Advertisement

ಮಕ್ಕಳಿಗಿನ್ನು ಗದ್ದೆ , ತೋಟಗಳಲ್ಲೂ ಶಿಕ್ಷಣ

06:00 AM Jun 17, 2018 | Team Udayavani |

ಹೊಸದಿಲ್ಲಿ: ಇನ್ನು ಮುಂದೆ ಶಾಲಾ ಪಠ್ಯಕ್ರಮದಲ್ಲಿ ಏಕತಾನತೆ ಇರುವುದಿಲ್ಲ. ವಿವರಣೆಯ ಜತೆಗೆ ಪ್ರಾಯೋಗಿಕವಾಗಿ ಅದರ ಅನುಭೂತಿ ಪಡೆಯುವಂಥ ವಿಚಾರವನ್ನು ಸೇರ್ಪಡೆ ಮಾಡಲಾಗುತ್ತದೆ. ಈ ಬಗ್ಗೆ ಕೇಂದ್ರ ಮಾನವ ಸಂಪದ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯ ಚಿಂತನೆ ನಡೆಸಿದೆ. 

Advertisement

ಒಂದರಿಂದ ಎಂಟನೇ ತರಗತಿಯ ವರೆಗಿನ ಪಠ್ಯಕ್ರಮದಲ್ಲಿ ಬದಲಾವಣೆ ಮಾಡುವ ನಿಟ್ಟಿನಲ್ಲಿ ಈ ಪ್ರಯತ್ನ ನಡೆದಿದೆ. ಇದರ ಜತೆಗೆ ವೃತ್ತಿಪರ ಶಿಕ್ಷಣಗಳಲ್ಲಿ ಇರುವ ಇಂಟರ್ನ್ಶಿಪ್‌ ವ್ಯವಸ್ಥೆಯನ್ನೂ ಪಠ್ಯಕ್ರಮದಲ್ಲಿ ಅಳವಡಿಸುವ ಇರಾದೆ ಸರಕಾರದ್ದು. ತರಗತಿಯಲ್ಲಿ ನಿಗದಿತ ಅವಧಿಯಲ್ಲಿ ಪಾಠವನ್ನು ಆಲಿಸುವುದರ ಜತೆಗೆ ಇತರ ಅವಧಿಯಲ್ಲಿ ಗದ್ದೆ, ತೋಟ, ಅಂಚೆ ಕಚೇರಿ, ಕಾರ್ಖಾನೆ, ವಸ್ತು ಸಂಗ್ರಹಾಲಯಗಳಿಗೆ ಭೇಟಿ ನೀಡಬೇಕು. ಈ ಮೂಲಕ ಆಯಾ ಕ್ಷೇತ್ರದ ಅಲ್ಲಿನ ಕಾರ್ಯಚಟುವಟಿಕೆಗಳನ್ನು ಅರಿಯುವ ಅವ ಕಾಶ ನೀಡಲು ಯೋಚಿಸಲಾಗಿದೆ. ಇದಲ್ಲದೆ ವರ್ಷದಲ್ಲಿ ಕೆಲವು ದಿನ ಸಂಸ್ಥೆ ಅಥವಾ ಸರಕಾರಿ ಕಚೇರಿಗಳಲ್ಲಿ ಪ್ರಾಯೋಗಿಕ ತರಬೇತಿ ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗಿದೆ. ಉದಾಹರಣೆಗೆ ಅಂಚೆ ಕಚೇರಿಗೆ ಸಂಬಂಧಿಸಿದ ಪಾಠದಲ್ಲಿ ಅಲ್ಲಿ ಅಂಚೆ ಚೀಟಿ, ಉಳಿತಾಯ ಖಾತೆ ಸಹಿತ ಹಲವು ವಹಿವಾಟುಗಳ ಬಗ್ಗೆ ವಿವರಣೆ ಇರುತ್ತದೆ.

ಶಾಲೆಯ ವೇಳೆ ಬದಲು ಸಾಧ್ಯತೆ
ಪ್ರಾಯೋಗಿಕ ಕಲಿಕೆಯ ಭರದಲ್ಲಿ ಮಕ್ಕಳ ಮೇಲೆ ಪಠ್ಯ ಹಾಗೂ ಪಠ್ಯಕ್ರಮಗಳ ಒತ್ತಡ ಬೀಳದಂತೆ ಮಾಡಲು ಪಠ್ಯ ಕ್ರಮದಲ್ಲಿ ಇಳಿಕೆಗಾಗಿ ಶಾಲಾ ಸಮಯ ಬದಲಿಗೂ ಉದ್ದೇಶಿಸಲಾಗಿದೆ. ಚರ್ಚೆ, ಭಾಷಣ, ಜವಾಬ್ದಾರಿ, ಸಾಮರ್ಥ್ಯ, ನಡೆ-ನುಡಿಗಳನ್ನು ಸಕಾರಾತ್ಮಕವಾಗಿ ರೂಪಿಸುವ ಬಗ್ಗೆ ಆದ್ಯತೆಗೆ ಪ್ರಮುಖ ಸಾಧಕರ ಭಾಷಣಗಳ ವೀಡಿಯೋಗಳನ್ನು ನೋಡಲು, ವೈಜ್ಞಾನಿಕ- ಗಣಿತ ಮಾದರಿಗಳನ್ನು ತಯಾರಿಸಲು ಉತ್ತೇಜನ ನೀಡಲು ತೀರ್ಮಾನಿಸಲಾಗಿದೆ.

1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ಹೊಸ ಕಲಿಕಾ ಕ್ರಮ
ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಇಂಟರ್ನ್ ಶಿಪ್‌ ಕಡ್ಡಾಯಗೊಳಿಸಲು ಚಿಂತನೆ
ಪಠ್ಯಕ್ರಮ ಹೊರೆಯಾಗದಿರಲು ಶಾಲಾ ವೇಳಾ ಪಟ್ಟಿ ಬದಲಿಗೆ ಆಲೋಚನೆ

Advertisement

Udayavani is now on Telegram. Click here to join our channel and stay updated with the latest news.

Next