Advertisement

ಕೇಳದೇ ನಿಮಗೀಗ!

09:04 AM May 19, 2019 | Vishnu Das |

ನಗರದ ಯುವಕ ಯುವತಿಯರನ್ನು ವೀಕೆಂಡ್‌ಗಳನ್ನು ಬಹುತೇಕ ಆವರಿಸಿಕೊಳ್ಳುವುದು, ಒಂದೆಡೆ ಕಲೆತು ಆಪ್ತರೊಡನೆ ಖುಷಿ ಹಂಚಿಕೊಳ್ಳುವುದಕ್ಕೆ ವೇದಿಕೆಯಾಗಿರುವುದು ಸಂಗೀತ. ಅದರಲ್ಲೂ ಬಾಲಿವುಡ್‌ಗೆ ಪರ್ಯಾಯವಾದ ಸಮಕಾಲೀನ ಸಂಗೀತ. ಜನಪ್ರಿಯ ಸಂಗೀತಕ್ಕಿರುವಷ್ಟು ಸಂಖ್ಯೆಯ ಅಭಿಮಾನಿ ವರ್ಗ ಇವಕ್ಕಿಲ್ಲದಿದ್ದರೂ ತಮ್ಮದೇ ಆದ ಪ್ರಾಮುಖ್ಯತೆಯನ್ನು ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಸಂಪಾದಿಸಿರುವುದು ಈ ಮ್ಯೂಸಿಕ್‌ ಬ್ಯಾಂಡ್‌ಗಳ ಹೆಗ್ಗಳಿಕೆ.

Advertisement

ಭಾರತದ ಉದಯೋನ್ಮುಖ ಸಂಗೀತ ತಂಡಗಳು ಒಂದೆಡೆ ಸೇರಿ ಪ್ರದರ್ಶನ ನೀಡುತ್ತಿವೆ. ಬಡ್‌ ಎಕ್ಸ್‌ ಈ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದೆ. ಭಾರತದಲ್ಲಿ ಉದಯಿಸುತ್ತಿರುವ ವಿನೂತನ ಸಂಗೀತ ಪ್ರಕಾರ ಮತ್ತು ಸಂಗೀತ ತಂಡಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಡ್‌ಎಕ್ಸ್‌ ಭಾರತದಾದ್ಯಂತ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. “ಡಿರೆಲಿಕ್ಟ್$Õ’, ದಿ ಎಫ್16, ಪರ್ದಾಫ‌ಶ್‌, ಮೇಡಂ ಗಾಂಧಿ ಅವರ ಸಂಗೀತವನ್ನು ಆಸ್ವಾದಿಸಬಹುದು. ಪ್ರಖ್ಯಾತ ಇಂಗ್ಲೀಷ್‌ ಸಂಗೀತ ತಂಡಗಳಿಂದ ಪ್ರೇರಣೆ ಪಡೆದುಕೊಂಡಿದ್ದರ ಹೊರತಾಗಿ ತಮ್ಮದೇ ಪ್ರತ್ಯೇಕ ಶೈಲಿಯನ್ನು ಇವೆಲ್ಲಾ ಸಂಗೀತ ತಂಡಗಳು ಕಾಪಾಡಿಕೊಂಡು ಬಂದಿವೆ.

ಎಲ್ಲಿ?: ಗಿಲ್ಲೀಸ್‌ ರಿಡಿಫೈನ್‌x, 11 ಅಡಿ ರಸ್ತೆ, ಕೋರಮಂಗಲ
ಯಾವಾಗ?: ಮೇ 18, ರಾತ್ರಿ 8
ಪ್ರವೇಶ: bit.ly/2EbZUQL

Advertisement

Udayavani is now on Telegram. Click here to join our channel and stay updated with the latest news.

Next