Advertisement

ಜಗ್ಗಿ –ಜಾನುವಿನ ಪ್ರೇಮ ಪುರಾಣ

11:31 AM Sep 08, 2019 | mahesh |

ಕಿರುಚಿತ್ರಕ್ಕೆ ಬರೆದ ಕಥೆ ಈಗ ಸಿನಿಮಾ ಆಗುತ್ತಿದೆ. ಹೌದು, ಹೊಸಬರೇ ಸೇರಿ ಮಾಡುತ್ತಿರುವ ಚಿತ್ರಕ್ಕೆ ‘ಜಗ್ಗಿ ಜೊತೆ ಜಾನು’ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಜಗನ್ನಾಥ್‌ ನಿರ್ದೇಶಕರು. ಅವರಿಗೆ ಇದು ಮೊದಲ ಅನುಭವ. ‘ಬಿಂಬ’ ಶಾಲೆಯ ವಿದ್ಯಾರ್ಥಿಯಾಗಿರುವ ಜಗನ್ನಾಥ್‌, ಈ ಮೂಲಕ ಒಂದು ಪ್ರೇಮಕಥೆ ಹಿಡಿದು ಬಂದಿದ್ದಾರೆ. ವಿಶೇಷವೆಂದರೆ, ಚಿತ್ರದ ಪೋಸ್ಟರ್‌ಗೆ ಶರಣ್‌ ಚಾಲನೆ ನೀಡಿದ್ದಾರೆ. ಹಾಗಂತ, ಚಿತ್ರೀಕರಣ ಶುರುವಾಗುತ್ತೆ ಅಂತಂದುಕೊಳ್ಳುವಂತಿಲ್ಲ. ಚಿತ್ರ ಈ ವರ್ಷದ ಅಂತ್ಯಕ್ಕೆ ಶುರುವಾಗುವ ಸಾಧ್ಯತೆ ಇದೆ.

Advertisement

ಇನ್ನು, ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಲವ್‌ಸ್ಟೋರಿ ಹೊಂದಿರುವ ಚಿತ್ರ. ಇಲ್ಲೂ ಪ್ರೀತಿ, ವಿರಹ, ವಿಷಾದ, ಭಾವುಕತೆ, ಸಾಹಸ, ಹಾಸ್ಯ ಇತ್ಯಾದಿ ಅಂಶಗಳು ಇರಲಿವೆ. ಚಿತ್ರಕ್ಕೆ ಕುಂದಾಪುರದ ಜೈ ಶೆಟ್ಟಿ ಹೀರೋ. ಅವರು ಆಡಿಟರ್‌ ಆಗಿ ಕೆಲಸ ಮಾಡುತ್ತಿದ್ದು, ಈ ಸಿನಿಮಾ ಮೂಲಕ ಹೀರೋ ಆಗುತ್ತಿದ್ದಾರೆ. ಲವರ್‌ಬಾಯ್‌ ಮತ್ತು ಜವಾಬ್ದಾರಿ ಇರುವ ಹುಡುಗನ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಇನ್ನು, ವಿದ್ಯಾಜಯ್‌ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನೀನಾಸಂ ಅಶ್ವಥ್‌ ಅವರು ಖಳನಟರಾಗಿ ನಟಿಸಿದರೆ, ಉಳಿದಂತೆ ‘ಕಾಕ್ರೋಚ್’ ಖ್ಯಾತಿಯ ಸುಧಿ, ಕೆಂಪೇಗೌಡ, ರಚಿಕಾ ಮುಂತಾದವರು ನಟಿಸುತ್ತಿದ್ದಾರೆ.

ಚಿತ್ರಕ್ಕೆ ರಾಜೀವ್‌ ಲೋಚನ್‌ ಕಥೆ ಬರೆದಿದ್ದಾರೆ. ಅವರು ಕಿರುಚಿತ್ರಕ್ಕೆ ಬರೆದ ಕಥೆ ಈಗ ಸಿನಿಮಾವಾಗುತ್ತಿದೆ. ಮಂಜುನಾಥ್‌ ಚಿತ್ರದ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಎಸ್‌.ನಾಗೇಂದ್ರ ಪ್ರಸಾದ್‌ ಸಂಕಲನವಿದೆ. ಕೌರವ ವೆಂಕಟೇಶ್‌ ಸಾಹಸವಿದೆ. ಧನ್‌ಕುಮಾರ್‌ ನೃತ್ಯ ನಿರ್ದೇಶನವಿದೆ. ಉಮೇಶ್‌.ಎಂ.ಕತ್ತಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷ ಮೇ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡದ್ದು.

Advertisement

Udayavani is now on Telegram. Click here to join our channel and stay updated with the latest news.

Next