Advertisement

ನೂತನ ಶಿಕ್ಷಣ ನೀತಿ ಜಾರಿ ಅನಿವಾರ್ಯ

05:17 PM Feb 27, 2022 | Shwetha M |

ವಿಜಯಪುರ: ಭಾರತದ ಶಿಕ್ಷಣ ವ್ಯವಸ್ಥೆ ಆಧಾರದಲ್ಲೇ ಭಾರತವೂ ಸಾಗಬೇಕು. ಶಿಕ್ಷಣ ಎಂದರೆ ಉದ್ಯೋಗ, ನೌಕರಿ ಹುಡುಕುವ ಕಲಿಕೆಯಲ್ಲ. ದೇಶದ ಸಮಗ್ರ ಅಭಿವೃದ್ಧಿಗಾಗಿ ಪ್ರಜೆಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಮೇಲ್ಮನೆ ಶಾಸಕ ಅರುಣ ಶಹಾಪುರ ಅಭಿಪ್ರಾಯಪಟ್ಟರು.

Advertisement

ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್‌.ಬಿ. ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯ, ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ಪರಿಷತ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ವಯ ಪದವಿ ಪಠ್ಯಗಳ ಪರಿಷ್ಕರಣ ಮತ್ತು ರಚನಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ-2020 ಭಾರತಾದ್ಯಂತ ಜಾರಿಗೊಳ್ಳುತ್ತಿದೆ ಎಂದರು.

ಶೈಕ್ಷಣಿಕವಾಗಿ ಬದಲಾವಣೆ ಅನಿವಾರ್ಯವಾಗಿದೆ. ಹೀಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಹೊಸ ಶಿಕ್ಷಣ ನೀತಿ ಅಳವಡಿಸಿಕೊಳ್ಳುವುದು ಅನಿವಾರ್ಯವೂ ಹೌದು. ಹಲವು ಸಲಹೆ ಸೂಚನೆಗಳ ಮೆರೆಗೆ ಈ ಒಂದು ನೀತಿ ಜಾರಿಯಾಗಿದ್ದು ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಕನ್ನಡ ಪಠ್ಯಗಳನ್ನು ರಚನೆ ಮಾಡುವ ಉದ್ದೇಶದಿಂದ ಕನ್ನಡ ಪ್ರಾಧ್ಯಾಪಕರನ್ನೆಲ್ಲ ಒಂದೆಡೆ ಸೇರಿಸಿ ಅವರ ಅಭಿಪ್ರಾಯ ಹಾಗೂ ಜ್ಞಾನವನ್ನು ಬಳಸಿ ಪಠ್ಯಗಳು ರಚನೆಯಾಗಬೇಕು ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ-2020ರ ಜಾಗತಿಕರಣದ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಡಾ| ಈರಣ ಮುಳುಗುಂದ ಮಾತನಾಡಿ, ಇಂದಿನ ಶಿಕ್ಷಣವು ಜಾಗತಿಕರಣದ ಪ್ರಭಾಕ್ಕೆ ಒಳಗಾಗುತ್ತಿದ್ದು ಇಂದಿನ ಶಿಕ್ಷಣ ನೀತಿಯಿಂದಾಗಿ ಅನೇಕ ಭಾಷೆಗಳು ಮುನ್ನೆಲೆಗೆ ಬರುತ್ತಿವೆ. ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಮಹತ್ವ ದೊರೆಯುತ್ತಿದೆ ಎಂದು ಹೇಳಿದರು.

ಉದ್ಘಾಟಕರಾಗಿದ್ದ ಮಹಾಂತೇಶ ಬಿರಾದಾರ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ-2020ರ ಪಠ್ಯಕ್ರಮವು ಸಂಬಂಧಗಳನ್ನು ಜೋಡಿಸುವಂತಿರಬೇಕು. ಮೌಲ್ಯಾಧಾರಿತವಾಗಿರಬೇಕು ಎನ್ನುತ್ತ ಹೊಸ ಶಿಕ್ಷಣ ನೀತಿಗಳು ಸವಾಲಾಗುತ್ತಿವೆ. ರಾಷ್ಟ್ರೀಯ ಶಿಕ್ಷಣ ನೀತಿಯು ಯಶಸ್ವಿಯಾಗಲಿ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ವಿಶೇಷಾ ಧಿಕಾರಿ ಎಂ.ಜಯಪ್ಪ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ರಚನೆಯಾಗುವ ಪಠ್ಯಕ್ರಮವು ವಿಭಿನ್ನವಾಗಿದೆ. ವಿದ್ಯಾರ್ಥಿಗಳ ಅಭಿವೃದ್ಧಿಗೆ ಪೂರಕ ಆಗುವಂತೆ ಇರಬೇಕು. ಅದನ್ನು ಸಮಾನ ಮನಸ್ಸುಳ್ಳ ಎಲ್ಲ ಕನ್ನಡ ಪ್ರಾಧ್ಯಾಪಕರು ಸೇರಿ ರಚಿಸಬೇಕು. ಪಠ್ಯಕ್ರಮದ ರಚನೆಯು ಉಳಿದ ವಿಶ್ವವಿದ್ಯಾಲಯಗಳಿಗೆ ಮಾದರಿಯಾಗಬೇಕು ಎಂದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಅಭ್ಯಾಸ ಮಂಡಳಿ ಅಧ್ಯಕ್ಷ ಡಾ| ಗುಂಡಣ್ಣ ಕಲಬುರ್ಗಿ, ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಎಸ್‌.ಐ. ಬಿರಾದಾರ, ಬಿಎಲ್‌ಡಿಇ ಸಂಸ್ಥೆಯ ಎಸ್‌.ಬಿ. ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯ ಪ್ರಾಚಾರ್ಯ ಡಾ| ಎ.ಎಸ್‌. ಪೂಜಾರ ಉಪ ಪ್ರಾಚಾರ್ಯರು ಡಾ| ಯು.ಎಸ್‌. ಪೂಜಾರಿ, ಬಿ.ಎಸ್‌. ಬಗಲಿ, ಸಂಪನ್ಮೂಲ ವ್ಯಕ್ತಿಗಳಾದ ಡಾ| ಈರಣ್ಣ ಮುಳಗುಂದ ಇದ್ದರು. ಆಶ್ವಿ‌ನಿ ಹಿರೇಮಠ ಪ್ರಾರ್ಥಿಸಿದರು, ಕನ್ನಡ ವಿಭಾಗದ ಡಾ| ಉಷಾದೇವಿ ಹಿರೇಮಠ ನೀರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next