Advertisement
ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ಹೆಮ್ಮಾಡಿಯ ಬಾಬು ಪೂಜಾರಿ ಅವರು ಮರಳು (ಹೊಗೆ) ಗಾಳಿಸಲು (ಸೋಸಲು) ವಿದ್ಯುತ್‌ಚಾಲಿತ ಯಂತ್ರವನ್ನು ತಯಾರಿಸಿ ಮರಳು ಕಲ್ಲು ವಿಂಗ ಡಿ ಸು ವ ಕಾರ್ಯ ವನ್ನು ಸರ ಳ ಗೊಳಿದ್ದಾರೆ.ಮೂಲತಃ ನಾಡ ಗುಡ್ಡೆಯಂಗಡಿಯ ನಿವಾಸಿಯಾಗಿರುವ ಬಾಬು ಪೂಜಾರಿ ಅವರು ಹೆಮ್ಮಾಡಿಯಲ್ಲಿ ಪುಟ್ಟ
ದಾದ ಮೆಕ್ಯಾನಿಕ್ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ.
ಇವರು ಕಡಿಮೆ ಕೂಲಿಯಾಳು ವಿನೊಂದಿಗೆ ಮರಳು ಗಾಳಿಸಲು ಹೊಸ ಯಂತ್ರವನ್ನು ಕಂಡು ಹಿಡಿದಿದ್ದಾರೆ. ಸಾಮಾನ್ಯವಾಗಿ ಮರಳು ಗಾಳಿಸಲು ಕನಿಷ್ಠ 3 ಜನ ಕೂಲಿಯಾಳುಗಳಾದರೂ ಬೇಕು. ಆದರೆ ಈ ಯಂತ್ರವಿದ್ದರೆ ಕೇವಲ ಒಬ್ಬ ಕೂಲಿಯಾಳು ಸಾಕು. ಅಂದರೆ ಈ ಯಂತ್ರದ ಜಾಲರಿಗೆ ಮರಳನ್ನು ತಂದು ಹಾಕಿದರೆ ಸಾಕು. ಈ ಹಿಂದೆ ಇದೇ ರೀತಿಯ ಯಂತ್ರ ಬೇರೆಯವರು ರಚಿಸಿದ್ದರೂ, ಮಾನವನ ಸಹಾಯವೇ ಇಲ್ಲದೆ ಇಷ್ಟೊಂದು ಸುವ್ಯವಸ್ಥಿತವಾಗಿ ಮರಳು, ಕಲ್ಲುಗಳು ಪ್ರತ್ಯೇಕವಾಗಿ ಬೇರ್ಪಟ್ಟು ಕೆಳಕ್ಕೆ ಬೀಳುವಂತಹ ಯಂತ್ರವನ್ನು ಯಾರೂ ರಚಿಸಿರಲಿಲ್ಲ. 5ನೇ ತರಗತಿಯವರೆಗೆ ಓದಿರುವ 54 ವರ್ಷದ ಬಾಬು ಪೂಜಾರಿ ಅವರು 13ನೇ ವರ್ಷದಿಂದ ಆರಂಭಗೊಂಡು, ಈ ವರೆಗೆ ಈ ಮೆಕ್ಯಾನಿಕ್ ವೃತ್ತಿಯನ್ನು ಮಾಡಿಕೊಂಡಿದ್ದಾರೆ. ವಾಹನಗಳ ದುರಸ್ತಿ ಮಾಡುತ್ತಾ- ಮಾಡುತ್ತಾ ಈ ರೀತಿಯ ಯಂತ್ರವನ್ನು ತಯಾರಿಸಿದ್ದು, ಆಸಕ್ತಿಯಿದ್ದರೆ ಮೆಕ್ಯಾನಿಕ್ ಆಗಿದ್ದರೂ, ಏನಾದರೂ ಸಾಧಿಸಬಹುದು ಎನ್ನುವುದಕ್ಕೆ ನಿದರ್ಶನವಾಗಿದ್ದಾರೆ.
Related Articles
ಈ ಹೊಸ ವಿದ್ಯುತ್‌ಚಾಲಿತ ಯಂತ್ರದಲ್ಲಿ ಗಂಟೆಗೆ ಸುಮಾರು 1 ಲಾರಿ (3 ಯುನಿಟ್) ಮರಳನ್ನು ಗಾಳಿಸಬಹುದು ಎನ್ನುವುದಾಗಿ ಹೇಳುವ ಅವರು, ಈಗ ಮರಳು ಗಾಳಿಸಲು ಜನ ಕೂಡ ಕೆಲಸಕ್ಕೆ ಸಿಗುವುದು ಕಷ್ಟವಾಗಿದ್ದು, ಮಾತ್ರ ವಲ್ಲದೆ ಈ ಕೆಲಸ ತ್ರಾಸದಾಯಕ ಆಗಿರುವುದರಿಂದ ಈ ಯಂತ್ರವನ್ನು ತಯಾರಿಸಿದ್ದೇನೆ ಎನ್ನುತ್ತಾರೆ.
Advertisement
1 ವಾರದ ಕೆಲಸಈ ಯಂತ್ರವನ್ನು ತಯಾರಿಸಲು ಹೆಚ್ಚು ಕಡಿಮೆ 1 ವಾರ ಬೇಕು. 1 ಎಚ್‌ಪಿಯ 1 ಮೋಟಾರ್, ಜಾಲರಿ, ಕಬ್ಬಿಣದ ಆ್ಯಂಗ್ಲರ್, ಸ್ಪ್ಯಾರ್ ಬಾಕ್ಸ್, ಪುಲ್ಸ್ ಸಲಕರಣೆಗಳು ಬೇಕು. ಹೊಸ ಮೋಟಾರು, ಕಬ್ಬಿಣ ಮತ್ತಿತರ ಎಲ್ಲ ಪರಿಕರಗಳು ದುಬಾರಿ ಆಗಿರುವುದರಿಂದ ಒಂದು ವಿದ್ಯುತ್ ಚಾಲಿತ ಮರಳು ಗಾಳಿಸುವ ಯಂತ್ರ ತಯಾರಿಸಲು 23 ಸಾವಿರ ರೂ. ಖರ್ಚು ತಗುಲುತ್ತದೆ ಎನ್ನುತ್ತಾರೆ ಬಾಬು ಪೂಜಾರಿ. ಹಿಂದೆ ನನ್ನ ಸಂಬಂಧಿಯಾಗಿದ್ದ ಐಟಿಐ ವಿದ್ಯಾರ್ಥಿಯೊಬ್ಬನಿಗೆ ಇದೇ ರೀತಿಯ ಯಂತ್ರವನ್ನು ಮೊದಲ ಬಾರಿಗೆ ತಯಾರಿಸಿಕೊಟ್ಟಿದ್ದೆ. ಅದನ್ನೇ ಇನ್ನು ಸ್ವಲ್ಪ ವಿಶಿಷ್ಟವಾಗಿ ಅಭಿವೃದ್ಧಿಪಡಿಸಿ, ಈ ಯಂತ್ರವನ್ನು ಮಾಡಲಾಗಿದೆ. ಈಗ ಮಾಡಿರುವ ಒಂದೆರಡು ಯಂತ್ರ ಖಾಲಿಯಾಗಿದೆ. ಇನ್ನಷ್ಟು ಬೇಡಿಕೆ ಬಂದಿದೆ.
– ಬಾಬು ಪೂಜಾರಿ ಹೆಮ್ಮಾಡಿ, ಮೆಕ್ಯಾನಿಕ್