ನವ ದೆಹಲಿ : ನೂತನ ಶಿಕ್ಷಣ ನೀತಿ, ಭಾರತೀಯ ಎಲ್ಲಾ ಭಾಷೆಗಳ ಸಂರಕ್ಷಣೆ, ಅಭಿವೃದ್ಧಿ, ಸಬಲೀಕರಣಗಳ ಬಗ್ಗೆ ಮೋದಿ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಾತೃ ಭಾಷೆ ದಿನದ ಅಂಗವಾಗಿ ಅವರು ಟ್ವೀಟ್ ಮಾಡಿದ್ದು, ಭಾವನೆಗಳನ್ನು ಹಂಚಿಕೊಳ್ಳಲು ಮಾತೃ ಭಾಷೆ ಉತ್ತಮ ಮಾಧ್ಯಮ ಎಂದು ಹೇಳಿಕೊಂಡಿದ್ದಾರೆ.
ಓದಿ : ಕೋವಿಡ್ ಎರಡನೇ ಅಲೆಯ ಅಪಾಯದ ಹಿನ್ನೆಲೆ : ಆತಿಥ್ಯ ತಾಣಗಳಿಗೆ ಮುನ್ನೆಚ್ಚರಿಕೆ ಸುತ್ತೋಲೆ
ಭಾರತೀಯ ಎಲ್ಲಾ ಭಾಷೆಗಳ ಅಭಿವೃದ್ಧಿ, ಸಂರಕ್ಷಣೆ ಹಾಗೂ ಸಬಲೀಕರಣದ ಬಗ್ಗೆ ಮೋದಿ ಸರ್ಕಾರದ ಬದ್ಧತೆಯನ್ನು ಹೊಂದಿದೆ ಎಂದು ನಮ್ಮ ನೂತನ ಶಿಕ್ಷಣ ನೀತಿಯು ಪ್ರತಿಬಿಂಬಿಸುತ್ತದೆ ಎಂದು ಅಮಿತ್ ಶಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಮಕ್ಕಳಲ್ಲಿ ದೇಶದ ಸಂಸ್ಕೃತಿಯ ಅಡಿಪಾಯವನ್ನು ಬಲಪಡಿಸಲು ಮಾತೃಭಾಷೆಯ ಬಳಕೆಗಾಗಿ ಗರಿಷ್ಠ ಪ್ರಯತ್ನಗಳನ್ನು ಮಾಡಬೇಕು ಎಂದು ಗೃಹ ಸಚಿವರು ಹೇಳಿದ್ದಾರೆ. “ಅಂತರರಾಷ್ಟ್ರೀಯ ಮಾತೃಭಾಷಾ ದಿನದಂದು ಶುಭಾಶಯಗಳು. ಈ ದಿನ ನಮ್ಮ ಸಾಂಸ್ಕೃತಿಕ ಪರಂಪರೆಯೊಂದಿಗೆ ಸಂಪರ್ಕದಲ್ಲಿರಲು ಪ್ರೇರೇಪಿಸುತ್ತದೆ” ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಓದಿ : ಪ್ರಿಯಾಂಕ ಗಾಂಧಿ ವಾದ್ರಾ ಇಂದು ಪ್ರಯಾಗ್ ರಾಜ್ ಗೆ ಭೇಟಿ..!