Advertisement
ಈಗ ನಮ್ಮ ಮುಖ್ಯಮಂತ್ರಿಗಳು ಈ ವಿಷಯದಲ್ಲಿ ಮುಂದುವರಿ ಯಬೇಕಾದ ಹೊಣೆಯನ್ನು, ರಾಜ್ಯ ಸಚಿವ ಸಂಪುಟದ ಈ ಶಿಫಾ ರಸನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಜವಾಬ್ದಾರಿಯನ್ನು ಕೇಂದ್ರ ಸರಕಾರದ ಹೆಗಲಿಗೇರಿಸಿದ್ದಾರೆ. ಈ ಮೂಲಕ ಲಿಂಗಾ ಯತರು ಮುಸ್ಲಿಮರಂತೆ ಅಥವಾ ಕ್ರಿಶ್ಚಿಯನರಂತೆ ಅಲ್ಪಸಂಖ್ಯಾಕ ಧರ್ಮದವರೆನಿಸುತ್ತಾರೆಯೇ ಎಂಬ ಪ್ರಶ್ನೆ ಕೇಂದ್ರ ಸರಕಾರದೆ ದುರು ಉದ್ಭವಿಸಿದೆ.ಅದನ್ನು ಇತ್ಯರ್ಥ ಪಡಿಸಬೇಕಾದ ಸವಾಲೂ ಕೇಂದ್ರ ಸರಕಾರದ ಎದುರಿಗಿದೆ.
Related Articles
Advertisement
ಕರ್ನಾಟಕ ಸಂಪುಟ ಸಭೆಯ ಶಿಫಾರಸನ್ನು ಕೇಂದ್ರ ಸರಕಾರ ಅಂಗೀಕರಿಸಲಿ ಅಥವಾ ಬಿಡಲಿ ಸಿದ್ದರಾಮಯ್ಯನವರ ಸರಕಾರ ವನ್ನು° ಕ್ರೈಸ್ತ, ಇಸ್ಲಾಮ್, ಬೌದ್ಧ, ಜೈನ, ಸಿಕ್ಖ್ ಅಥವಾ ಜೋರಾಸ್ಟ್ರಿ ಯನ್‌ನಂಥ ಧರ್ಮಗಳ ಸ್ಥಾಪಕರ ಸಾಲಿನಲ್ಲಿ ನಿಲ್ಲಿಸುವುದು ಖಚಿತ. ಕುತೂಹಲದ ಅಂಶವೆಂದರೆ ಸಿದ್ದರಾಮಯ್ಯ ಅವರು ಈ ನೂತನ ಧರ್ಮದ “ಅಂಗ’ವಾಗಿಲ್ಲ; ನೂತನ ಧರ್ಮವನ್ನು ಅಪ್ಪಿಕೊಳ್ಳುವ ಇರಾದೆಯಾಗಲಿ ಯೋಜನೆಯಾಗಲಿ ಅವರಲ್ಲಿ ಇದ್ದಂತಿಲ್ಲ. ಲಿಂಗಾ ಯತರಲ್ಲೂ ಕುರುಬ ಸಮುದಾಯದವರಿದ್ದಾರೆ ಎಂಬುದೇನೋ ನಿಜವೇ. ಆದರೆ ತಾನು “ಲಿಂಗಾಯತ – ಕುರುಬ’ ಎಂದು ಸಿದ್ದರಾಮಯ್ಯ ಎಲ್ಲೂ ಹೇಳಿಕೊಂಡಿಲ.
ಇಲ್ಲಿ ಗಮನಿಸಲೇ ಬೇಕಾದ ಸಂಗತಿ ಇದು – ವೀರ ಶೈವ ಹಾಗೂ ಲಿಂಗಾಯತ ಎರಡೂ ಒಂದೇ ಎಂಬ ಎರಡೂ ಸಮುದಾಯಗಳ ಸ್ವಾಮೀಜಿಗಳನ್ನೂ ಒಳಗೊಂಡಂತೆ ಅನೇಕರು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಸಚಿವ ಸಂಪುಟ ತಿರಸ್ಕರಿಸಿದೆ. ಎರಡೂ ಸಮುದಾಯಗಳೂ ಒಂದೇ ಆಗಿದ್ದು, ಎರಡೂ ಹಿಂದು ಸಮು ದಾಯದ ಅಂಗಗಳಲ್ಲ ಎಂಬ ಏಕಾಭಿಪ್ರಾಯ ರೂಪುಗೊಂಡರೆ ಮಾತ್ರ ತಾವು ಲಿಂಗಾಯತರಿಗೆ ಅಲ್ಪ ಸಂಖ್ಯಾಕರ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಗಳು ಮೊದಲಿಗೆ ಹೇಳಿದ್ದರು. ಸರಕಾರ ಈ ನಿಲುವಿನಿಂದ ಹಿಂದೆ ಸರಿಯಿತು. ಕರ್ನಾಟಕ ಉತ್ಛ ನ್ಯಾಯಾಲಯದ ನಿವೃತ್ತ ನ್ಯಾಯಾ ಧೀಶ ಎಚ್. ಎನ್. ನಾಗಮೋಹನ್ ದಾಸ್ ಅವರ ನೇತೃತ್ವದ ಸಮಿತಿಯ ಶಿಫಾರಸನ್ನು ಅಂಗೀಕರಿಸಲು ನಿರ್ಧರಿಸಿತು. ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದೆಯೆಂದೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯೆಂಬ ಟೀಕೆಯನ್ನೀಗ ಕಾಂಗ್ರೆಸ್ ಸರಕಾರ ಎದುರಿಸುವಂತಾಗಿದೆ.
ಅಲ್ಪಸಂಖ್ಯಾಕರೂ ರಾಷ್ಟ್ರೀಯ ಏಕತೆಯೂ ದೇಶದಲ್ಲಿ (ಧಾರ್ಮಿಕ) ಅಲ್ಪಸಂಖ್ಯಾಕ ಸಮುದಾಯ ಎಂಬ ಪದಪುಂಜಕ್ಕೆ ಗೌರವವಿಲ್ಲ. ಅದನ್ನು ನೇತ್ಯಾತ್ಮಕ ದೃಷ್ಟಿಯಿಂದಲೇ ನೋಡಲಾಗುತ್ತಿದೆ ಎಂಬ ಸತ್ಯವನ್ನು ಲಿಂಗಾಯತ ಪ್ರತ್ಯೇಕತಾ ವಾದಿಗಳು ಮನದಟ್ಟು ಮಾಡಿಕೊಳ್ಳಬೇಕಿದೆ. ಇದಕ್ಕೆ ಕಾರಣ ಪಾಕಿಸ್ಥಾನದ ಹುಟ್ಟಿಗೆ ಕಾರಣವಾದ ಧಾರ್ಮಿಕ ಅಲ್ಪಸಂಖ್ಯಾಕರ ಪ್ರತ್ಯೇಕತಾವಾದಿ ಆಂದೋಲನ. ಜಿನ್ನಾ ಅವರು ರಾಜಕೀಯ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಮೊದಲೇ ಕೆಲ ಗಣ್ಯ ಮುಸ್ಲಿಂ ನೇತಾರರು ತಮ್ಮ ಪ್ರತ್ಯೇಕ ಅಸ್ಮಿತೆ ಕುರಿತಂತೆ ಮಾತನಾಡುತ್ತಿದ್ದರು; ಹಿಂದೂ ಪಾರಮ್ಯದ ಬಗ್ಗೆ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದರು. ಬಿಜೆಪಿ ನಾಯಕರನ್ನೂ ಒಳಗೊಂಡಂತೆ ನಮ್ಮ ರಾಜಕಾರಣಿಗಳು ಒಂದು ಕಹಿ ಸತ್ಯವನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲು ತಯಾರಿಲ್ಲ ವೆಂದೇ ಹೇಳಬೇಕು. ಅದೆಂದರೆ, ಧಾರ್ಮಿಕ ಅಲ್ಪಸಂಖ್ಯಾಕರು (ಮುಸ್ಲಿಮರು ಹಾಗೂ ಕ್ರೈಸ್ತರು) ಯಾವ ಯಾವ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೋ ಅಂಥ ರಾಜ್ಯಗಳಲ್ಲಿ ಪ್ರತ್ಯೇಕತಾ ವಾದಿ ಬೇಡಿಕೆಗಳು, ಉಗ್ರವಾದಿ ಗಲಭೆಗಳು ಹಾಗೂ ಭಯೋ ತ್ಪಾದಕ ಚಟುವಟಿಕೆಗಳಂಥ ಸಮಸ್ಯೆಗಳು ತಾಂಡವವಾಡುತ್ತಿವೆ ಯೆಂಬುದು. ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲ ಕಡೆ ಅಲ್ಲವಾ ದರೂ ಕಾಶ್ಮೀರ ಕಣಿವೆಯಲ್ಲಿ, ಹಾಗೆಯೇ ನಾಗಾಲ್ಯಾಂಡ್ ಹಾಗೂ ಮೇಘಾಲಯದಂಥ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವುದು ಇದೇ. ಸಿಕ್ಖ್ ಪ್ರತ್ಯೇಕತಾವಾದಿಗಳು ನಡೆಸುತ್ತಿದ್ದ ಖಾಲಿಸ್ಥಾನ್ ಆಂದೋಲನ ಈಗ ತಣ್ಣಗಾಗಿದೆ.
ಭೂತಪೂರ್ವ ಬಾಂಬೆ – ಕರ್ನಾಟಕ ಹಾಗೂ ಹೈದರಾಬಾದ್ – ಕರ್ನಾಟಕ ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ರಾಜ್ಯವನ್ನು ಅಸ್ತಿತ್ವಕ್ಕೆ ತರಬೇಕೆಂಬ ಮೆದುದನಿಯ ಬೇಡಿಕೆಯನ್ನು ಕರ್ನಾಟಕದ ರಾಜಕೀಯ ನಾಯಕರು ಹಾಗೂ ಪಕ್ಷಗಳು ತಮ್ಮ ಶಕ್ತಿಯನ್ನೆಲ್ಲ ಬಳಸಿ ಹತ್ತಿಕ್ಕುತ್ತ ಬರುತ್ತಿರುವುದನ್ನು ನಾವು ಬಲ್ಲೆವು. ಪ್ರಾದೇಶಿಕ ಅಸಮತೋಲನದ ಮಾತು ಬಂದಾಗೆಲ್ಲ ಇಂಥ ಪ್ರತ್ಯೇಕತಾ ಆಗ್ರಹ ವ್ಯಕ್ತವಾಗಿಯೇ ಆಗುತ್ತದೆ. ಅಖಂಡ ಆಂಧ್ರಪ್ರದೇಶ ತೆಲಂಗಾಣ ಹಾಗೂ ಆಂಧ್ರಪ್ರದೇಶವಾಗಿ ಇಬ್ಟಾಗವಾದ ಬಳಿಕವೂ ಇಂಥ (ಪ್ರತ್ಯೇಕ ರಾಜ್ಯ ಬೇಕೆಂಬ) ಆಗ್ರಹಕ್ಕೆ ವಿರೋಧ ವ್ಯಕ್ತವಾಗುತ್ತಿ ರುವುದು ಸುಳ್ಳಲ್ಲ. ರಾಜ್ಯ ಇಬ್ಟಾಗವಾಗಬೇಕೆಂಬ ಸಲಹೆಯನ್ನು ಸಹಿಸದ ಸಿದ್ದರಾ ಮಯ್ಯ ಹಿಂದೂ ಧರ್ಮ ಹೋಳಾಗಬೇಕೆಂದು ಯಾಕೆ ಬಯಸ ಬೇಕು? ಧಾರ್ಮಿಕ ಅಲ್ಪಸಂಖ್ಯಾಕ ಸ್ಥಾನಮಾನದ ಬಗ್ಗೆ ಮಾತ ನಾಡುವ ಹಕ್ಕು ಆರೆಸ್ಸೆಸ್ ನಾಯಕರಿಗಾಗಲಿ, ಪೇಜಾವರ ಸ್ವಾಮಿ ಯವರಿಗಾಗಲಿ ಎಲ್ಲಿದೆ ಎಂದು ಕೆಲ ಲಿಂಗಾಯತ ಪ್ರತ್ಯೇಕತಾವಾದಿಗಳು ಕೇಳುತ್ತಾರೆ. ಹಿಂದುತ್ವದ ಏಕತೆಯನ್ನು ಪ್ರತಿಪಾದಿಸುವವರೆಲ್ಲರಿಗೂ ಏಕತೆ ಕಾಪಿಡುವ ಹಕ್ಕಿದೆ; ಅವರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಹಿಂದೂ ಧರ್ಮವೆಂದರೆ ಸರ್ವೋತ್ಛ ನ್ಯಾಯಾಲಯವೇ ತನ್ನ ಒಂದೆರಡು ತೀರ್ಪುಗಳಲ್ಲಿ ಹೇಳಿದಂತೆ ಶಾಸ್ತ್ರೀಯ ದೃಷ್ಟಿಯಲ್ಲಿ ಒಂದು “ಧರ್ಮ’ ಅಲ್ಲದಿರಬಹುದು; ಅದೊಂದು “ಜೀವನ ವಿಧಾನ’ವೇ ಇರಬಹುದು; ಇದು ಬೇರೆ ವಿಚಾರ.
ಲಿಂಗಾಯತ ಪ್ರತ್ಯೇಕತಾವಾದಕ್ಕೆ ಕಾರಣವೇನು? ಮೇಲ್ನೋ ಟಕ್ಕೆ ಎದ್ದು ತೋರುವ ಕಾರಣವೆಂದರೆ ಮಠಾಧಿಪತಿಗಳೂ ಸೇರಿದಂತೆ ಈ ಸಮುದಾಯದವರು ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳಿಗೆ ಧಾರ್ಮಿಕ ಅಲ್ಪಸಂಖ್ಯಾಕ ಸ್ಥಾನಮಾನ ದೊರಕಿಸಿ ಕೊಳ್ಳುವುದೇ ಆಗಿದೆ. ಇಲ್ಲಿ ಇನ್ನೊಂದು ಅಂಶವನ್ನೂ ಗಮನಿಸಬೇ ಕಾಗಿದೆ. ಲಿಂಗಾ ಯತ ಪ್ರತ್ಯೇಕತಾವಾದಿಗಳು ತಮ್ಮ ನಿಜವಾದ ಸಮಸ್ಯೆ – ಸಂಕಷ್ಟಗಳೇನೆಂಬುದನ್ನು ರಾಜ್ಯದಲ್ಲಿರುವ ವೀರಶೈವ ರಿಗೆ ಅಥವಾ ಅನೇಕ ಲಿಂಗಾಯತೇತರರಿಗೆ ವಿವರಿಸುವ ಗೋಜಿಗೆ ಹೋಗದೆ ತಮ್ಮ ಪ್ರತ್ಯೇಕತಾ ಆಗ್ರಹಕ್ಕೆ ರಾಜ್ಯ ಸರಕಾರದ ಒಪ್ಪಿಗೆ ದೊರಕಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ! ಹಿಂದೂ ಧರ್ಮದ ತೆಕ್ಕೆಯೊಳ ಗಿದ್ದರೆ ತಮಗೆ ಆಗುವ ತೊಂದರೆಗಳೇನೆಂದು ಅವರು ಯಾರಿಗೇ ಆಗಲಿ ವಿವರಿಸಿದ್ದಿದೆಯೆ? ಪರಿಶಿಷ್ಟ ಜಾತಿಗಳ ಜನರಂತೆ ಅಸ್ಪೃಶ್ಯತೆಯಂಥ ಯಾವುದೇ ತೆರನಾದ ತಾರತಮ್ಯಕ್ಕೆ ಅವರು ಗುರಿಯಾಗಿದ್ದಾರೆಯೇ? ಮುಸ್ಲಿಮರಿಗೂ ತಮ್ಮದೇ ಸಮಸ್ಯೆಗಳಿವೆ; ಈ ಕಹಿಸತ್ಯವನ್ನು ಬದಿಗೆ ಸರಿಸುವಂತಿಲ್ಲ.
ಲಿಂಗಾಯತರು ಇತರ ಹಿಂದೂಗಳಿಗಿಂತ ಪ್ರತ್ಯೇಕವಾದ ಸಮುದಾ ಯಕ್ಕೆ ಸೇರಿದವರೆಂಬ ವಾದವನ್ನು ಪರಿಶೀಲಿಸಿ ನ್ಯಾ| ನಾಗಮೋಹನ ದಾಸ್ ಸಮಿತಿ ಸಲ್ಲಿಸಿರುವ ವರದಿಯಲ್ಲಿನ ವಿವರಗಳನ್ನು ಸರಕಾರ ಬಹಿರಂಗ ಪಡಿಸಿದರೆ ಇದೊಂದು ಔಚಿತ್ಯಪೂರ್ಣ ಕ್ರಮವೆನಿಸಬಲ್ಲುದು. ಈ ವಿಷಯಕ್ಕೆ ಸಂಬಂಧಿಸಿದ ನ್ಯಾಯಾಲಯಗಳ ತೀರ್ಪುಗಳು, ಪರಿಶೀಲಿಸಲು ಯೋಗ್ಯವಾದ ಧಾರ್ಮಿಕ ಗ್ರಂಥಗಳು ಹಿಂದೂ ಧರ್ಮದಲ್ಲಿರುವಂತೆಯೇ ಲಿಂಗಾಯತರಲ್ಲೂ ಜಾತಿ ತಾರತಮ್ಯವಿದೆಯೇ ಎಂಬ ವಿಚಾರ, ಅವರು ಒಪ್ಪಿಕೊಂಡಿರುವ ಹಿಂದೂ ವೈಯಕ್ತಿಕ ಕಾನೂನು, ಹಿಂದೂ ದೇವತೆಗಳ ಆರಾಧನೆ, ವೇದಗಳ ವಿರೋಧ ಅಥವಾ ಅವರು ಹಿಂದೂಗಳಲ್ಲವೆಂದು ತೋರಿಸಿಕೊಡುವ ಅವರ ಕೆಲ ಧಾರ್ಮಿಕ ಆಚಾರ-ವಿಚಾರಗಳು ಇವೆಲ್ಲವೂ ಪರಿಶೀಲಿಸಬೇಕಾದ ವಿಷಯ ಗಳೇ. ಹೇಳಲೇಬೇಕಾದ ಇನ್ನೊಂದು ಮಾತಿದೆ, ಯಾವುದೇ ಉತ್ಛ ನ್ಯಾಯಾಲಯ ಅಥವಾ ಸರ್ವೋತ್ಛ ನ್ಯಾಯಾಲಯ ಲಿಂಗಾಯತ ವರ್ಗವನ್ನು ಅಲ್ಪಸಂಖ್ಯಾಕ ಸಮುದಾಯವೆಂದು ಹೇಳಿಲ್ಲ. ಅವರನ್ನು ಹಿಂದೂ ಪ್ರೊಟೆಸ್ಟೆಂಟ್‌ಗಳು ಅಥವಾ ಶೂದ್ರರು ಎಂದು ವರ್ಗೀಕರಿಸಲಾಗಿದೆ.
ಕರ್ನಾಟಕದಲ್ಲಿ ರಾಜಕೀಯ, ಸರಕಾರಿ ಸೇವೆ, ವ್ಯಾಪಾರ, ಕೃಷಿ, ಶಿಕ್ಷಣ, ನ್ಯಾಯಾಂಗ ಹಾಗೂ ವೃತ್ತಿಪರ ಹುದ್ದೆಗಳು ಹೀಗೆ ಬಹುತೇಕ ಕ್ಷೇತ್ರಗಳಲ್ಲಿ ಲಿಂಗಾಯತ ಜಾತಿಯ ಪಾರಮ್ಯ ಎದ್ದು ತೋರುವ ರೀತಿಯಲ್ಲಿದೆ. ಹಿಂದುಳಿದ ವರ್ಗಗಳ ಗತಿ-ಸ್ಥಿತಿ ಪರಿಶೀಲನೆಯ ಉದ್ದೇಶದ ಸಮಿತಿಗಳ ಪೈಕಿ ಮಿಲ್ಲರ್ ಸಮಿತಿ ಯೊಂದನ್ನು ಬಿಟ್ಟರೆ ಬೇರೆ ಯಾವುದೇ ಸಮಿತಿ ಲಿಂಗಾಯತರನ್ನು ಹಿಂದುಳಿದ ಸಮುದಾಯದವರೆಂದು ಹೇಳಿಲ್ಲ. ನೆರೆಯ ಮಹಾ ರಾಷ್ಟ್ರದಲ್ಲೂ ಲಿಂಗಾಯತ ರಾಜಕಾರಣಿಗಳಿಗೆ ಮಣೆ ಹಾಕಲಾಗಿದೆ. ಲೋಕಸಭೆಯ ಸ್ಪೀಕರ್ ಶಿವರಾಜ ಪಾಟೀಲ್, ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಸ್ಪೀಕರ್ ರತ್ನಪ್ಪ ಕುಂಬಾರ್ ಈ ಮಾತಿಗೆ ಉದಾಹರಣೆಗಳು. ಭಾರತೀಯ ಭೂ ಸೇನೆಯ ಮೂರನೆಯ ದಂಡನಾಯಕ ಜ| ಎಸ್.ಎಂ. ಶ್ರೀ ನಾಗೇಶ್ ಅವರು ಮಹಾರಾಷ್ಟ್ರ ಮೂಲದ ಲಿಂಗಾಯತರು. ಗಮನಿಸಿ , ಪ್ರತ್ಯೇಕ ಧರ್ಮ ಬೇಕೆಂಬ ಬೇಡಿಕೆ ಮುಂದಿಟ್ಟವರು ಕೆಲ ಲಿಂಗಾಯತ ಸಚಿವರುಗಳು; ಬಳಿಕ ಕೆಲವರು ಮಠಾಧಿಪತಿಗಳು ಇವರನ್ನು ಬೆಂಬಲಿಸಿದರು. ಇಂಥ ಮಂತ್ರಿಗಳನ್ನು ಹಿಂದೂ ಧರ್ಮ, ವೀರಶೈವ ಧರ್ಮ ಅಥವಾ ಲಿಂಗಾಯತ ಧರ್ಮದ ಅಧಿಕೃತ ಪ್ರತಿನಿಧಿಗಳೆಂದು ಪರಿಗಣಿಸಲು ಸಾಧ್ಯವಿಲ್ಲ. ಈ ಹಿಂದೆ ಅಧಿಕಾರಿಯಾಗಿದ್ದು ರಾಜಕಾರಣಿಯಾಗಿ ಪರಿವರ್ತಿತರಾದ ಜೆ.ಬಿ. ಮಲ್ಲಾರಾಧ್ಯ ಅವರು “ವೀರಶೈವರು ಹಾಗೂ ಲಿಂಗಾಯತರು ಧಾರ್ಮಿಕ ಅಲ್ಪಸಂಖ್ಯಾಕರು’ ಎಂದು ಹೇಳಿತ್ತು. ಆದರೆ ಅವರು ಈ ಹೇಳಿಕೆ ನೀಡಿದ್ದು ರಾಜ್ಯ ವೀರಶೈವ ಮಹಾಸಭಾದ ಅಧ್ಯಕ್ಷರೆಂಬ ನೆಲೆಯಲ್ಲಿ. – ಅರಕೆರೆ ಜಯರಾಮ್