Advertisement

ಹೊಸ ಮಾದರಿ ವಿದ್ಯುತ್‌ ಚಾಲಿತ್‌ ಬೈಕ್‌

02:55 PM Jun 19, 2018 | |

ಬೀದರ: ನಗರ ಹೊರವಲಯದ ಲಿಂಗರಾಜ ಅಪ್ಪಾ ಎಂಜನಿಯರಿಂಗ್‌ ಕಾಲೇಜಿನ ಎಲೆಕ್ಟ್ರಿಕಲ್‌ ವಿಭಾಗದ
ವಿದ್ಯಾರ್ಥಿಗಳು ಬ್ಯಾಟರಿ ಮತ್ತು ಇನ್ವೇಟರ್‌ ಮೂಲಕ ಬೈಕ್‌ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಈ ಮೊದಲು ಮಾರುಕಟ್ಟೆಯಲ್ಲಿ ವಿದ್ಯುತ್‌ ಚಾಲಿತ್‌ ಬೈಕ್‌ ಬಂದಿದ್ದು, ಅವು 6 ಗಂಟೆ ಜಾರ್ಜ್‌ ಮಾಡಿದರೆ,
ಕೇವಲ 50  ಕಿ.ಮೀ. ಕ್ರಮಿಸುವಶಕ್ತಿ ಹೊಂದಿದ್ದವು. ಆದರೆ ಹೊಸ ತಂತ್ರಜ್ಞಾನದಿಂದ ಇಲ್ಲಿನ ವಿದ್ಯಾರ್ಥಿಗಳು ತಯಾರಿಸಿದ ಈ ಬೈಕ್‌ ಸರಾಸರಿ 100 ಕಿ.ಮೀ. ಸಂಚರಿಸುವ ಶಕ್ತಿ ಹೊಂದಿದ್ದು, ಯಶಸ್ವಿ ಪ್ರಯೋಗದಿಂದ ಗೊತ್ತಾಗಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.

ಎಲೆಕ್ಟ್ರಿಕಲ್‌ ವಿಭಾಗದ ಮುಖ್ಯಸ್ಥ ಸತೀಶ ಪಾಟೀಲ ಹಾಗೂ ಸಹಾಯಕ ಪ್ರಾಧ್ಯಾಪಕ ದೇವಣಿ ನಾಗರಾಜ ಅವರ ಮಾರ್ಗದರ್ಶನದ ಮೇರೆಗೆ ಕಾಲೇಜಿನ ವಿದ್ಯಾರ್ಥಿಗಳಾದ ಶರಣುಲಿಂಗ್‌, ದತ್ತಾತ್ರಿ, ಲೂಸಿ, ಕೃಷ್ಣ ಓಂಕಾರ, ಸುಧಾರಾಣಿ, ಅವಿನಾಶ ಔರಾದಕರ್‌ ಸಂಶೋಧನೆ ನಡೆಸಿ ಯಶಸ್ವಿಯಾಗಿದ್ದಾರೆ. ಇವರ ಸಾಧನೆಗೆ ಕಾಲೇಜಿನ ವಿಭಾಗದ ಮುಖ್ಯಸ್ಥರು, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next