುವಿನ ತನಕ ಐಟಿಆರ್‌ಗಳನ್ನು ಸಲ್ಲಿಸುವುದಕ್ಕೆ ಅವಕಾಶವಿದೆ. 

Advertisement

Udayavani is now on Telegram. Click here to join our channel and stay updated with the latest news.

Next