Advertisement
ನಮಗೆ ಶೇರು ಗೊತ್ತು; ಅವುಗಳು ಶೇರುಗಟ್ಟೆಯಲ್ಲಿ ಮಾರಾಟವಾಗುತ್ತವೆ. ನಮಗೆ ಮ್ಯೂಚುವಲ್ ಫಂಡ್ ಗೊತ್ತು; ಅವುಗಳು ನಮ್ಮೆಲ್ಲರ ದುಡ್ಡನ್ನು ಒಗ್ಗೂಡಿಸಿ ಶೇರು ಅಥವಾ ಸಾಲಪತ್ರಗಳಲ್ಲಿ ಹೂಡುತ್ತವೆ. ಅವುಗಳು ಯಾವುದೇ ಶೇರುಗಟ್ಟೆಯಲ್ಲಿ ಮಾರಾಟವಾಗುವುದಿಲ್ಲ. ದುಡ್ಡು ವಾಪಾಸು ಬೇಕೆಂದರೆ ಮ್ಯೂಚುವಲ್ ಫಂಡುಗಳನ್ನು ವಾಪಾಸು ಫಂಡ್ ಹೌಸುಗಳಿಗೇ ಹಿಂತಿರುಗಿಸಿ ಅವುಗಳ ಮೌಲ್ಯವನ್ನು ಹಿಂಪಡೆದುಕೊಳ್ಳಬೇಕಷ್ಟೆ. ಆದರೆ ಶೇರುಗಟ್ಟೆಯಲ್ಲಿ ಮಾರಾಟವಾಗುವ ಮ್ಯೂಚುವಲ್ ಫಂಡುಗಳೂ ಇಲ್ಲವೇ ಇಲ್ಲ ಎಂದೇನಿಲ್ಲ, ಇವೆ. ಅವುಗಳನ್ನು ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ ಅಥವಾ ಇ.ಟಿ.ಎಫ್. ಎಂದು ಕರೆಯುತ್ತಾರೆ. ಇ.ಟಿ.ಎಫ್.ನಲ್ಲಿ ಅವಶ್ಯ ಬಿ¨ªಾಗ ಒಂದು ಉತ್ತಮ ಮಾರುಕಟ್ಟೆಯ ಬೆಲೆಯನ್ನು ಪಡೆಯಬಹುದು ಎನ್ನುವುದು ಅದರ ಹಿಂದಿರುವ ತತ್ವ.
Related Articles
Advertisement
ಸುಮಾರು 7,000 ಕೋಟಿ ರೂಪಾಯಿಗಳನ್ನು ಒಗ್ಗೂಡಿಸುವ ಉದ್ದೇಶವಿರುವ ಈ ಫಂಡು ಆ ಬಳಿಕವೂ ವರ್ಷಕ್ಕೊಮ್ಮೆ ಖರೀದಿಗೆ ತೆರೆದಿರುತ್ತದೆ. ಅಲ್ಲದೆ, ಒಮ್ಮೆ ಬಿಡುಗಡೆಯಾದ ಈ ಇ.ಟಿ.ಎಫ್. ಫಂಡು ಬಿ.ಎಸ್.ಸಿ. ಮತ್ತು ಎನ್.ಎಸ್.ಸಿ.ಗಳಲ್ಲಿ ಮಾರಾಟವಾಗುತ್ತವೆ. ಯಾವಾಗ ಬೇಕಾದರೂ ಆ ಕ್ಷಣದ ಮಾರುಕಟ್ಟೆ ಬೆಲೆಗೆ ಅಲ್ಲಿಂದ ಖರೀದಿಸಬಹುದು . ಹಾಂ! ಈ ಇ.ಟಿ.ಎಫ್. ಬಾಂಡುಗಳ ಖರೀದಿಗೆ ಡಿ-ಮ್ಯಾಟ್ ಖಾತೆ ಖಂಡಿತಾ ಬೇಕಾಗುತ್ತದೆ.
ಭಾರತ್ ಬಾಂಡಿನಲ್ಲಿ ಹೂಡಿಕೆ ಮಾಡುವುದರಲ್ಲಿ ಈ ಕೆಳಗಿನ ಜಾಣತನವನ್ನು ಗುರುತಿಸಬಹುದು:1. ಇದು ಕಾರ್ಪೋರೇಟ್ ಅಥವಾ ಕಂಪೆನಿಗಳ ಸಾಲಪತ್ರವಾದ ಕಾರಣ ಉಳಿದ ಸರಕಾರಿ ಸಾಲಪತ್ರಗಳಿಂದ ಒಂದೆರಡು ಶೇಕಡಾ ಜಾಸ್ತಿ ಪ್ರತಿಫಲವನ್ನು ನಿರೀಕ್ಷಿಸಬಹುದು. 2. ಇದು ಸರಕಾರಿ ಬಾಂಡು ಆಗಿರುವ ಕಾರಣ ಭದ್ರತೆಯ ದೃಷ್ಟಿಯಿಂದ ಇದು ಸುಭದ್ರವಾಗಿದೆ, ಕೇಂದ್ರ ಸರಕಾರವೇ ಇದಕ್ಕೆ ಗ್ಯಾರಂಟಿ. ಇಂತಹ ಸೌಲಭ್ಯ ಅಪರೂಪ. ಇತ್ತೀಚೆಗಿನ ದಿನಗಳಲ್ಲಿ ಸಾಲಪತ್ರ ಅಥವಾ ಡೆಟ್ ಮಾರ್ಕೆಟ್ಟಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡುತ್ತಿರುವವರಿಗೆ ಈ ಭದ್ರತೆಯ ಮಹತ್ವ ಅರ್ಥವಾದೀತು. ನಿಜವಾಗಿ ಹೇಳಬೇಕಾದರೆ ಸದ್ಯದ ಡೆಟ್ ಮಾರುಕಟ್ಟೆಯ ಡೋಲಾಯಮಾನ ಪರಿಸ್ಥಿತಿಯೇ ಸರಕಾರವು ಇಂತಹ ಒಂದು ಭದ್ರತೆಯ ಬಾಂಡ್ ಹೊರತರುವುದಕ್ಕೆ ಕಾರಣವಾಗಿರಬಹುದು. 3. ಭಾರತ್ ಬಾಂಡು ಒಂದು ಫಂಡ್. ಆದುದರಿಂದ ಎಫ್.ಡಿ.ಯಂತೆ ಇಂತಿಷ್ಟು ಎನ್ನುವ ಪ್ರತಿಫಲದ ಮುದ್ರೆಯೊಂದಿಗೆ ಅದು ಬರುವುದಿಲ್ಲ. ಪಬ್ಲಿಕ್ ಸೆಕ್ಟರ್ ಯುನಿಟ್ಸ್‌ಗಳ ಸಾಲಪತ್ರಗಳಲ್ಲಿ ಹೂಡಿ ಬಂದ ನೈಜವಾದ ಪ್ರತಿಫಲವು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗುತ್ತದೆ. ಪ್ರತಿಫಲದಲ್ಲಿ ತುಸು ಏರಿಳಿತಗಳಿದ್ದರೂ ಒಂದು ಎಫ್ಡಿಗಿಂತ ಕಡಿಮೆ ಪ್ರತಿಫಲ ಬರಲಾರದು. 4. ಎಡೆಲ್ ವೈಸ್ ಫಂಡು ಹೌಸ್ ಈ ನಿಧಿಯ ನಿರ್ವಹಣೆಗೆ ಕೇವಲ ಶೇ. 0.0005 ಮಾತ್ರವೇ ಶುಲ್ಕ ವಿಧಿಸುತ್ತದೆ. ಇದು ಜಗತ್ತಿನಲ್ಲಿಯೇ ಅತ್ಯಂತ ಅಗ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆ ಕಾರಣಕ್ಕೆ ನಮಗೆ ಸಿಗುವ ಪ್ರತಿಫಲ ಜಾಸ್ತಿಯಾದೀತು. 5. ಈ ಬಾಂಡುಗಳಲ್ಲಿ ನಿಮ್ಮ ದುಡ್ಡನ್ನು ಮೆಚೂÂರಿಟಿಯವರೆಗೆ ಹೂಡಿ ಇಟ್ಟರೆ 3 ವರ್ಷದ ಬಾಂಡಿನ ಮೇಲೆ ಸರಿ ಸುಮಾರು ಶೇ. 6.59 ಹಾಗೂ 10 ವರ್ಷದ ಬಾಂಡಿನ ಮೇಲೆ ಸುಮಾರು ಶೇ. 7.52 ಸಿಗುವ ಸಂಭವವಿದೆ. ಈ ಪ್ರತಿಫಲ ಸಂಭಾವ್ಯವೇ ಹೊರತು ಗ್ಯಾರಂಟಿಯದ್ದು ಅಲ್ಲ ಎನ್ನುವುದನ್ನು ಗಮನಿಸಬೇಕು. ಮ್ಯೂಚುವಲ್ ಫಂಡುಗಳು (ಇ.ಟಿ.ಎಫ್. ಸಹಿತ) ಪ್ರತಿಫಲದ ಮೇಲೆ ಬ್ಯಾಂಕು ಎಫ್.ಡಿ.ಗಳಂತೆ ಯಾವುದೇ ಗ್ಯಾರಂಟಿ ಕೊಡುವುದಿಲ್ಲ. 6. ಇವು ಹೂಡುವ ಸಾಲಪತ್ರಗಳು. ವಾರ್ಷಿಕವಾಗಿ ಬಡ್ಡಿ ನೀಡುತ್ತವಾದರೂ ಫಂಡು ಹೌಸು ಅದನ್ನು ಪುನರ್ ಹೂಡಿಕೆ ಮಾಡುತ್ತವೆ. ಹಾಗಾಗಿ ಹೂಡಿಕೆಯಲ್ಲಿ ಮೌಲ್ಯವೃದ್ಧಿಯಾಗಿ ಬಾಂಡು ಮಾರಿದಾಗ ಮಾತ್ರವೇ ದುಡ್ಡು ಕೈಸೇರುತ್ತದೆ. 7. ಭಾರತ್ ಬಾಂಡುಗಳು ಪಾಸ್ಸಿವ್ ಹೂಡಿಕೆ; ಅಂದರೆ ಇದರಲ್ಲಿ ಸಕ್ರಿಯವಾಗಿ ಪೋರ್ಟ್ ಫೋಲಿಯೋವನ್ನು ಕಲಸುವ ಕೆಲಸ ಇರುವುದಿಲ್ಲ. ದುಡ್ಡು ಬಂದಂತೆ ಹೂಡಿಕೆ ಮಾಡಿ ತಣ್ಣನೆ ಕೂರುವುದು ಇವರ ಕೆಲಸ. ಇದು ಹಲವರ ರುಚಿಗೆ ಸಪ್ಪೆಯಾಗಿ ಕಂಡರೂ ಈ ರಣತಂತ್ರದಲ್ಲಿ ಪ್ರತಿಫಲದ ಸ್ಥಿರತೆ ಇರುತ್ತದೆ. ಅದೊಂದು ಒಳ್ಳೆಯ ಅಂಶ. 8. ಮನ ಬಂದಾಗ ಮಾರುಕಟ್ಟೆಯಲ್ಲಿ ಮಾರಲು ಬರುವುದರಿಂದ ಇದರಲ್ಲಿ ಲಿಕ್ವಿಡಿಟಿ ಅಥವಾ ಬೇಕಾದಾಗ ನಗದೀಕರಿಸುವ ಅಂಶ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ಕೊಳ್ಳುವವರು ಆಯಾ ಸಂದರ್ಭಗಳಲ್ಲಿ ಇರುತ್ತಾರೆ ಎನ್ನುವ ಆಶಯ ಇದರ ಹಿಂದಿದೆ. ಸಂದರ್ಭಾನುಸಾರ ಮಾರುಕಟ್ಟೆಯಲ್ಲಿ ಲಿಕ್ವಿಡಿಟಿ ಸೃಷ್ಟಿ ಮಾಡುವ ಹೊಣೆಗಾರಿಕೆ ಕೂಡಾ ಫಂಡ್ ಹೌಸಿನ ಹೆಗಲ ಮೇಲಿದೆ. ಅದಕ್ಕಾಗಿ ಏಜೆಂಟರನ್ನು ನಿಯುಕ್ತಿಗೊಳಿಸುವ ಸೌಕರ್ಯ ನೀಡಲಾಗಿದೆ. 9. ಎರಡು ಮುಖ್ಯ ಅಂಶಗಳಲ್ಲಿ ಈ ಬಾಂಡುಗಳು ಬ್ಯಾಂಕ್ ಎಫ್.ಡಿ. ಗಳಿಗಿಂತ ಉತ್ತಮವಾಗಿವೆ. ಮೊದಲನೆಯದಾಗಿ ಇಳಿಯುತ್ತಿರುವ ಬಡ್ಡಿ ದರ ಕಾಲಘಟ್ಟದಲ್ಲಿ ಬಾಂಡುಗಳು ಮಾರುಕಟ್ಟೆಯಲ್ಲಿ ತಮ್ಮ ಬೆಲೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಬಡ್ಡಿ ದರ ಇಳಿದಂತೆÇÉಾ ಬಾಂಡುಗಳನ್ನು ಹೆಚ್ಚಿನ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಬಹುದು, ಈ ಸೌಲಭ್ಯ ಎಫ್.ಡಿ.ಗಳಿಗೆ ಇಲ್ಲ. ಅವು ಟ್ರೇಡೇಬಲ್ ಅಲ್ಲ. ಎರಡನೆಯದಾಗಿ ಈ ಬಾಂಡುಗಳು ಇತರ ಡೆಟ್ ಫಂಡುಗಳಂತೆ ದೀರ್ಘಕಾಲಿಕ ಕ್ಯಾಪಿಟಲ್ ಗೈನ್ಸ್ ಟ್ಯಾಕ್ಸ್‌ಗೆ ಒಳಪಡುತ್ತವೆ.ಅಂದರೆ 3 ವರ್ಷ ಮೀರಿದ ಹೂಡಿಕೆಗೆ ಶೇ.20 ಟ್ಯಾಕ್ಸ್ ಕೊಟ್ಟರೆ ಸಾಕು; ಅದೂ ಕೂಡಾ ಇಂಡೆಕ್ಸೇಶನ್ ಬಳಿಕ. ಇಂಡೇಕ್ಸೇಶನ್ ಸೂತ್ರದ ಪ್ರಕಾರ ಹಣದುಬ್ಬರದ ಅಂಶವನ್ನು ಮೌಲ್ಯವೃದ್ಧಿªಯಿಂದ ಕಳೆದು ಅಸಲಿ ಲಾಭದ ಪ್ರಮಾಣದ ಮೇಲೆ ಮಾತ್ರವೇ ತೆರಿಗೆ ಕಟ್ಟಿದರೆ ಸಾಕು. ಬ್ಯಾಂಕು ಎಫ್.ಡಿ.ಗಳಿಗೆ ಪ್ರತಿ ವರ್ಷ ಲಾಭಾಂಶದ ಮೇಲೆ ಅನ್ವಯ ದರದಲ್ಲಿ ತೆರಿಗೆ ಕಟ್ಟಬೇಕು. ಜಾಸ್ತಿ ಆದಾಯ ಇದ್ದುಕೊಂಡು ತೆರಿಗೆ ಕಟ್ಟುವವರಿಗೆ ಭಾರತ್ ಬಾಂಡ್ ಲಾಭದಾಯಕವಾದೀತು. – ಜಯದೇವ ಪ್ರಸಾದ ಮೊಳೆಯಾರ