ನವ ದೆಹಲಿ : ಬ್ಯಾಂಕಿಂಗ್ ವಂಚನೆ ಹೊಸತೇನಲ್ಲ. ಸೈಬರ್ ಹ್ಯಾಕರ್ಸ್ ಎಲ್ಲಿ ಯಾವ ಮಾರ್ಗದಲ್ಲಿ ಖಾತೆದಾರರ ಹಣ ಲಪಟಾಯಿಸಲು ಸಾಧ್ಯವಿದೆ ಎಂದು ಸಂಚು ಗೂಡುತ್ತಲೇ ಇರುತ್ತಾರೆ.
ಹೌದು, ಡಿಜಿಟಲೀಕರಣದ ಒಂದು ದುರಂತವೂ ಹೌದು ಇದು. ಬ್ಯಾಂಕಿಂಗ್ ವಂಚನೆಗೆ ಮೆಸೇಜ್, ಫೇಕ್ ಕಾಲ್ ಗಳ ಮೂಲಕ ಒಂದಾದರೇ, ಎಟಿಎಂ ಗಳಿಂದಲೇ ಹಣ ಲಪಟಾಯಿಸಲು ಸೈಬರ್ ಅಪರಾಧಿಗಳು ಸಂಚು ರೂಪಿಸುತ್ತಿರುವುದು ಈಗ ಬೆಳಕಿಗೆ ಬಂದಿದೆ.
ಇದನ್ನು ತಡೆಗಟ್ಟಲು ನೆಟ್ ವರ್ಕ್ ನಲ್ಲಿ ಎಂಡ್ ಟು ಎಂಡ್ ಎನ್ ಕ್ರಿಪ್ಷನ್ ವ್ಯವಸ್ಥೆಯ ಮೂಲಕ ಎಟಿಎಂಗಳಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವಂತೆ ಎಲ್ಲಾ ಬ್ಯಾಂಕ್ ಗಳಿಗೂ ಸರ್ಕಾರ ಸೂಚನೆ ನೀಡಿರುವುದಾಗಿ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದನ್ನು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಓದಿ : ಭಾರತ: ಕಳೆದ 24ಗಂಟೆಗಳಲ್ಲಿ ದಾಖಲೆಯ 3.14 ಲಕ್ಷ ಕೋವಿಡ್ ಸೋಂಕು ಪ್ರಕರಣ ಪತ್ತೆ
ಸೈಬರ್ ಹ್ಯಾಕರ್ಸ್ ಎಟಿಎಂಗಳಿಂದ ಹಣ ಪಡೆಯಲು ಹೊಸ ತರಹದ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಎನ್ನುವುದು ಸುರಕ್ಷತಾ ಏಜೆನ್ಸಿಗಳು ನಡೆಸಿರುವ ತನಿಖೆಯಿಂದ ತಿಳಿದುಬಂದಿದ್ದು, ವಂಚಕರು ಮೊದಲು ಎಟಿಎಂನ ನೆಟ್ ವರ್ಕ್ (ಲ್ಯಾನ್) ಕೇಬಲ್ ನನ್ನು ಬದಲಿಸುತ್ತಾರೆ. ಹೀಗೆ ಮಾಡಿ, ಎಟಿಎಂ ಸ್ವಿಚ್ ನಿಂದ ಹೊರಡುವ ‘ಹಣ ಕೊಡಲು ನಿರಾಕರಿಸುವ’ಸಂದೇಶಗಳನ್ನೇ ಬದಲಾಯಿಸಿ, ಅವು ‘ಹಣ ನೀಡುವ ಸಂದೇಶ’ವಾಗಿ ಬದಲಾಗುವಂತೆ ಮಾಡಿ ಅಕ್ರಮವಾಗಿ ಹಣ ಪಡೆಯುತ್ತಿರುವುದು ಸುರಕ್ಷತಾ ಏಜನ್ಸಿಗಳು ಮಾಡಿರುವ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಹ್ಯಾಕರ್ಸ್ ಎಟಿಎಂ ಯಂತ್ರ ಇರುವ ಜಾಗದಲ್ಲಿನ ರೂಟರ್ ಅಥವಾ ಸ್ವಿಚ್ ಮಧ್ಯೆ ಒಂದು ಸಾಧನವನ್ನು ಜೋಡಿಸುತ್ತಾರೆ. ನೆಟ್‌ವರ್ಕ್ ಮೂಲಕ ಎಟಿಎಂಗೆ ಸಂಪರ್ಕ ಹೊಂದಿರುವ ಅಧಿಕೃತ ಎಟಿಎಂ ಸ್ವಿಚ್ ನಿಂದ ಪ್ರತಿಕ್ರಿಯೆಗಳನ್ನು ಮಾರ್ಪಡಿಸುವ ಸಾಮರ್ಥ್ಯವನ್ನು ಈ ಸಾಧನ ಹೊಂದಿರುತ್ತದೆ. ಬಳಿಕ ವಂಚಕರು ಬ್ಲಾಕ್ ಆಗಿರುವ ಕಾರ್ಡ್ ಗಳನ್ನು ಬಳಸಿ ಎಟಿಎಂನಲ್ಲಿ ಹಣ ಪಡೆಯುವ ಪ್ರಕ್ರಿಯೆ ನಡೆಸುತ್ತಾರೆ. ಆಗ ಎಟಿಎಂ ಅದನ್ನು ನಿರಾಕರಿಸುತ್ತದೆ. ಆಗ ಈ ಸಾಧನದ ಮೂಲಕ ವಂಚಕರು ಹಣ ಪಡೆಯಲು ಅನುಮತಿ ನೀಡುವಂತೆ ಸಂದೇಶವನ್ನು ಮಾರ್ಪಡಿಸಿ, ಹಣ ದೋಚುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಓದಿ : ಕೋವಿಡ್ ಸೋಂಕು ನಿಯಂತ್ರಣಕ್ಕೆ ‘ಸ್ಮಾರ್ಟ್ ಲಾಕ್ ಡೌನ್’ ನತ್ತ ಪಾಕಿಸ್ತಾನ ಚಿತ್ತ..?!