Advertisement
ಕುದ್ರೋಳಿ ಮುಖ್ಯ ರಸ್ತೆಗೆ ಹೊಂದಿಕೊಂಡಂತಿದ್ದ ಹಳೆಯ ಮಾರುಕಟ್ಟೆಗಿಂತ ಸ್ವಲ್ಪ ಹಿಂದಕ್ಕೆ ಹೊಸ ಕಟ್ಟಡ ನಿರ್ಮಾಣವಾಯಿತು. 2016-17ರಲ್ಲಿ ಆರಂಭಗೊಂಡಿದ್ದ ಕಾಮಗಾರಿ ಒಂದು ವರ್ಷದ ಹಿಂದೆಯೇ ಪೂರ್ಣ ಗೊಂಡಿತ್ತು. ಆದರೂ ನೀರು, ಶೌಚಾಲಯ ಮತ್ತಿತರ ಮೂಲಸೌಕರ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಕಲ್ಪಿಸ ದ್ದರಿಂದ ವಹಿವಾಟಿಗೆ ಸೂಕ್ತವಾಗಿರಲಿಲ್ಲ. ಅನಂತರ ಮತ್ತೆ 30 ಲ.ರೂ. ವೆಚ್ಚದ ಕಾಮಗಾರಿ ನಡೆಸಿ, ಕಳೆದ ಅಕ್ಟೋಬರ್ ವೇಳೆಗೆ ಉದ್ಘಾಟಿಸಲಾಯಿತು. ಆದರೂ ವ್ಯಾಪಾರಿಗಳು ಅತ್ತ ಸುಳಿಯಲಿಲ್ಲ. ಜ.18 ರ ವೇಳೆಗೆ ಕೆಲವೇ ಮಂದಿ ವ್ಯಾಪಾರಿ ಗಳು ಪಾಲಿಕೆಯವರ ಆಗ್ರಹಕ್ಕೆ ಮಣಿದು ಹೊಸ ಕಟ್ಟಡದಲ್ಲಿ ವ್ಯಾಪಾರ ಆರಂಭಿಸಿದರು. ಆದರೂ ಮಾರುಕಟ್ಟೆ ಗ್ರಾಹಕರಿಗೆ, ನಮಗೆ ಅನುಕೂಲವಾಗುವಂತೆ ನಿರ್ಮಾಣವಾಗಿಲ್ಲ ಎಂಬುದು ವ್ಯಾಪಾರಸ್ಥರ ಆರೋಪ. ಅಲ್ಲದೆ ಎಲ್ಲ ಮಳಿಗೆಗಳು ಕಾರ್ಯಾರಂಭ ಮಾಡದ್ದರಿಂದ ಜನರೂ ಬರುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.
Related Articles
Advertisement
ಕುದ್ರೋಳಿ ಮುಖ್ಯರಸ್ತೆಯಿಂದ ಸ್ವಲ್ಪ ಒಳಭಾಗದಲ್ಲಿ ಮಾರುಕಟ್ಟೆ ಇರುವ ಕಾರಣ ರಸ್ತೆ ಬದಿ ಓಡಾಡುವವರು ಬರುತ್ತಿಲ್ಲ. ಹಾಗಾಗಿ ವ್ಯಾಪಾರವೂ ಕಡಿಮೆ. ಮಾರುಕಟ್ಟೆ ರಸ್ತೆಯ ಪಕ್ಕದಲ್ಲೇ ಇದ್ದಿದ್ದರೆ ಹೆಚ್ಚು ಅನು ಕೂಲವಾಗುತ್ತಿತ್ತು ಎನ್ನುತ್ತಾರೆ ವ್ಯಾಪಾರಸ್ಥರು.
ಪಾರ್ಕಿಂಗ್ ಜಾಗವಿದ್ದರೂ ಗ್ರಾಹಕರಿಗಿಲ್ಲ :
ಮಾರುಕಟ್ಟೆಯಲ್ಲಿ ಉತ್ತಮ ಪಾರ್ಕಿಂಗ್ ಸ್ಥಳಾವಕಾಶವಿದೆ. ಆದರೆ ಮಾರುಕಟ್ಟೆಗೆ ಬರುವ ಗ್ರಾಹಕರಿಗಿಂತ ಬೇರೆಯವರವಾಹನಗಳೇ ತುಂಬಿ ರುತ್ತವೆ. ಈ ಬಗ್ಗೆಯೂ ಪಾಲಿಕೆ ಗಮನಹರಿಸಬೇಕಿದೆ.
ವ್ಯಾಪಾರಸ್ಥರು- ಗ್ರಾಹಕ ಸ್ನೇಹಿಗೊಳಿಸಿ :
ಅಳಕೆ ಮಾರುಕಟ್ಟೆಯನ್ನೂ ವ್ಯಾಪಾರಸ್ಥರು, ಗ್ರಾಹಕ ಸ್ನೇಹಿಯಾಗಿ ನಿರ್ಮಿಸದಿರುವುದು ಸ್ಪಷ್ಟ. ವ್ಯಾಪಾರಸ್ಥರಿಗೆ ಸ್ವತ್ಛತೆ ಕಾಪಾಡಿಕೊಳ್ಳುವುದಕ್ಕೂ ಪೂರಕವಾಗಿ ಕಟ್ಟಡವನ್ನು ನಿರ್ಮಿಸಿಲ್ಲ ಎನ್ನುವ ಆರೋಪವಿದೆ. ನೀರಿನ ಲಭ್ಯತೆ ಕೊರತೆ ಇನ್ನೂ ಬಗೆಹರಿದಿಲ್ಲ ಎನ್ನುವುದು ಕೆಲವು ವ್ಯಾಪಾರಿಗಳ ದೂರು. ಎಲ್ಲ ಮಳಿಗೆಗಳನ್ನು ಭರ್ತಿ ಮಾಡಬೇಕು. ಹೆಚ್ಚಿನ ಸಾಮಗ್ರಿಗಳು ಒಂದೇ ಕಡೆ ದೊರೆತರೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ. ಹಾಗಾಗಿ ಎಲ್ಲ ಮಳಿಗೆಗಳಲ್ಲಿ ವ್ಯಾಪಾರ ಆರಂಭವಾಗುವಂತೆ ಪಾಲಿಕೆಯವರು ಕ್ರಮ ಕೈಗೊಳ್ಳಬೇಕು ಎಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.
24ರಲ್ಲಿ 10 ಮಳಿಗೆ ಮಾತ್ರ ಭರ್ತಿ! :
ಈ ಕಟ್ಟಡದಲ್ಲಿ ಮೀನು ಮಾರುಕಟ್ಟೆ ಸೇರಿದಂತೆ ಮಾಂಸ, ತರಕಾರಿ ಮಾರಾಟಕ್ಕೆ ಒಟ್ಟು 24 ಮಳಿಗೆಗಳಿವೆ. ಆದರೆ ಪ್ರಸ್ತುತ 10 ಮಳಿಗೆಗಳು ಮಾತ್ರ ಭರ್ತಿಯಾಗಿವೆ. ಈ ಹಿಂದೆ ಇಲ್ಲಿ ಹಳೆ ಕಟ್ಟಡದಲ್ಲಿದ್ದ 6 ಮಂದಿ ವ್ಯಾಪಾರಸ್ಥರಿಗೂ ಇಲ್ಲಿ ಅವಕಾಶ ನೀಡಲಾಗಿದೆ. ಉಳಿದ ಮಳಿಗೆಗಳಿಗೆ ಇತ್ತೀಚೆಗಷ್ಟೇ ಟೆಂಡರ್ ಕರೆಯಲಾಗಿದ್ದು, ಬೇಗ ಇತ್ಯರ್ಥಗೊಳ್ಳ ಬೇಕೆಂಬುದು ನಾಗರಿಕರ ಆಗ್ರಹ.
- ಸಂತೋಷ್ ಬೊಳ್ಳೆಟ್ಟು