Advertisement

ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳು

12:44 AM Aug 20, 2019 | Sriram |

ಕರ್ನಾಟಕ ಅಂಚೆ ವೃತ್ತವು ಖಾಲಿ ಇರುವ ಅಂಚೆ ಪಾಲಕ, ಸಹಾಯಕ ಅಂಚೆ ಪಾಲಕ ಮತ್ತು ಡಾಕ್‌ ಸೇವಕ್‌ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದೆ. ಎಸೆಸೆಲ್ಸಿ ಮೆರಿಟ್‌ ಆಧಾರದಲ್ಲಿ ನೇಮಕಾತಿ ನಡೆಯಲಿದೆ. 18ರಿಂದ 40ರ ವಯೋ ಮಿತಿಯವರು ಸೆಪ್ಟಂಬರ್‌ 4ರ ಒಳಗೆ ಅರ್ಜಿ ಸಲ್ಲಿಸಬಹುದು. ವಿವಿಧ ವರ್ಗಗಳ ಆಧಾರದಲ್ಲಿ ವಯೋಮಿತಿ ಸಡಿಲಿಕೆ ಇದೆ. ಹೆಚ್ಚಿನ ಮಾಹಿತಿಗಾಗಿ https://indiapost.gov.in, //appost.in/gdsonline ಸಂರ್ಪರ್ಕಿಸಿ.

Advertisement

2. ಸಹಾಯಕ ನಿಯಂತ್ರಕ ಹುದ್ದೆ
ಹೊಸದಿಲ್ಲಿಯ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಮಾಣೀಕರಿಸುವ ಅಧಿಕಾರಿಗಳ ನಿಯಂತ್ರಕ ಕಚೇರಿಯಲ್ಲಿ ಸಹಾಯಕ ನಿಯಂತ್ರಕ ಹುದ್ದೆಗಳು ಖಾಲಿ ಇದ್ದು, ಆಗಸ್ಟ್‌ 31ರ ಒಳಗೆ ಅರ್ಜಿ ಸಲ್ಲಿಸ ಬಹುದು. ಹೆಚ್ಚಿನ ಮಾಹಿತಿಗೆ www.cca.gov.in ಸಂಪರ್ಕಿಸಬಹುದು.

3. ಇನ್‌ಸ್ಟಿಟ್ಯೂಟ್‌ ಆಫ್ ಬ್ಯಾಂಕಿಂಗ್‌:
ಅಧಿಕಾರಿ ಹುದ್ದೆಗಳು
ಇನ್‌ಸ್ಟಿಟ್ಯೂಟ್‌ ಆಫ್ ಬ್ಯಾಂಕಿಂಗ್‌ನಲ್ಲಿ 4,336 ಪ್ರೊಬೆಷನರಿ ಅಧಿಕಾರಿ
(ಪಿಒ) ಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿ ಗಳು ಖಾಲಿ ಹುದ್ದೆಗಳ ವಿವರ, ಖಾಲಿ ಹುದ್ದೆಗಳ ಸಂಖ್ಯೆ, ಅರ್ಹತೆಯ ಮಾನದಂಡಗಳು, ಆಯ್ಕೆ ವಿಧಾನ, ಅರ್ಜಿ ಸಲ್ಲಿಸುವ ವಿಧಾನ ಕುರಿತು ಹೆಚ್ಚಿನ ವಿವರಗಳನ್ನು //www.ibps.in ಪರಿಶೀಲಿಸಬಹುದು. 28-8-2019ರ ವರೆಗೆ ಅರ್ಜಿ ಸಲ್ಲಿಸಬಹುದು.

4. ಕಾರ್ಮಿಕ ಮತ್ತು ಉದ್ಯೋಗ
ಸಚಿವಾಲಯದಲ್ಲಿ ವಿವಿಧ ಹುದ್ದೆಗಳು
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮ್ಯಾನೇಜರ್‌ ಗ್ರೇಡ್‌- ಐಐ (ಗ್ರೂಪ್‌ ಬಿ)ಯ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ವಾಣಿಜ್ಯ, ವ್ಯವಹಾರ ಅಧ್ಯಯನದಲ್ಲಿ ಪದವಿ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಮಾಹಿತಿಗೆ ://labour.nic.in. ಸಂರ್ಪಕಿಸಿ. 60 ದಿನಗಳ ಒಳಗೆ ಅರ್ಜಿ ಸಲ್ಲಿಸಬೇಕು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next