Advertisement
ತಾಪಂನಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯರಾದ ಸುರೇಶ್, ಧನಂಜಯ ನಾಯಕ್ ಹಾಗೂ ನಾರಾಯಣಪ್ಪ ಅವರು ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಗಳು ಬೇಜವಾ ಬ್ದಾರಿಯಿಂದ ನಡೆದು ಕೊಂಡಿದ್ದಾರೆ ಎಂದು ಆರೋಪಿಸಿದರು. ಕಾಲಕಾಲಕ್ಕೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರೆ ಗುಣಮಟ್ಟದ ಕಟ್ಟಡದ ಕಾಮಗಾರಿ ನಡೆಯುತ್ತಿತ್ತು ಎಂದು ತಿಳಿಸಿದರು.
Related Articles
Advertisement
ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹ: ತಾಲೂಕಿನ ರೈತರು ಸಿರಿಧಾನ್ಯ ಬೆಳೆಯಲು ಸರ್ಕಾರ ಪ್ರೋತ್ಸಾಹಿಸಿದೆ. ಹೆಕ್ಟರ್‌ಗೆ 10 ಸಾವಿರ ರೂ. ಸಹಾಯಧನ ನೀಡುತ್ತಿದೆ. ನೈಸರ್ಗಿಕ ಕೃಷಿಗೆ ಶ್ರೀಗಿರಿಪುರ ಆಯ್ಕೆ ಮಾಡಲಾಗಿದೆ. 41 ಸಾವಿರ ರೈತರ ಭೂಮಿಗೆ ಸಂಬಂಧಿಸಿದ್ದಂತೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಣೆ ಮಾಡಿದ್ದೇವೆ. ಮಣ್ಣಿಗೆ ಅಗತ್ಯ ಲಘುಪೋಷಕಾಂಶ ನೀಡಲಾಗುತ್ತಿದೆ ಎಂದರು.
ತಾಪಂನಿಂದ ತೆಂಗಿನ ಸಸಿ ವಿತರಣೆಗೆ ಕ್ರಮ: ತಾಪಂನಿಂದ 5 ಸಾವಿರ ತೆಂಗಿನ ಸಸಿ ಬೆಳಸಲಾಗಿದೆ. ಸಭೆಯಲ್ಲಿ ಅನಮೋದನೆ ಯಾಗಿದ್ದು, ಶೀಘ್ರದಲ್ಲಿಯೇ ಅರ್ಹ ರೈತರಿಗೆ ವಿತರಣೆ ಮಾಡಲಾಗುವುದು ಎಂದು ತಾಪಂ ಅಧ್ಯಕ್ಷ ಕೆ.ಎಚ್.ಶಿವರಾಜ್ ತಿಳಿಸಿದರು.
ತೆಂಗಿನ ಸಸಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಸಸಿಗಳು ಖಾಲಿಯಾಗಿವೆ. ತರಕಾರಿ ಬೀಜ ಉಚಿತವಾಗಿ ರೈತರಿಗೆ ನೀಡಲಾಗುತ್ತಿದೆ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ನಾಗರಾಜು ತಿಳಿಸಿದರು.
ಪಶುಭಾಗ್ಯ ಫಲಾನುಭವಿಗಳಿಗೆ ಅನ್ಯಾಯ: ಕಳೆದ 3 ವರ್ಷಗಳ ಹಿಂದೆ ಪಶುಭಾಗ್ಯ ಯೋಜನೆಯಡಿ ಮಂಜೂರಾ ಗಿದ್ದ ಸಹಾಯ ಧನವನ್ನು ಫಲಾನುಭವಿಗ ಳಿಗೆ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಸದಸ್ಯ ನಾರಾಯಣಪ್ಪ, ಹನುಮಂತರಾಯಪ್ಪ ಆರೋಪಿಸಿದರು.
ಪಶು ಇಲಾಖೆ ಸಹಾಯಕ ನಿರ್ದೇಶಕ ಜರ್ನಾಧನ್ ಪ್ರತಿಕ್ರಿಯಿಸಿ, ಕೆಲವೊಂದು ಬ್ಯಾಂಕ್‌ಗಳ ಅಧಿಕಾರಿಗಳು ಸಾಲ ಮಂಜೂರು ಮಾಡಿಲ್ಲ. ಬಡ್ಡಿ ಹಣವನ್ನು ವಾಪಸ್ಸು ಮಾಡಿಲ್ಲ, ಇದರಿಂದ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ತಾಪಂ ಉಪಾಧ್ಯಕ್ಷೆ ಅಂಬಿಕಾ, ಸದಸ್ಯರಾದ ಶಂಕರ್, ಹನುಮಯ್ಯ, ನರಸಿಂಹಮೂರ್ತಿ, ವೆಂಕಟೇಶ್, ಸುಗುಣ, ಸುಧಾ, ಗಂಗಮ್ಮ, ಸುಮಾ ರಮೇಶ್, ರತ್ನಮ್ಮ, ಇಒ ಚಂದ್ರ, ಆಶಾ, ತಿಮ್ಮರಾಯಪ್ಪ, ಮಂಗಳಾ ಹಾಜರಿದ್ದರು.