Advertisement

ಹೊಸ ಲುಕ್‌ ಸ್ಟೈಲಿಶ್‌ನ ಕ್ವಿಡ್‌!

12:30 AM Dec 31, 2018 | |

ಕಡಿಮೆ ಬೆಲೆಯ ಅತ್ಯುತ್ತಮ ಗುಣಟ್ಟದ ಕಾರ್‌ ಎಂದರೆ ಶಿನಾಲ್ಟ್ ಕ್ವಿಡ್‌. ಇದೀಗ ಸ್ಟೈಲಿಶ್‌ ಲುಕ್‌ನೊಂದಿಗೆ ಮಾರುಕಟ್ಟೆಗೆ ಬಂದಿರುವ ಈ ಕಾರ್‌ನ ಗುಣವಿಶೇಷಗಳ ಪರಿಚಯ ಇಲ್ಲಿದೆ…

Advertisement

ಜಗತ್ತಿನ ಪ್ರಸಿದ್ಧ ಕಾರು ಕಂಪನಿಗಳಲ್ಲಿ ರೆನಾಲ್ಡ್‌ ಕೂಡ ಒಂದು. ಈ ಕಂಪನಿ ತಯಾರಿಸುವ ಕ್ವಿಡ್‌, ಭಾರತದಲ್ಲಿ ಉತ್ತಮ ಬೇಡಿಕೆಯಲ್ಲಿರುವ ಕಾರು. ಸುಮಾರು 2 ಲಕ್ಷಕ್ಕೂ ಮಿಕ್ಕಿ ಕಾರುಗಳನ್ನು ರೆನಾಲ್ಟ್ ಕಂಪನಿ ಮಾರಾಟ ಮಾಡಿದೆ. ಸುಮಾರು 350ಕ್ಕೂ ಹೆಚ್ಚು ಮಾರಾಟ ಮಳಿಗೆ, ಸರ್ವೀಸ್‌ ಸೆಂಟರ್‌ಗಳನ್ನು ದೇಶಾದ್ಯಂತ ಒಳಗೊಂಡಿರುವ ರೆನಾಲ್ಟ್ಗೆ, ಕ್ವಿಡ್‌ ಗರಿಷ್ಠ ಮಾರಾಟವಾಗುವ ಕಾರು ಕೂಡ ಹೌದು. ಇದಕ್ಕೆ ಕಾರಣ, ಕ್ವಿಡ್‌ ಕಡಿಮೆ ಬೆಲೆಗೆ ಉತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿರುವುದು ಮತ್ತು ಹೆಚ್ಚು ಮೇಂಟೆನೆನ್ಸ್‌ ಬಯಸದ ಕಾರು ಎಂಬ ವೈಶಿಷ್ಟé ಹೊಂದಿರುವುದು. 2018ರ ಅಂತ್ಯದಲ್ಲಿ ಒಂದಿಷ್ಟು ಹೊಸ ವೈಶಿಷ್ಟ್ಯಗಳನ್ನು ಸೇರಿಸಿರುವ ಕಂಪನಿ, ಸ್ಟೈಲಿಷ್‌ ಉಕ್‌ನಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮ್ಯಾನುವಲ್‌ ಮತ್ತು ಆಟೋಗೇರ್‌ ಹೊಂದಿದ ಕ್ವಿಡ್‌ ನಗರ ಮತ್ತು ಹಳ್ಳಿ ಮಂದಿಗೂ ಅಚ್ಚು ಮೆಚ್ಚಿನದ್ದಾಗಿದೆ. 

ಕ್ವಿಡ್‌ ಬದಲಾವಣೆಯೇನು? 
ಕ್ವಿಡ್‌ನ‌ ಎಂಜಿನ್‌ ಹಿಂದಿನ ಮಾಡೆಲ್‌ಗಿಂತ ಹೆಚ್ಚು ನಯವಾಗಿದೆ. ಉತ್ತಮ ಎಂಜಿನ್‌ ರೆಸ್ಪಾನ್ಸ್‌ ಇದೆ. ಬಿಗು ಟ್ರಾಫಿಕ್‌ಗಳಲ್ಲೂ ಸೆಕೆಂಡ್‌ ಗೇರ್‌ನಲ್ಲೂ ಉತ್ತಮ ಪಿಕಪ್‌ ಇದೆ. ಗಂಟೆಗಳ ಕಾಲ ಎಂಜಿನ್‌ ಚಾಲೂ ಇದ್ದರೂ, ಎಂಜಿನ್‌ ಗಡುಸಾಗದೇ ನಯವಾಗಿ ವರ್ತಿಸುತ್ತದೆ. ಇದರೊಂದಿಗೆ ಇಂಟೀರಿಯರ್‌ ವೈಬ್ರೇಷನ್‌ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹಿಂದಿನ ಮಾಡೆಲ್‌ಗ‌ಳಲ್ಲಿದ್ದ ಕೆಲ ಸಮಸ್ಯೆಗಳನ್ನು ಕಂಪನಿ ಪರಿಹರಿಸಿದೆ. 

ಅತ್ಯುತ್ತಮ ಮೈಲೇಜ್‌ 
ಕ್ವಿಡ್‌, 1 ಲೀಟರ್‌ ಮತ್ತು 800 ಸಿಸಿ ಎಂಜಿನ್‌ ವಿಭಾಗಗಳಲ್ಲಿ ಲಭ್ಯವಿದ್ದು, ಈ ಮಾದರಿಗಳಲ್ಲಿ ಅತ್ಯುತ್ತಮ ಮೈಲೇಜ್‌ ನೀಡುತ್ತದೆ. ಕ್ವಿಡ್‌ 1 ಲೀಟರ್‌ ಎಂಜಿನ್‌ನನ್ನು  ಚಾಲನೆ ವೇಳೆ ಪರಿಶೀಲಿಸಿದಾಗ ಬಿಗು ಟ್ರಾಫಿಕ್‌ನಲ್ಲೂ ಸುಮಾರು 18 ಕಿ.ಮೀ. (ಎ.ಸಿ. ಬಳಕೆಯೊಂದಿಗೆ) ಮತ್ತು ಹೈವೇಯಲ್ಲಿ ಸುಮಾರು 23.5 ಕಿ.ಮೀ.ವರೆಗೆ ಮೈಲೇಜ್‌ ನೀಡಿದೆ. 28 ಲೀ. ಸಾಮರ್ಥಯದ ಇಂಧನ ಟ್ಯಾಂಕ್‌ ಇದರಲ್ಲಿದ್ದು, ಉತ್ತಮ ಮೈಲೇಜ್‌ ಇರುವ ಕಾರಣದಿಂದ ಸುದೀರ್ಘ‌ ಕಿ.ಮೀ.ವರೆಗೆ ಚಾಲನೆ ಸಾಧ್ಯವಿದೆ. 

ಹೊಸ ಫೀಚರ್ 
ಆಧುನಿಕ ಕ್ವಿಡ್‌ನ‌ಲ್ಲಿ ಹೆಚ್ಚಿನ ಫೀಚರ್ಗೆ ಆದ್ಯತೆ ನೀಡಲಾಗಿದೆ. ಇದು ಟಾಪ್‌ಎಂಡ್‌ ಕಾರುಗಳಲ್ಲಿ ಲಭ್ಯವಿವೆ. ಪ್ರಮುಖವಾಗಿ ಟಚ್‌ಸ್ಕಿ$›àನ್‌ ಎಂಟರ್‌ಟೈನ್‌ಮೆಂಟ್‌ ಸಿಸ್ಟಂನೊಂದಿಗೆ ಯುಎಸ್‌, ಆಕ್ಸ್‌ ಇನ್‌ ಪುಟ್‌ ವ್ಯವಸ್ಥೆ, ಸುಲಭವಾಗಿ ಓದಲು ಸಾಧ್ಯವಾಗುವ ಡಿಜಿಟಲ್‌ ಇನ್ಸು$óಮೆಂಟಲ್‌ ಕ್ಲಸ್ಟರ್‌, ಗಿಯರ್‌ ಶಿಫ್ಟ್ ಇಂಡಿಕೇಟರ್‌, ಮೈಲೇಜ್‌ ನೋಡಲು ಸಾಧ್ಯವಾಗುವ ವ್ಯವಸ್ಥೆ ಇದರಲ್ಲಿದೆ. ಇದರೊಂದಿಗೆ ಪಾರ್ಕಿಂಗ್‌ಗೆ ಅನುಕೂಲವಾಗುವ ನಿಟ್ಟಿನಲ್ಲಿ ರಿಯರ್‌ ವ್ಯೂ ಕ್ಯಾಮೆರಾವನ್ನು ಈ ಮಾದರಿಯ ಕಾರುಗಳಲ್ಲೇ ಪ್ರಥಮ ಬಾರಿಗೆ ಪರಿಚಯಿಸಲಾಗಿದೆ. 

Advertisement

ಆರಾಮದಾಯಕ ಸೀಟುಗಳು
ಕ್ವಿಡ್‌ನ‌ ಸೀಟುಗಳು ಆರಾಮದಾಯಕವಾಗಿದ್ದು, ಸುದೀರ್ಘ‌ ಪ್ರಯಾಣಕ್ಕೆ ಸಹಕಾರಿಯಾಗುವಂತಿದೆ. ಅತ್ಯುತ್ತಮ ಕ್ಯಾಬಿನ್‌ ಸ್ಪೇಸ್‌ ಕೂಡ ಲಭ್ಯವಿದೆ. 4 ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾದ ಮುಂಭಾಗದ ಸೀಟುಗಳು ಮತ್ತು ಹಿಂಭಾಗದ ಸೀಟಿನಲ್ಲಿ ಆರ್ಮ್ರೆಸ್ಟ್‌ ನೀಡಲಾಗಿದೆ. ಇದೂ ಈ ಮಾದರಿಯ ಕಾರುಗಳಲ್ಲಿ ಪ್ರಥಮದ್ದಾಗಿದೆ. 

ಸೇಫ್ಟಿ ಫೀಚರ್ 
ಕ್ವಿಡ್‌ನ‌ ಹೊಸ ಮಾದರಿಯ ಸಸ್ಪೆನನ್‌ ಹೆಚ್ಚಿನ ಗ್ರೌಂಡ್‌ ಕ್ಲಿಯರೆನ್ಸ್‌ನೊಂದಿಗೆ ಆರಾಮದಾಯಕ ಸವಾರಿಗೆ ನೆರವು ನೀಡಿದಂತೆ ವಾಹನ ರಸ್ತೆಯಲ್ಲಿ ದೃಢವಾಗಿ ಸಾಗಲು ಅನುಕೂಲವಾಗುವಂತಿದೆ. ಬ್ರೇಕಿಂಗ್‌ ವ್ಯವಸ್ಥೆಯಲ್ಲೂ ತುಸು ಸುಧಾರಣೆ ಮಾಡಲಾಗಿದೆ. ಹಿಂಭಾಗದಲ್ಲೂ ಇಎಲ್‌ಆರ್‌ ಸೀಟ್‌ ಬೆಲ್ಟ್ ವ್ಯವಸ್ಥೆ ಇದ್ದು, ಅಪಘಾತ ಸಂದರ್ಭದಲ್ಲಿ ಪ್ರಯಾಣಿಕರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಇದರೊಂದಿಗೆ ಡ್ರೆ„ವರ್‌ ಸೈಡ್‌ ಏರ್‌ಬ್ಯಾಗ್‌ ಕೂಡ ನೀಡಲಾಗಿದೆ. 

ತಾಂತ್ರಿಕತೆ
800 ಸಿಸಿ
799 ಸಿಸಿ ಎಂಜಿನ್‌
54 ಬಿಎಚ್‌ಪಿ 
72 ಎನ್‌ಎಂ ಟಾರ್ಕ್‌
3 ಸಿಲಿಂಡರ್‌ 

1ಲೀಟರ್‌
990 ಸಿಸಿ ಎಂಜಿನ್‌
68 ಬಿಎಚ್‌ಪಿ
91 ಎನ್‌ಎಂ ಟಾರ್ಕ್‌
3 ಸಿಲಿಂಡರ್‌

ಈಶ

Advertisement

Udayavani is now on Telegram. Click here to join our channel and stay updated with the latest news.

Next