Advertisement

ನೀಲಾವರ ಗೋಶಾಲೆಗೆ ಹೊಸ ಅತಿಥಿ

09:29 PM Jul 14, 2019 | sudhir |

ಬ್ರಹ್ಮಾವರ: ಪೇಜಾವರ ಉಭಯ ಶ್ರೀಗಳ ನೇತೃತ್ವದಲ್ಲಿ 1800ಕ್ಕೂ ಅಧಿಕ ಅನಾಥ ಹಸುಗಳ ಆಶ್ರಯ ಧಾಮವಾಗಿರುವ ನೀಲಾವರ ಗೋಶಾಲೆಗೆ ಹೊಸ ಅತಿಥಿಯೊಂದರ ಪ್ರವೇಶವಾಗಿದೆ.

Advertisement

ಆಂಧ್ರಪ್ರದೇಶ ಮೂಲದ ಪುಂಗನೂರು ದೇಶೀ ತಳಿಯ ಅತ್ಯಂತ ಆಕರ್ಷಕವಾಗಿರುವ ಗಂಡು ಕರು ಇತ್ತೀಚೆಗೆ ಹೈದರಾಬಾದಿನಿಂದ ನೀಲಾವರ ಗೋಶಾಲೆಗೆ ಕರೆತರಲಾಗಿದೆ.

ಅತ್ಯಂತ ಗಿಡ್ಡ ಜಾತಿಯ ಪುಂಗನೂರು ಹಸುಗಳು ಮೂರು ಅಡಿಯಷ್ಟು ಮಾತ್ರ ಎತ್ತರ ಬೆಳೆಯುವ, ಚಿಕ್ಕ ಕೊಂಬುಗಳನ್ನು ಹೊಂದಿರುವ ವಿಶಿಷ್ಟ ಹಾಗೂ ಆಕರ್ಷಕ ತಳಿಯಾಗಿದ್ದು, ಈಗ ಆಗಮಿಸಿರುವ ಕರು ಆರು ತಿಂಗಳ ಪ್ರಾಯದ್ದಾಗಿದೆ.

ಈಗಾಗಲೇ ಗೋಶಾಲೆಯಲ್ಲಿ ಅನೇಕ ದೇಶಿ ತಳಿಯ ಹಸು ಹಾಗೂ ಹೋರಿಗಳಿದ್ದು ಈಗ ಪುಂಗನೂರು ತಳಿಯ ಸೇರ್ಪಡೆಯಾದಂತಾಗಿದೆ. ಈ ಎಲ್ಲಾ ತಳಿಗಳ ನೈಸರ್ಗಿಕ ಸಂವರ್ಧನೆಯ ಬಗೆಗೂ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶಯವನ್ನು ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next