Advertisement

ಏರ್‌ ಇಂಡಿಯಾದಲ್ಲಿ ಹೊಸ ನೇಮಕ,ಪದೋನ್ನತಿಗೆ ತಡೆ

09:07 AM Jul 23, 2019 | |

ಹೊಸದಿಲ್ಲಿ: ಹೊಸ ನೇಮಕ ಇಲ್ಲ, ಹಾಲಿ ಇರುವ ಉದ್ಯೋಗಿಗಳಿಗೆ ಪದೋನ್ನತಿ ನೀಡುವುದು ಬೇಡ- ಹೀಗೆಂದು ಏರ್‌ ಇಂಡಿಯಾ ಆಡಳಿತ ಮಂಡಳಿ ನಿರ್ದೇಶನ ನೀಡಿದೆ.

Advertisement

50 ಸಾವಿರ ಕೋಟಿ ರೂ.ಗಳಿಗೂ ಅಧಿಕ ಸಾಲದ ಹೊರೆ ಹೊಂದಿರುವ ಸರ್ಕಾರಿ ಸ್ವಾಮ್ಯದ ವಿಮಾನ ಯಾನ ಸಂಸ್ಥೆಯಿಂದ ಬಂಡವಾಳ ಹಿಂಪಡೆದು, ಮಾರಾಟ ಮಾಡಲು ನಡೆಸಿರುವ ಪ್ರಯತ್ನ ಇದು ವರೆಗೆ ವಿಫ‌ಲವಾಗಿದೆ. ಬಂಡವಾಳ ಹಿಂಪಡೆಯುವ ನಿಟ್ಟಿನಲ್ಲಿ ಜು.15ರ ವರೆಗೆ ಇರುವ ಎಲ್ಲ ರೀತಿಯ ಲೆಕ್ಕಪತ್ರಗಳನ್ನು ಕ್ರಮಬದ್ಧಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ.

ಇದರ ಜತೆಗೆ ಹಾಲಿ ಇರುವ ಉದ್ಯೋಗಿಗಳಿಗೆ ಪದೋನ್ನತಿ, ಹೊಸ ನೇಮಕ ಮಾಡದಂತೆ ಆಡಳಿತ ಮಂಡಳಿ ಸೂಚನೆ ನೀಡಿದೆ. ಇದರ ಜತೆಗೆ ಉದ್ಯೋಗಿಗಳಿಂದ ಯಾವುದೇ ರೀತಿಯ ಬಾಕಿ ಮೊತ್ತ ಇಲ್ಲದೇ ಇರುವಂತೆ ನೋಡಿಕೊಳ್ಳಲೂ ಸೂಚಿಸಲಾಗಿದೆ. ಸರಕಾರಿ ಸ್ವಾಮ್ಯದ ವಿಮಾನ ಸಂಸ್ಥೆ ಸದ್ಯ ಪ್ರತಿದಿನ 15 ಕೋಟಿ ರೂ. ಆದಾಯ ಪಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next