Advertisement

ನವ ಕರ್ನಾಟಕ ಮುನ್ನೋಟ-2025: ನಾಳೆ ವಿಶೇಷ ಕಾರ್ಯಾಗಾರ

12:03 PM Oct 20, 2017 | |

ಬೆಂಗಳೂರು: ಮುಂದಿನ ಎಂಟು ವರ್ಷಗಳಲ್ಲಿ ಕರ್ನಾಟಕದ ಅಭಿವೃದ್ಧಿ ಕುರಿತಂತೆ ನೀಲನಕ್ಷೆ ಸಿದ್ಧಪಡಿಸಲು ಸಾರ್ವಜನಿಕರು ಸೇರಿದಂತೆ ಸಮಾಜದ ಎಲ್ಲ ವರ್ಗ, ವಲಯದವರ ಅಭಿಪ್ರಾಯಪಡೆಯಲು ಮುಂದಾಗಿರುವ ರಾಜ್ಯ ಸರ್ಕಾರ “ನವಕರ್ನಾಟಕ  ಮುನ್ನೋಟ- 2017′ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಐದು ಸಮಿತಿ ರಚಿಸಿದೆ.

Advertisement

ಈ ಸಂಬಂಧ 13 ವಲಯಗಳನ್ನು ಗುರುತಿಸಿದ್ದು, ಅವು ಯಾವ ರೀತಿ ಅಭಿವೃದ್ಧಿಯಾಗಬೇಕು ಎಂಬ ಬಗ್ಗೆ ಯೋಜನೆ ರೂಪಿಸುತ್ತಿದೆ. ಪ್ರತಿ ವಲಯಕ್ಕೆ ಸಂಬಂಧಪಟ್ಟಂತೆ ಐದು ಸಮಿತಿ ರಚಿಸಲಾಗಿದ್ದು, ಇದರಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ತಜ್ಞರು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ಜನಪ್ರತಿಗಳಿದ್ದಾರೆ. ಸಮಿತಿಗೆ ಸಲ್ಲಿಕೆಯಾಗುವ ಸಮಸ್ಯೆಗಳು, ಪರಿಹಾರ ಹಾಗೂ ಅಭಿವೃದ್ಧಿಗೆ ಸಂಬಂಧಪಟ್ಟ ಅಭಿಪ್ರಾಯ, ಸಲಹೆ ಕುರಿತಂತೆ ಡಿಪಿಆರ್‌ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಿವೆ. ಡಿಪಿಆರ್‌ ಸಿದ್ಧಪಡಿಸಲು ಡಿ.21ರ ಗಡುವು ನೀಡಲಾಗಿದೆ. 

ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಡಿಪಿಆರ್‌ ಸಿದ್ಧವಾಗಲಿದೆ. ಜಿಲ್ಲೆ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಗೆ ಸ್ಥಳ ಗುರುತಿಸುವುದು, ಲಾಲ್‌ಬಾಗ್‌ ಮಾದರಿಯಲ್ಲಿ ಅರ್ಕಾವತಿ, ಕುಮುದ್ವತಿ ನದಿ ಪಾತ್ರದಲ್ಲಿ ನಾಲ್ಕು ಮಿನಿ ಲಾಲ್‌ಬಾಗ್‌ ನಿರ್ಮಾಣ, 10 ಗ್ರಾಪಂಗಳನ್ನು ಪಪಂಗೆ ಮೇಲ್ದರ್ಜೆಗೇರಿಸುವುದು ಸೇರಿದಂತೆ ಇತರೆ ರೂಪುರೇಷೆ ಸಿದ್ಧವಾಗುತ್ತಿದೆ.

“ನವ ಕರ್ನಾಟಕ ಮುನ್ನೋಟ-2025′ ಯೋಜನೆಯಡಿ ಬಿಬಿಎಂಪಿಯನ್ನು ಹೊರಗಿಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕುರಿತಂತೆ ಬೆಂಗಳೂರು ಅಭಿವೃದ್ಧಿ ಸಚಿವರು ನಿರ್ಧಾರ ಕೈಗೊಳ್ಳಲಿದ್ದಾರೆ. ಬಿಬಿಎಂಪಿ, ಬಿಡಿಎ ಇತರೆ ಇಲಾಖೆ ಅಧಿಕಾರಿಗಳು ಯೋಜನೆ ಸಿದ್ಧಪಡಿಸಲಿದ್ದಾರೆ.

ನಗರ ಜಿಲ್ಲೆಗೆ ಸಂಬಂಧಪಟ್ಟಂತೆ ಶನಿವಾರ (ಅ.21) ದಂದು ಬೆಳಗ್ಗೆ 11ರಿಂದ ಸಂಜೆ 5ರವರೆಗೆ ವಿಶೇಷ ಕಾರ್ಯಾಗಾರ ನಟಡೆಯಲಿದ್ದು, ಬೆಂಗಳೂರು ನಗರ ಜಿಪಂ  ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ಸಚಿವ ಕೆ.ಜೆ.ಜಾರ್ಜ್‌, ನವ ಕರ್ನಾಟಕ ಮುನ್ನೋಟ- 2025 ಯೋಜನೆಯ ಸಿಇಒ ರೇಣುಕಾ ಚಿದರಂಬರಂ, ಸಿಎಂ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್‌, ಜಲಮಂಡಳಿ ಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಪಾಲ್ಗೊಳ್ಳಲಿದ್ದಾರೆ. ಎಂದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ತಿಳಿಸಿದರು.

Advertisement

ಮುನ್ನೋಟಕ್ಕೆ ಗುರುತಿಸಿರುವ ವಲಯ ವಿವರ
ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು, ಮೂಲ ಸೌಕರ್ಯ, ಉದ್ಯೋಗ- ಕೌಶಲ್ಯ, ಕೈಗಾರಿಕಾಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಆರೋಗ್ಯ ಮತ್ತು ಪೋಷಣೆ, ಶಿಕ್ಷಣ, ನಗರಾಭಿವೃದ್ಧಿ, ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ, ಸೇವೆಗಳು, ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ (ನ್ಯಾಯಾಧಿಕಾರ).

Advertisement

Udayavani is now on Telegram. Click here to join our channel and stay updated with the latest news.

Next