Advertisement
ತಾಲೂಕಿನ ಹಾರೋಹಳ್ಳಿ ಹೋಬಳಿಯ ಕೊಳ್ಳಿಗನಹಳ್ಳಿ ಗ್ರಾಪಂ ಕಟ್ಟಡದಲ್ಲೇ 2.5 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಸುಸಜ್ಜಿತವಾದ ಡಿಜಿಟಲ್ ಲೈಬ್ರರಿ ನಿರ್ಮಾಣಗೊಂಡಿದೆ. ಇದೇ ಕಟ್ಟಡದಲ್ಲಿ ಇದ್ದ ಲೈಬ್ರರಿ ಕೇವಲ ಬೆರಳೆಣಿಕೆಯಷ್ಟು ಪುಸ್ತಕಗಳಿಗೆ ಮಾತ್ರ ಸೀಮಿತವಾಗಿತ್ತು.
Related Articles
Advertisement
ಉನ್ನತ ಶಿಕ್ಷಣದ ಮಾರ್ಗದರ್ಶನ: ಎಲ್ಲಕ್ಕಿಂತ ಮುಖ್ಯವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ಮತ್ತು ಉನ್ನತ ಶಿಕ್ಷಣದ ಬಗ್ಗೆ ಮಾರ್ಗದರ್ಶನ ನೀಡುತ್ತಿರುವುದು ಲೈಬ್ರರಿಯ ಮತ್ತೂಂದು ವಿಶೇಷ. ಗ್ರಾಮೀಣ ಭಾಗದ ಮಕ್ಕಳಿಗೆ ಜ್ಞಾನಾರ್ಜನೆಯ ಜೊತೆಗೆ ಮಕ್ಕಳಲ್ಲಿ ಕೌಶಲ್ಯಾಧಾರಿ ತ ಮತ್ತು ಉನ್ನತ ಶಿಕ್ಷಣದ ಬಗ್ಗೆ ವಾರದಲ್ಲಿ ಒಂದು ದಿನ ಯೂತ್ ಸ್ಕಿಲ್ ಡೆವಲಪ್ಮೆಂಟ್ ಎಂಬ ಕಾರ್ಯಾಗಾರದ ಮೂಲಕ ಮಾರ್ಗದರ್ಶನ ನೀಡಲಾಗುತ್ತಿದೆ.
ಅಕ್ಷರ ಫೌಂಡೇಶನ್ ಮತ್ತು ಡೆಲ್ ಸಂಸ್ಥೆ ವತಿಯಿಂದ ಪ್ರತಿ ಸೋಮವಾರ ಬೆಳಗ್ಗೆ 10 ರಿಂದ 11.30ರವರೆಗೂ ನಡೆಯುವ ಈ ಕಾರ್ಯಾಗಾರದಲ್ಲಿ ಕಾಲೇಜು ವಿದ್ಯಾರ್ಥಿಗಳು ಇಟ್ಟುಕೊಂಡಿರುವ ಗುರಿ ಮತ್ತು ಧ್ಯೇಯ ಮುಟ್ಟ ಬೇಕಾದರೆ ಯಾವ ಹಂತದಲ್ಲಿ ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
ಅನಿವಾರ್ಯ ಸಂದರ್ಭಗಳಲ್ಲಿ ಉದ್ಯೋಗದ ಜೊತೆಜೊತೆಗೆ ಉನ್ನತ ಶಿಕ್ಷಣ ಪಡೆಯುವ ಅವಕಾಶಗಳ ಬಗ್ಗೆ ಹಾಗೂ ವೃತ್ತಿಪರ ಕೌಶಲ್ಯದ ಬಗ್ಗೆಯೂ ಕಾರ್ಯಾಗಾರದಲ್ಲಿ ಬೆಳಕು ಚೆಲ್ಲಲಾಗುತ್ತಿದೆ. ಕೊಳ್ಳಿಗನಹಳ್ಳಿ ಗ್ರಾಪಂ ವ್ಯಾಪ್ತಿಯ ಸೊಂಟೆನಹಳ್ಳಿ, ಕಡಸಿಕೊಪ್ಪ, ನಾರಾಯಣಪುರ ಸೇರಿದಂತೆ ಸುಮಾರು 18 ಗ್ರಾಮಗಳಲ್ಲಿರುವ ಸುಮಾರು 600ಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಬಹುದು. ಗ್ರಾಪಂ ಅಧಿಕಾರಿಗಳ ಕಾರ್ಯವೈಖರಿಗೆ ಸ್ಥಳೀ ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.