Advertisement

ನೂತನ ಗೋವಾ ಸಿಎಂ ಪ್ರಮೋದ್‌ ಸಾವಂತ್‌ಗೆ ಬುಧವಾರ ಸದನ ಬಲ ಪರೀಕ್ಷೆ

10:10 AM Mar 19, 2019 | Team Udayavani |

ಪಣಜಿ : ಇಂದು ಮಂಗಳವಾರ ನಸುಕಿನ ವೇಳೆ ಗೋವೆಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿಜೆಪಿ ಶಾಸಕ ಪ್ರಮೋದ್‌ ಸಾವಂತ್‌ ಅವರು ಇಂದು ಮಧ್ಯಾಹ್ನ ಮುಖ್ಯಮಂತ್ರಿಯಾಗಿ ತನ್ನ ಪದಭಾರವನ್ನು ವಹಿಸಿಕೊಂಡರು. 

Advertisement

40 ಸದಸ್ಯರ ಗೋವಾ ಸದನದ ಪ್ರಕೃತ ಸದಸ್ಯ ಬಲ 36 ಆಗಿದ್ದು ಸಾವಂತ್‌ ಅವರು ನಾಳೆ ಬುಧವಾರ ಸದನದಲ್ಲಿ ತನ್ನ ಬಹುಮತ ಸಾಬೀತು ಪಡಿಸಬೇಕಾಗಿದೆ. 14 ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ ಅತೀ ದೊಡ್ಡ ಏಕ ಪಕ್ಷವಾಗಿದೆ. ಆ ಬಳಿಕದಲ್ಲಿ  ಬಿಜೆಪಿ 12 ಸದಸ್ಯರನ್ನು ಹೊಂದಿದೆ. ಬಿಜೆಪಿ ಮಿತ್ರ ಪಕ್ಷವಾಗಿರುವ ಎಂಜಿಪಿ ಮತ್ತು ಜಿಎಫ್ಪಿ ತಲಾ ಮೂವರು ಶಾಸರಕನ್ನು ಹೊಂದಿದ್ದು ಮೂವರು ಪಕ್ಷೇತರರು ಬಿಜೆಪಿಯ ಬೆಂಬಲಕ್ಕಿದ್ದಾರೆ. ಇದಲ್ಲದೆ ನ್ಯಾಶನಲಿಸ್ಟ್‌ ಕಾಂಗ್ರೆಸ್‌ ಪಕ್ಷದ ಓರ್ವ ಶಾಸಕರೂ ಸದನದಲ್ಲಿದ್ದಾರೆ. 

ಸಾವಂತ್‌ ಅವರ ಸಚಿವ ಸಂಪುಟದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳಿದ್ದಾರೆ. ಅವರೆಂದರೆ ವಿಜಯ್‌ ಸರ್ದೇಸಾಯ್‌ ಮತ್ತು ಸುದಿನ್‌ ಧವಳೀಕರ್‌. 

ಮನೋಹರ್‌ ಪಾರೀಕರ್‌ ಅವರ ನಿಧನಕ್ಕಾಗಿ ರಾಜ್ಯದಲ್ಲಿ ಏಳು ದಿನಗಳ ಶೋಕಾಚರಣೆ ಇರುವುದರಿಂದ ಯಾರೂ ನನ್ನನ್ನು ನೂತನ ಮುಖ್ಯಮಂತ್ರಿ ಎಂದು ಹೂಗುಚ್ಚ, ಹೂಮಾಲೆಯೊಂದಿಗೆ ಅಭಿನಂದಿಸಬಾರದು ಎಂದು ಸಾವಂತ್‌ ವಿನಂತಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next