Advertisement
ಸೈಬರ್ ಕೆಫೆಗಳಲ್ಲಿ ಅಥವಾ ಬೇರೊಬ್ಬರ ಮೊಬೈಲ್ ಫೋನ್ ಗಳಲ್ಲಿ ಒಂದು ವೇಳೆ ನೀವು ನಿಮ್ಮ ಫೇಸ್ ಬುಕ್ ಅಕೌಂಟ್ ಅನ್ನು ಲಾಗ್ ಇನ್ ಮಾಡಿ ಲಾಗ್ ಔಟ್ ಮಾಡುವುದನ್ನು ಮರೆತಿದ್ದರೆ ಇನ್ನೊಬ್ಬ ವ್ಯಕ್ತಿ ನಿಮ್ಮ ಅಕೌಂಟ್ ಅನ್ನು ಬಳಸುವ ಸಾದ್ಯತೆ ಹೆಚ್ಚು. ಅಂತಹ ಸಮಯದಲ್ಲಿ ನಿಮ್ಮ ಅಕೌಂಟ್ ಅನ್ನು ಯಾರು ಬಳಸುತ್ತಿದ್ದಾರೆ ಎಂದು ತಿಳಿದುಕೊಳ್ಳುವುದರೊಂದಿಗೆ, ನಿಮ್ಮ ಅಕೌಂಟ್ ಅನ್ನು ಅವರು ಬಳಸದಂತೆ ಲಾಗ್ ಔಟ್ ಮಾಡಬಹುದಾಗಿದೆ.
Related Articles
Advertisement
ಮೊದಲಿಗೆ ಬ್ರೌಸರ್ ನಲ್ಲಿ ನಿಮ್ಮ ಫೇಸ್ ಬುಕ್ ಅಕೌಂಟ್ ಅನ್ನು ಲಾಗ್ ಇನ್ ಮಾಡಿಕೊಳ್ಳಿ. ನಂತರ ಅಲ್ಲಿ ಕಾಣುವ ಸೆಟ್ಟಿಂಗ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆ ಬಳಿಕ ನಿಮ್ಮ ಕಂಪ್ಯೂಟರ್ ಪರದೆಯ ಬದಿಯಲ್ಲಿ ಕಾಣುವ Security and login ಆಯ್ಕೆಯ ಮೇಲೆ ಕ್ಲಿಕ್ ಮಾಡಿ . ಆಗ Where you’re logged in ಎಂಬ ಆಯ್ಕೆಯನ್ನು ಕಾಣಬಹುದಾಗಿದೆ. ಇಲ್ಲಿ ನಿಮ್ಮ ಫೇಸ್ ಬುಕ್ ಅಕೌಂಟ್ ಯಾವೆಲ್ಲಾ ಡಿವೈಸ್ ಗಳಲ್ಲಿ ಲಾಗ್ ಇನ್ ಆಗಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಆಗ ನೀವು ಅವುಗಳಲ್ಲಿ ಯಾವ ಡಿವೈಸ್ ನಲ್ಲಿ ನಿಮ್ಮ ಫೆಸ್ ಬುಕ್ ಲಾಗ್ ಔಟ್ ಆಗಬೇಕಿದೆ ಎಂದು ಗುರುತಿಸಿ ಲಾಗ್ ಔಟ್ ಮಾಡಬಹುದು.
ಮೊಬೈಲ್ ಪೋನ್ ಮೂಲಕ ತಿಳಿಯಲು ಈ ವಿಧಾನವನ್ನು ಪಾಲಿಸಿ
ಮೊದಲು ನಿಮ್ಮ ಮೊಬೈಲ್ ಪೋನ್ ನಲ್ಲಿ ಫೇಸ್ ಬುಕ್ ಓಪನ್ ಮಾಡಿಕೊಳ್ಳಿ . ಬಳಿಕ ಸೆಟ್ಟಿಂಗ್ ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ ನಿಮಗೆ ಕಾಣಸಿಗುವ Security and login ಆಯ್ಕೆಯನ್ನು ಕ್ಲಿಕ್ ಮಾಡಿದಾಗ Where you’re logged in ಎಂಬ ಆಯ್ಕೆ ಕಾಣಿಸುತ್ತದೆ. ಅಲ್ಲಿ ಯಾವ ಯಾವ ಡಿವೈಸ್ ಗಳಲ್ಲಿ ನಿಮ್ಮ ಫೇಸ್ ಬುಕ್ ಲಾಗ್ ಇನ್ ಆಗಿದೆ ಎಂಬುವುದು ತಿಳಿಯುತ್ತದೆ. ಆಗ ನೀವು ಲಾಗ್ ಆಫ್ ಮಾಡಬೇಕಾಗಿರುವ ಡಿವೈಸ್ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಫೆಸ್ ಬುಕ್ ಅಕೌಂಟ್ ಅನ್ನು ಲಾಗ್ ಔಟ್ ಮಾಡಬಹುದಾಗಿದೆ.