ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಅವರು ರೈತರು ಬಿತ್ತನೆ ಮಾಡುತ್ತಿರುವುದನ್ನು ನೋಡಿ ತಾವೂ ಹೊಲಕ್ಕೆ ತೆರಳಿ ರೈತನ ಬಳಿ ಎತ್ತುಗಳ ಹಗ್ಗ ಪಡೆದು ಮೇಳಿ ಹಿಡಿದು ಕೂರಿಗೆ ಹೊಡೆಯುವ ಮೂಲಕ ತಮ್ಮ ಮೂಲ ಮೂಲ ವೃತ್ತಿಯನ್ನು ಮೆರೆದಿದ್ದಾರೆ. ಹಾಗೆಯೇ ಕಲಬುರಗಿ ಸಂಸದ ಡಾ| ಉಮೇಶ ಜಾಧವ್ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ, ಸ್ವತಃ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹೊಲದಲ್ಲಿ ಕೂರಿಗೆ ಹೊಡೆದ ಸಂಸದ ದೇವೇಂದ್ರಪ್ಪ
ಕೂಡ್ಲಿಗಿ: ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಅವರು ಹೊಲದಲ್ಲಿ ಕೂರಿಗೆ ಹೊಡೆದು ಬಿತ್ತನೆ ಮಾಡಿದ್ದಾರೆ. ಸಂಸದರು ಕೂರಿಗೆ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶುಕ್ರವಾರ ಸಂಸದರು ಅರಸೀಕೆರೆಯಿಂದ ಬಳ್ಳಾರಿಗೆ ತೆರಳುತ್ತಿದ್ದಾಗ ತಾಲೂಕಿನ ಗುಡೇಕೋಟೆಯ ರಸ್ತೆ ಪಕ್ಕದ ಹೊಲದಲ್ಲಿ ರೈತರು ಬಿತ್ತನೆ ಮಾಡುತ್ತಿರುವುದನ್ನು ನೋಡಿದ್ದಾರೆ. ತಕ್ಷಣ ಕಾರು ನಿಲ್ಲಿಸಿ ಹೊಲಕ್ಕೆ ಹೋದ ದೇವೇಂದ್ರಪ್ಪ ರೈತರ ಬಳಿ ಮಾತನಾಡಿದ್ದಾರೆ.
ನಂತರ ರೈತನ ಬಳಿ ಎತ್ತುಗಳ ಹಗ್ಗ ಪಡೆದು ಮೇಳಿ ಹಿಡಿದು ಕೂರಿಗೆಯನ್ನು ಮುಂದೆ ಹೊಡೆದಿದ್ದಾರೆ. ಯಾವುದೇ ಕಾರಣಕ್ಕೂ ಕೂರಿಗೆ ಸಾಲು ಬಿಡದಂತೆ ಎತ್ತುಗಳನ್ನು ನಿಯಂತ್ರಿಸಿ ತಾವೊಬ್ಬ ಅಪ್ಪಟ ರೈತನ ಮಗ ಎಂಬುದನ್ನು ಸಾಬೀತು ಮಾಡಿದ್ದಾರೆ. ಅಲ್ಲಿದ್ದ ರೈತರು ದೇವೇಂದ್ರಪ್ಪ ಕೂರಿಗೆ ಹೊಡೆಯುವುದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.ಪ್ಪ.