Advertisement

ಶೀಘ್ರದಲ್ಲಿ ವಾಟ್ಸ್ ಆ್ಯಪ್ ನ ಹೊಚ್ಚ ಹೊಸ ಫೀಚರ್‌ ; ಯಾವುದೆಲ್ಲಾ ಆ ಮೂರು ಫೀಚರ್ ಗಳು?

10:34 AM Oct 21, 2019 | Hari Prasad |

ಹೊಸದಿಲ್ಲಿ: ಪ್ರಸಿದ್ಧ ಸಮಾಜಿಕ ಜಾಲತಾಣ ಸಂಸ್ಥೆ ವಾಟ್ಸ್‌ ಆ್ಯಪ್‌ ತನ್ನ ಐಒಎಸ್‌ ಮತ್ತು ಆಂಡ್ರಾಯ್ಡ್‌ ಬಳಕೆದಾರರಿಗೆ ಹೊಸ ಫೀಚರ್‌ ಅನ್ನು ಶೀಘ್ರದಲ್ಲೆ ಬಿಡುಗಡೆ ಮಾಡಲಿದೆ. ಈಗಾಗಲೇ ಕಾಲ ಕಾಲಕ್ಕೆ ತಕ್ಕಂತೆ ಹಲವು ಫೀಚರ್‌ ಗಳನ್ನು ಅಪ್‌ಡೇಟ್‌ ಮಾಡುತ್ತಾ ಬಂದಿರುವ ವಾಟ್ಸ್ಯಾಪ್ ಮುಂಬರುವ ದಿನಗಳಲ್ಲಿ ಹೊಸ ಫೀಚರ್‌ ಅನ್ನು ಪರಿಚಯಿಸಲಿದೆ. ಇದರ ತಾಂತ್ರಿಕ ಕೆಲಸ ಕಾರ್ಯಗಳು ಬಹುತೇಕ ಅಂತಿಮ ಹಂತದಲ್ಲಿದೆ. ಈ ಹೊಸ ಫೀಚರ್‌ ಗಳನ್ನು ಇಲ್ಲಿ ನೀಡಲಾಗಿದೆ.

Advertisement

ಸ್ಪ್ಲ್ಯಾಶ್ ಸ್ಕ್ರೀನ್
ಸ್ಪ್ಲ್ಯಾಶ್‌ ಸ್ಕ್ರೀನ್‌ ಅಥವ ಪರದೆ ಮುಂಬರುದ ದಿನಗಳಲ್ಲಿ ನಿಮ್ಮ ಮೊಬೈಲ್‌ ಪೋನ್‌ ನ ವಾಟ್ಸ್‌ ಅಪ್‌ನಲ್ಲಿ ಕಾಣಿಸಿಕೊಳ್ಳಲಿದೆ. ಸ್ಪ್ಲಾಶ್‌ ಸ್ಕ್ರೀನ್‌ ಎಂದರೆ ನೀವು ವಾಟ್ಸ್‌ ಅಪ್‌ ತೆರೆದಾಗ ವಾಟ್ಸ್‌ ಅಪ್‌ ಲೋಗೋ ಸ್ಕ್ರೀನ್‌ ಮೇಲೆ ಕಾಣಿಸಿಕೊಳ್ಳಲಿದೆ.

ಅಂದರೆ ನೀವು ವಾಟ್ಸ್‌ ಅಪ್‌ ತೆರೆದಾಗ ಚಾಟ್‌ ಬಾಕ್ಸ್‌ ಓಪನ್‌ ಆಗುವ ಮೊದಲು ಈ ಸ್ಪ್ಲಾಶ್‌ಸ್ಕ್ರೀನ್‌ ಮೇಲೆ ವಾಟ್ಸ್‌ ಅಪ್‌ ಲೋಗೋ ಕಾಣಿಸಿಕೊಳ್ಳಲಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್‌ 10+ ನಲ್ಲಿ ಈ ಸ್ಪ್ಲಾಶ್‌ಸ್ಕ್ರೀನ್‌ ಡಾರ್ಕ್‌ ಮೂಡ್‌ನ‌ಲ್ಲಿ ಲಭ್ಯವಾಗಲಿದೆ. ಅಂದರೆ ಆ್ಯಪ್‌ ತೆರೆದಾಗ ಸ್ಪ್ಲಾಶ್‌ಸ್ಕ್ರೀನ್‌ನ ವಾಟ್ಸ್‌ ಅಪ್‌ ಲೋಗೊ ಡಾರ್ಕ್‌ ಮೂಡ್‌ನ‌ಲ್ಲಿ ಕಾಣಿಸಿಕೊಳ್ಳಲಿದೆ.

ಹೈಡ್‌ ಮ್ಯೂಟೆಡ್‌ ಸ್ಟೇಟಸ್‌
ನಾವು ನೋಡಲು ಇಚ್ಚಿಸದ ವ್ಯಕ್ತಿಗಳ ಅಥವ ಮೊಬೈಲ್‌ ಸಂಖ್ಯೆಗಳ ವಾಟ್ಸ್‌ ಅಪ್‌ ಸ್ಟೇಟಸ್‌ಗಳನ್ನು ಮುಂದಿನ ದಿನಗಳಲ್ಲಿ ನಾವು ಹೈಡ್‌ ಮಾಡಬಹುದಾಗಿದೆ. ಸದ್ಯ ನಾವು ನೋಡಲು ಬಯಸದ ಅಥವ ಮ್ಯೂಟ್‌ ಮಾಡಲಾದ ವಾಟ್ಸ್‌ ಅಪ್‌ ಸ್ಟೇಟಸ್‌ ಗಳು, ಸ್ಟೇಟಸ್‌ ಲಿಸ್ಟ್‌ ನ ಕೊನೆಯಲ್ಲಿ ಕಂಡು ಬರುತ್ತಿದೆ. ಮುಂಬರುವ ದಿನಗಳಲ್ಲಿ ನೀವು ಅದನ್ನು ಅಲ್ಲಿ ನೋಡಲು ಸಾಧ್ಯವಿಲ್ಲ.

ಡಾರ್ಕ್‌ ಮೂಡ್‌
ಸದ್ಯ ಬಹುತೇಕ ಸಾಮಾಜಿಕ ಜಾಲತಾಣಗಳಲ್ಲಿರುವ ಡಾರ್ಕ್‌ ಮೂಡ್‌ ಅನ್ನು ವಾಟ್ಸ್‌ ಆ್ಯಪ್‌ ಗೆ ತರಬೇಕು ಎಂದು ಹಲವು ಬಳಕೆದಾರರು ಸಂಸ್ಥೆಯನ್ನು ಕೋರಿಕೊಂಡಿದ್ದವು. ಇದೀಗ ತನ್ನ ಬಳಕೆದಾರರ ಕೋರಿಕೆಯನ್ನು ಮನ್ನಿಸಿರುವ ವಾಟ್ಸ್‌ ಆ್ಯಪ್‌ ಡಾರ್ಕ್‌ ಮೂಡ್‌ ಅನ್ನು ಒದಗಿಸಲಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಫೀಚರ್‌ ದೊರೆಯಲಿದೆ. ಇದು ಒಳ್ಳೆಯ ಆಯ್ಕೆ ಎಂಬುದು ಬಹುತೇಕ ಬಳಕೆದಾರರ ಮಾತುಗಳಾಗಿವೆ. ಇದನ್ನು ಆಯ್ಕೆ ಮಾಡುವುದು, ಆಯ್ಕೆ ಮಾಡಿಕೊಳ್ಳದೇ ಇರುವುದು ಬಳಕೆದಾರರಿಗೆ ಬಿಟ್ಟದ್ದು.

Advertisement

ಸೆಲ್ಫ್ ಡಿಸ್ಟ್ರಕ್ಟಿಂಗ್‌ ಮೆಸೇಜ್‌
ಸೆಲ್ಫ್ ಡಿಸ್ಟ್ರಕ್ಟಿಂಗ್‌ ಮೆಸೇಜ್‌ ಅನ್ನು ಸುಲಭದಲ್ಲಿ ವಿವರಿಸುವುದಾದರೆ, ಒಂದು ಮೆಸೇಜ್‌ ನ ಆಯಸ್ಸನ್ನು ನೀವು ನಿರ್ಧರಿಸುವುದಾಗಿದೆ. ಉದಾಹರಣೆಗೆ ಮುಂಜಾನೆ ಗ್ರೂಪ್‌ನಲ್ಲಿ ಅಥವ ಖಾಸಗಿ ಚಾಟ್‌ನ ಲ್ಲಿ ಗುಡ್‌ ಮಾರ್ನಿಂಗ್‌ ಎಂದು ಯಾರಿಗಾದರೂ ವಿಶ್‌ ಮಾಡುತ್ತೇವೆ. ಈ ಮೆಸೇಜ್‌ನ ಆಯಸ್ಸು ಬೆಳಗ್ಗೆ 8 ಗಂಟೆ ಮಾತ್ರ ಅಥವ 10 ಗಂಟೆ ಮಾತ್ರ ಎಂದು ನೀವು ನಿಗದಿಪಡಿಸಿದರೆ ಆ ಸಮಯದೊಳಗೆ ನಾವು ಅದನ್ನು ನೋಡಬಹುದಾಗಿದೆ. ಬಳಿಕ ಅದು ನಮ್ಮ ಸ್ಕ್ರೀನ್‌ನಿಂದ ಮಾಯವಾಗಲಿದೆ. ಇದು ನಮ್ಮ ಗುಡ್‌ ಮಾರ್ನಿಂಗ್‌ ಮೆಸೇಜ್‌ ಅನ್ನು ಮಧ್ಯಾಹ್ನ ನೋಡುವುದನ್ನು ತಪ್ಪಿಸುತ್ತದೆ.

ಇದನ್ನು 5 ಸೆಕೆಂಡ್‌ನಿಂದ 30 ದಿನಗಳವರೆಗೆ ಮಿತಿಗೊಳಿಸಬಹುದಾಗಿದೆ. ಈ ಫೀಚರ್‌ ಅನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು ಅಥವಾ ಆಯ್ಕೆ ಮಾಡದೇ ಇರಬಹುದು. ಆಯ್ಕೆ ಮಾಡಿಕೊಳ್ಳದೇ ಇದ್ದರೆ ಈಗಿರುವ ಫೀಚರ್ ಮುಂದುವರೆಯುತ್ತದೆ. ಈ ಫೀಚರ್‌ ಈಗಾಗಲೇ ಸ್ನ್ಯಾಪ್‌ ಚಾಟ್‌ನಲ್ಲಿ ಲಭ್ಯ ಇದೆ.

Advertisement

Udayavani is now on Telegram. Click here to join our channel and stay updated with the latest news.

Next