Advertisement

ಹೊಸಬರ ಭಾವಚಿತ್ರ ಶೀಘ್ರದಲ್ಲಿ ತೆರೆಗೆ

12:57 PM Nov 23, 2021 | Team Udayavani |

“ಭಾವಚಿತ್ರ”- ಹೀಗೊಂದು ಸಿನಿಮಾ ಸದ್ದಿಲ್ಲದೇ ತಯಾರಾಗಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಗಿರೀಶ್‌ ಕುಮಾರ್‌ ನಿರ್ದೇಶನದ ಈ ಚಿತ್ರದಲ್ಲಿ ಚಕ್ರವರ್ತಿ ಹಾಗೂ ಗಾನವಿ ಲಕ್ಷ್ಮಣ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

Advertisement

ಇದೊಂದು ಟೆಕ್ನೋ ಥ್ರಿಲ್ಲರ್‌, ಸೆಂಟಿಮೆಂಟ್‌ ಸನ್ನಿವೇಶಗಳನ್ನು ಒಳಗೊಂಡಿರುವ ಚಿತ್ರ. ಭಾವಚಿತ್ರ ಹಾಗೂ ಕ್ಯಾಮೆರಾ ಮೇಲೆ ನಮ್ಮ ಚಿತ್ರದ ಕಥೆ ಸಾಗುತ್ತದೆ. ಇದಷ್ಟೇ ಅಲ್ಲ. ಪ್ರೀತಿಯ ಸನ್ನಿವೇಶಗಳು ನಮ್ಮ ಚಿತ್ರದಲ್ಲಿದೆ. ಇಡೀ ಚಿತ್ರತಂಡದ ಸಹಕಾರ ದಿಂದ ನಮ್ಮ ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದರು ನಿರ್ದೇಶಕ ಗಿರೀಶ್‌.‌

ಇದನ್ನೂ ಓದಿ;- ರಮೇಶ್‌ 100 ಚಿತ್ರಕ್ಕೆ ಸುಧಾಮೂರ್ತಿ ಮೆಚ್ಚುಗೆ

ನಾಯಕ ಚಕ್ರವರ್ತಿ, ಈ ಚಿತ್ರದಲ್ಲಿ, ಸಾಫ್ಟ್ವೇರ್‌ ಇಂಜಿನಿಯರ್‌ ಆಗಿ ನಟಿಸಿದ್ದಾರೆ. “ಈ ಚಿತ್ರದಲ್ಲಿ ನಾನು ಸಾಫ್ಟ್ವೇರ್‌ ಇಂಜಿನಿಯರ್‌ ಆಗಿ ನಟಿಸಿದ್ದೇನೆ. ಫೋಟೋಗ್ರಪ್ ನನ್ನ ಹವ್ಯಾಸ. ಈ ರೀತಿ ಜೀವನ ಸಾಗುತ್ತಿದ್ದಾಗ, ಕೆಲವು ಅನಿರೀಕ್ಷಿತ ತಿರುವುಗಳು ಬರುತ್ತದೆ. ಈ ರೀತಿಯ ವಿಭಿನ್ನ ಕಥೆಯೊಂದಿಗೆ ಚಿತ್ರ ಸಾಗುತ್ತದೆ. ಹಿಂದೆ ಯಾನ ಚಿತ್ರದಲ್ಲಿ ನಟಿಸಿದ್ದಾರೆ.

ಇದು ಕನ್ನಡದಲ್ಲಿ ಎರಡನೇ ಚಿತ್ರ’ ಎಂದರು ನಾಯಕ ಚಕ್ರವರ್ತಿ. ನಾಯಕಿ ಗಾನವಿ ಮಾತನಾಡಿ, ಈ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಮಗಳು ಜಾನಕಿ ಧಾರಾವಾಹಿ ಸಮಯದಲ್ಲಿ ನಿರ್ದೇಶಕ ಗಿರೀಶ್‌ ಕುಮಾರ್‌ ಅವರು ಹೇಳಿದ ಈ ಕಥೆ ಇಷ್ಟವಾಯಿತು ಎಂದರು. ಚಿತ್ರಕ್ಕೆ ಗೌತಮ್‌ ಶ್ರೀವತ್ಸ ಸಂಗೀತವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next