Advertisement
ಕರ್ನಾಟಕದ ಮಂತ್ರಿಮಂಡಲಕ್ಕೆ ನೂತನ ಸಚಿವರ ಇನ್ನೊಂದು ತಂಡ ಬಂದು ಸೇರಿಕೊಂಡಿದೆ. ಕಾಂಗ್ರೆಸ್‌ನ ವಿರುದ್ಧ ಬಂಡೆದ್ದು ಮುಂದೆ, “ಪ್ರಸ್ತುತ ವಿಧಾನಸಭೆಯ ಅವಧಿ ಮುಗಿಯುವ ತನಕ ಇವರೆಲ್ಲ ಅನರ್ಹರು’ ಎಂಬುದಾಗಿ ಘೋಷಿಸಲ್ಪಟ್ಟು ಸದನದಿಂದ ಹೊರಹಾಕಲ್ಪಟ್ಟಿದ್ದ ಶಾಸಕರು ಇದೀಗ ಇನ್ನೊಂದು ಪಕ್ಷದ ಅಭ್ಯರ್ಥಿಗಳಾಗಿ ಉಪಚುನಾವಣೆ ಎದುರಿಸಿ ಸಚಿವರಾಗಿ ನಮ್ಮೆದುರು ಬಂದಿದ್ದಾರೆ.
Related Articles
Advertisement
ಹಿಂದಿನ ಕಾಲದಲ್ಲಿದ್ದ ಸಚಿವರ ನೇಮಕಾತಿಯ ಮಾನದಂಡದ ಬಗ್ಗೆ ಹೇಳುವುದಾದರೆ, ಅಂದಿನ ಮಾಜಿ ಅನರ್ಹ ಶಾಸಕರು ಕೇವಲ ಉಪಸಚಿವರೋ, ಹೆಚ್ಚೆಂದರೆ ಸಹಾಯಕ ಸಚಿವರೋ ಆಗಬಹು ದಿತ್ತಷ್ಟೇ. ಶ್ರೀಗಂಧದ ಮರದ ಬಾಗಿಲಿರುವ ವಿಧಾನ ಸೌಧದ ಕ್ಯಾಬಿನೆಟ್ ಕೊಠಡಿಗೆ ಪ್ರವೇಶಿಸುವ ಅರ್ಹತೆ ಅವರಿಗಿರಲಿಲ್ಲ. ಇಂದು ಶ್ರೀಗಂಧದ ಬಾಗಿಲ ಪರಿಮಳ ಆರಿಹೋಗಿದೆ; ಅದೇ ರೀತಿ ಸರ್ವೇಸಾಮಾನ್ಯವಾಗಿ ನಮ್ಮ ಸಚಿವರುಗಳ ಸಾಮರ್ಥ್ಯ ವರ್ಚಸ್ಸಿಗೂ ಅದೇ ಗತಿ ಬಂದಿದೆ. ಈ ಶ್ರೀಗಂಧ ದ್ವಾರದ ಸುವಾಸನೆ ಯನ್ನು ಆಘ್ರಾಣಿಸಲೆಂದೇ ಗ್ರೀಕ್ ಪ್ರವಾಸಿಯೊಬ್ಬರು ವಿಧಾನಸೌಧಕ್ಕೆ ಭೇಟಿ ನೀಡಿದ್ದನ್ನು ನಾನು ನೋಡಿದ್ದೇನೆ. ಅದೃಷ್ಟವಶಾತ್ ಇಂದು ಸೇರ್ಪಡೆಗೊಂಡಿರುವ ನೂತನ ಸಚಿವರುಗಳು ತಮ್ಮನ್ನು ಉಪಮುಖ್ಯಮಂತ್ರಿಯನ್ನಾಗಿಸಬೇಕೆಂದು ಹಕ್ಕು ಸಾಧಿಸಿಲ್ಲ!
ದುರದೃಷ್ಟದ ಮಾತೆಂದರೆ ಅನರ್ಹ ಶಾಸಕರಲ್ಲೊಬ್ಬರಾದ ಎ.ಎಚ್.ವಿಶ್ವನಾಥ್ ಉಪಚುನಾವಣೆಯಲ್ಲಿ ಗೆಲವು ಸಾಧಿಸದಿರುವುದು. ಸಂಪುಟ ಸೇರಲು ಬೇಕಾದ ಅರ್ಹತೆಯುಳ್ಳವರು ಅವರು. ಆದರೆ ಸೋಲು ಅನುಭವಿಸಿರುವ ಎಂ.ಟಿ.ಬಿ. ನಾಗರಾಜ್ ಅವರ ಮಂತ್ರಿಗಿರಿಯ ಹಕ್ಕು ಸಾಧನೆಯ ಬಗ್ಗೆ ಇದೇ ಮಾತನ್ನು ಹೇಳುವ ಹಾಗಿಲ್ಲ. ಒಂದು ವೇಳೆ ತಾನು ಮಂತ್ರಿಯಾಗಬೇಕಿದ್ದರೆ ತನ್ನಲ್ಲಿರುವ ರೋಲ್ಸ್ ರಾಯ್ಸ ಕಾರನ್ನು ತನ್ನ ಗ್ಯಾರೇಜಿನಲ್ಲೇ ಬಿಟ್ಟು ಬಡಪಾಯಿ ಮಾದರಿಯ ಅಧಿಕೃತ ಕಾರಿಗೆ ತನ್ನನ್ನು ಸೀಮಿತಗೊಳಿಸಿಕೊಳ್ಳಬೇಕೆಂಬ ವಾಸ್ತವವನ್ನು ಅವರು ಅರ್ಥಮಾಡಿಕೊಳ್ಳಬೇಕಾಗಿದೆ. ಒಂದು ವೇಳೆ ಅವರಿಗೆ ಮಂತ್ರಿಪದವಿ ದೊರೆತಿದ್ದಲ್ಲಿ ಅವರು ಮಹಾರಾಜ ಜಯಚಾಮರಾಜ ಒಡೆಯರು ಮೈಸೂರಿನ ಗವರ್ನರು ಆಗಿದ್ದ ಕಾಲದಲ್ಲಿ ತಮ್ಮ ರೋಲ್ಸ್‌ರಾಯ್ಸಗಳು ಡೆಮೈಲರ್‌ಗಳು ಅಥವಾ ಬೆಂಟಿÉಗಳನ್ನು ಬಳಸುತ್ತಿದ್ದ ರೀತಿಯಲ್ಲೇ ಖಾಸಗಿ ಕಾರನ್ನು ಬಳಸುವುದಕ್ಕೆ ಅವಕಾಶ ನೀಡಲಾಗುತ್ತಿತ್ತೋ ಏನೋ! ಇದೇ ರೀತಿ ತಮ್ಮ ಸಂಪತ್ತನ್ನು ದೊಡ್ಡ ರೀತಿಯಲ್ಲಿ ಪ್ರದರ್ಶಿಸುತ್ತಿದ್ದ ಇನ್ನೊಬ್ಬ ಮಾಜಿ ಸಚಿವರು ಬಿಜೆಪಿಯಲ್ಲಿದ್ದಾರೆ. ಅವರೇ, ಸ್ವರ್ಣ ಸಿಂಹಾಸನ, ಚಿನ್ನದ ಬೆಲ್ಟ್, ಹೊಂದಿದ್ದರೆನ್ನಲಾದ, ಹಕ್ಕಿಗಳಿಗಿಂತಲೂ ಹೆಚ್ಚು ಬಾರಿ ಖಾಸಗಿ ಹೆಲಿಕಾಪ್ಟರ್‌ನಲ್ಲಿ ಆಕಾಶದಲ್ಲಿ ಹಾರುತ್ತ ಸುದ್ದಿ ಮಾಡಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ.
ಹೊಸಬರಿಗೆ ಪ್ರಾತಿನಿಧ್ಯ ನೀಡಿರುವುದಕ್ಕಾಗಿ “ಮೂಲ ಬಿಜೆಪಿ’ ಶಾಸಕರಿಗೆ ಬೇಸರವಾಗಿರುವುದು ತೀರಾ ಸಹಜವೇ ಆಗಿದೆ. ದಿಲ್ಲಿ ಕೇಂದ್ರಿತ ಬಿಜೆಪಿ ನಾಯಕರಾಗಲಿ, ಮುಖ್ಯಮಂತ್ರಿಯಾಗಲಿ ಈ ಮೂಲ ಶಾಸಕರನ್ನು ಗಣನೆಗೇ ತೆಗೆದುಕೊಳ್ಳುತ್ತಿಲ್ಲ.
ಪ್ರವೀಣ್ ಸೂದ್ ಸೇವಾವಧಿ ಉಳಿದವರಿಗಿಂತ ದೀರ್ಘವೇ?ಇನ್ನು, ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡಿರುವ ಪ್ರವೀಣ್ ಸೂದ್ ಅವರು 2024ರ ಮೇವರೆಗೆ ಅಂದರೆ 51 ತಿಂಗಳ ಕಾಲ ಈ ಹುದ್ದೆಯಲ್ಲಿರುತ್ತಾರೆಂದೂ, ಈ ಮೂಲಕ ಅವರ ಸೇವಾವಧಿ ಅತ್ಯಂತ ದೀರ್ಘವಾದುದೆಂದೂ ಅನೇಕ ವಾರ್ತಾಪತ್ರಿಕೆಗಳು, ಅಷ್ಟೇಕೆ ಟೆಲಿವಿಜನ್ ವಾಹಿನಿಗಳು ಕೂಡ ಹೇಳಿವೆ. ಆದರೆ ಇದು ತಪ್ಪು ಮಾಹಿತಿ. ಈ ಹಿಂದೆ, ಎಸ್.ಎನ್. ಹೊಸಾಳಿ (ಈಗ ದಿವಂಗತರು) ಅವರು 1958ರ ಡಿಸೆಂಬರ್‌ನಿಂದ 12 ವರ್ಷ ಏಳು ತಿಂಗಳ ಕಾಲ ಪೊಲೀಸ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯದ ಇನ್ನೋರ್ವ ಪೊಲೀಸ್ ಮುಖ್ಯಸ್ಥ 1972ರ ಜೂನ್‌ನಿಂದ 52 ತಿಂಗಳ ಕಾಲ ಈ ಹುದ್ದೆಯಲ್ಲಿದ್ದರು. ಅಂದಿನ ದಿನಗಳ ಪೊಲೀಸ್ ಮುಖ್ಯಸ್ಥರು ಇದ್ದುದು ಇನ್‌ಸ್ಪೆಕ್ಟರ್ ಜನರಲ್ ಹುದ್ದೆಯಲ್ಲಿ ಎಂದೇನೋ ಕೆಲವರು ವಾದಿಸಬಹುದು. 1980ರ ದಶಕದ ಆದಿಯಲ್ಲಿ ಈ ಹುದ್ದೆಯನ್ನು ಉನ್ನತೀಕರಿಸಿ ಡಿಜಿ – ಡಿಐಜಿ ಎಂಬ ಹೆಸರನ್ನು ನೀಡಲಾಯಿತು. ಸ್ವಾತಂತ್ರ್ಯಪೂರ್ವದ ಬ್ರಿಟಿಷ್ ಪೊಲೀಸ್ ಇಲಾಖೆಯಲ್ಲಿದ್ದ ಎಸ್.ಎನ್. ಹೊಸಾಳಿ, ಅದಕ್ಕೆ ಮುನ್ನ ಬಾಂಬೆ ಪ್ರಾಂತ್ಯದ ಪೊಲೀಸ್ ಪಡೆಯಲ್ಲಿದ್ದರು. ರಾಜ್ಯದ ಪೊಲೀಸ್ ವ್ಯವಸ್ಥೆಯ ಆಧುನೀಕರಣ ಪ್ರಕ್ರಿಯೆಗೆ ಕಾರಣರಾದವರು ಸಿ.ವಿ.ಎಸ್. ರಾವ್. ಅವರೇ ಪೊಲೀಸ್ ಕಾನ್‌ಸ್ಟೆàಬಲ್‌ಗಳ ಸಮವಸ್ತ್ರದ ವಿನ್ಯಾಸವನ್ನು ಬದಲಿಸಿ ಇದಕ್ಕೆ ಮುಂಚಿನ ದಿನಗಳಲ್ಲಿ ಕಾನ್‌ಸ್ಟೆàಬಲ್‌ಗಳು ನಿಕ್ಕರ್ ಟ್ಯುನಿಕ್ (ಮಂಡಿ ತನಕ ಬರುವ ಮೋಟು ತೋಳಿನ ಜುಬ್ಬ/ಕಪನಿ) ಹಾಗೂ ಪೇಟದಂತೆ ಕಾಣುವ ಟೋಪಿಯನ್ನು ಧರಿಸುತ್ತಿದ್ದರು. ಬೆಂಗಳೂರಿನ ಪೊಲೀಸ್ ಆಯುಕ್ತರಾಗಿದ್ದ ಎ.ಆರ್. ನಿಜಾಮುದ್ದೀನ್ ಅವರು ನಗರದ ಕಾನ್‌ಸ್ಟೆàಬಲ್‌ಗಳ ಸಮವಸ್ತ್ರವನ್ನು ಬ್ರಿಟಿಷ್ ಸೈನಿಕರ ಸಮವಸ್ತ್ರದಂತೆ ಮಾರ್ಪಡಿಸಿ ಚಾಲ್ತಿಯಲ್ಲಿ ತಂದರು. ಆದರೆ ಇದು ಹೆಚ್ಚು ಕಾಲ ಉಳಿಯಲಿಲ್ಲ. ನಿಜಾಮುದ್ದೀನ್ ಅವರು ಸಮವಸ್ತ್ರದಲ್ಲಿದ್ದ ಓರ್ವ ಧೀಮಂತ; ಅವರು ಮುಂದೆ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾ ನಿರೀಕ್ಷಕ (ಡಿಜಿ – ಐಜಿಪಿ)ರಾದರು. ರಾಜ್ಯ ಪ್ರಭುತ್ವ ಚಾಲ್ತಿಯಲ್ಲಿದ್ದ ದಿನಗಳಲ್ಲಿ ಎಫ್.ಡಬ್ಲ್ಯು. ಹ್ಯಾಮಿಲ್ಟನ್ ಎಂಬ ಬ್ರಿಟಿಷ್ ಅಧಿಕಾರಿ ಮೈಸೂರು ರಾಜ್ಯದ ಪೊಲೀಸ್ ಮಹಾ ನಿರೀಕ್ಷಕ (ಐಜಿ)ರಾಗಿ 1931ರಿಂದ ಎಂಟು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಅಂದಿನ ದಿನಗಳಲ್ಲಿ ಹ್ಯಾಮಿಲ್ಟನ್ ಅವರನ್ನು ಕಾಂಗ್ರೆಸಿಗರು ದ್ವೇಷಿಸುತ್ತಿದ್ದುದು ಹೌದಾದರೂ, ರಾಜ್ಯದ ಪೊಲೀಸ್ ಪಡೆಯನ್ನು ಕಂದಾಯ ಇಲಾಖೆಯಿಂದ ಮುಕ್ತಗೊಳಿಸಿದವರು ಹ್ಯಾಮಿಲ್ಟನ್ ಅವರೇ. ಆ ದಿನಗಳಲ್ಲಿ ಮೈಸೂರು ನಾಗರಿಕರು ಸೇವಾ ವ್ಯಾಪ್ತಿಗೆ ಸೇರಿದ್ದ ಕಂದಾಯಾಧಿಕಾರಿಗಳು ಪೊಲೀಸ್ ಸೇವೆಯ ತರಬೇತಿ ಇಲ್ಲದೆಯೇ ಪೊಲೀಸ್ ಸೂಪರಿಂಟೆಂಡೆಂಟ್ ಆಗಬಹುದಿತ್ತು; ಅಷ್ಟೇಕೆ, ಪೊಲೀಸ್ ನಿರೀಕ್ಷಣಾಧಿಕಾರಿ (ಐಜಿಪಿ) ಕೂಡ ಆಗಬಹುದಿತ್ತು. ಪ್ರವೀಣ್ ಸೂದ್ ಅವರನ್ನು ನೂತನ ಡಿಜಿ ಐಜಿಪಿ ಆಗಿ ನೇಮಿಸಿರುವ ಸರಕಾರ, ಈ ಪ್ರಕ್ರಿಯೆಯಲ್ಲಿ ಆಗಿರುವ ಅಚಾತುರ್ಯವೊಂದನ್ನು ದೂರ ಮಾಡಿಕೊಳ್ಳಬಹುದಿತ್ತು. ಇಲ್ಲಿ ಅಸಿತ್ ಮೋಹನ್ ಪ್ರಸಾದ್ ಅವರ ಸೇವಾ ಹಿರಿತನವನ್ನು ಕಡೆಗಣಿಸಿದಂತಾಗಿದೆ. ಅಸಿತ್ ಮೋಹನ್ ಪ್ರಸಾದ್ ಅವರು ಸೂದ್ ಅವರಿಗಿಂತ ಒಂದು ವರ್ಷದಷ್ಟು ಸೀನಿಯರ್. ಪ್ರಕಾಶ್ ಸಿಂಗ್ ಹಾಗೂ ಭಾರತ ಸರಕಾರದ ವಿರುದ್ಧದ ಪ್ರಕರಣ (2006)ದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ತನ್ನ ಅನುಕೂಲಕ್ಕೆ ತಕ್ಕಂತೆ ನಿರ್ಲಕ್ಷಿಸಿರುವ ಸರಕಾರ, ಅಸಿತ್ ಮೋಹನ್ ಪ್ರಸಾದ್ ಅವರಿಗೆ ಒಂಬತ್ತು ತಿಂಗಳ ಕಾಲ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬಹುದಿತ್ತು. ಮೇಲೆ ಉಲ್ಲೇಖೀಸಿದ ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಪೊಲೀಸ್ ಇಲಾಖೆಯಲ್ಲಿನ ಸುಧಾರಣೆಗಳಿಗೆ ಸಂಬಂಧಿಸಿದಂತೆ ರಾಜ್ಯಗಳಿಗೆ ಏಳು ನಿರ್ದೇಶಗಳನ್ನು ನೀಡಿತ್ತು. ಇವುಗಳಲ್ಲೊಂದು ಪೊಲೀಸ್ ಇಲಾಖೆಯನ್ನು ರಾಜಕೀಯ ಮಧ್ಯಪ್ರವೇಶ ರಾಜಕೀಯ ಒತ್ತಡ ಹಾಗೂ ಪಕ್ಷಪಾತ ತನಗಳಿಂದ ರಕ್ಷಿಸುವುದಕ್ಕೋಸ್ಕರ ಪೊಲೀಸ್ ಮುಖ್ಯಸ್ಥರ ಹುದ್ದೆಯ ಸೇವಾ ಅವಧಿಯನ್ನು ಕನಿಷ್ಠ ಎರಡು ವರ್ಷಗಳಿಗೆ ನಿಗದಿಪಡಿಸಬೇಕೆಂಬುದು. ಪ್ರಕಾಶ್ ಸಿಂಗ್ ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥರಾಗಿದ್ದವರು; ಮುಂದೆ ಗಡಿ ಭದ್ರತಾ ಪಡೆಯ ಮುಖ್ಯಸ್ಥರಾದರು. ನಮ್ಮ ಹೆಚ್ಚಿನ ಸರಕಾರಿ ಇಲಾಖೆಗಳಂತೆಯೇ ಕರ್ನಾಟಕದ ಪೊಲೀಸ್ ಇಲಾಖೆ ಕೂಡ ಸಿಬಂದಿಯಿಂದ ತುಂಬಿ ತುಳುಕುತ್ತಿದೆ. 2018ರ ಮಾರ್ಚ್ ಹೊತ್ತಿಗೆ ಕರ್ನಾಟಕದ ವಿವಿಧ ಪೊಲೀಸ್ ಪದಾಧಿಕಾರಿಗಳಲ್ಲಿ 176 ಐಪಿಎಸ್ ಅಧಿಕಾರಿಗಳಿದ್ದರು. ಒಬ್ಬರು ಡಿಜಿ-ಐಜಿಪಿ, ಆರು ಮಂದಿ ಡಿಜಿಪಿಗಳು, 21 ಹೆಚ್ಚುವರಿ ಡಿಜಿಪಿಗಳು, 22 ಮಂದಿ ಐಜಿಪಿಗಳು. ಆದರೆ 1956ರಲ್ಲಿ ನಮ್ಮ ಇಡೀ ಮೈಸೂರು ರಾಜ್ಯಕ್ಕೆ ಇದ್ದುದು ಒಬ್ಬರೇ ಒಬ್ಬರು ಐಜಿಪಿ ಹಾಗೂ ಇಬ್ಬರೇ ಡಿಐಜಿಗಳು. ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಕೇಂದ್ರ ಕಚೇರಿಯನ್ನು ನೀವು ಹೊಕ್ಕರೆ ಅಲ್ಲಿಂದ ಹೊರಬರುವಾಗ ಯಾರಾದರೂ ಒಬ್ಬ ಡಿಜಿಪಿಯನ್ನು ಹಾದುಕೊಂಡೇ ಬರಬೇಕಾಗುತ್ತದೆ ಎಂದು ವ್ಯಕ್ತಿಯೊಬ್ಬರು ತಮಾಷೆ ಮಾಡಿದ್ದನ್ನು ಕಂಡಿದ್ದೇನೆ. ಮಲ್ಲೇಶ್ವರಂನಲ್ಲಿರುವ ಅರಣ್ಯಾಧಿಕಾರಿಗಳ ಕಚೇರಿಯದೂ ಇದೇ ಕತೆ. ಅರಣ್ಯ ಇಲಾಖೆಯ ಈ ಕಚೇರಿಯಲ್ಲೀಗ ಹೊಸ ಹುದ್ದೆಯೊಂದು ಸೃಷ್ಟಿಯಾಗಿದೆ. “ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ’! ಹಾಗೇ ನೋಡಿದರೆ ರಾಜ್ಯದ ಕಾಂಗ್ರೆಸ್, ಬಿಜೆಪಿ ಜನತಾದಳದ ಅನೇಕ ಪ್ರಾಮಾಣಿಕ ರಾಜಕಾರಣಿಗಳಿಗೆ ಶಾಸಕರಾಗುವ ಅವಕಾಶವೂ ಸಿಗಲಿಲ್ಲ. ಹೊಸಬರಿಗೆ ಪ್ರಾತಿನಿಧ್ಯ ನೀಡಿರುವುದಕ್ಕಾಗಿ “ಮೂಲ ಬಿಜೆಪಿ’ ಶಾಸಕರಿಗೆ ಬೇಸರವಾಗಿರುವುದು ತೀರಾ ಸಹಜವೇ ಆಗಿದೆ. ನಮ್ಮ ಹೆಚ್ಚಿನ ಸರಕಾರಿ ಇಲಾಖೆಗಳಂತೆಯೇ ಕರ್ನಾಟಕದ ಪೊಲೀಸ್ ಇಲಾಖೆ ಕೂಡ ಸಿಬಂದಿಯಿಂದ ತುಂಬಿ ತುಳುಕುತ್ತಿದೆ. ಅರಕೆರೆ ಜಯರಾಮ್