Advertisement

ಹೊಸ ಶಿಕ್ಷಣ ನೀತಿ: ಮಾಸಾಂತ್ಯಕ್ಕೆ ಮಾದರಿ ಪಠ್ಯಕ್ರಮ 

12:15 AM Aug 26, 2021 | Team Udayavani |

ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಗಳಿಗೆ ಸಿದ್ಧಪಡಿಸಲಾಗುತ್ತಿರುವ ವಿಷಯ ವಾರು ಮಾದರಿ ಪಠ್ಯಕ್ರಮ ಆಗಸ್ಟ್‌ ಅಂತ್ಯಕ್ಕೆ ಅಂತಿಮಗೊಳ್ಳುವ ನಿರೀಕ್ಷೆಯಿದೆ.

Advertisement

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿಯೇ ಪ್ರಥಮ ವಾಗಿ ಕರ್ನಾಟಕದಲ್ಲಿ ಜಾರಿಗೆ ತರಲಾಗುತ್ತಿದ್ದು, ಪಠ್ಯಕ್ರಮ ಜಾರಿಗೆ ಬೇಕಾದ ಸಿದ್ಧತೆಗಳನ್ನು ಕೂಡ ಉನ್ನತ ಶಿಕ್ಷಣ ಇಲಾಖೆ ಕೈಗೊಂಡಿದೆ. ಹಾಲಿ ಶೈಕ್ಷಣಿಕ ವರ್ಷದಿಂದಲೇ ಹೊಸ ನೀತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿಷಯವಾರು ತಜ್ಞರ 32 ಸಮಿತಿಗಳನ್ನು ನೇಮಿಸಿತ್ತು. ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ ಅವರು ವಾಣಿಜ್ಯ- ನಿರ್ವಹಣೆ ವಿಭಾಗದ ತಜ್ಞರ ಸಮಿತಿಯ ಅಧ್ಯಕ್ಷರಾಗಿದ್ದಾರೆ.

4 ವರ್ಷಗಳ 8 ಸೆಮಿಸ್ಟರ್‌ಗಳಲ್ಲಿ ಯಾವ ಯಾವ ವಿಷಯ ಗಳನ್ನು ಬೋಧಿಸಬಹುದು ಎಂಬ ಮಾದರಿಯನ್ನು ಈ ಸಮಿತಿ ಉನ್ನತ ಶಿಕ್ಷಣ ಇಲಾಖೆಗೆ ನೀಡಿದ ವರದಿಯಲ್ಲಿ ತಿಳಿಸಿದೆ. ಆ ಪ್ರಕಾರ ಪಠ್ಯಕ್ರಮ ರಚನೆಯಾಗಲಿದೆ.

ಗೊಂದಲ, ಆಕ್ಷೇಪ: ಕಾರ್ಯಾಗಾರ :

ನೂತನ ಶಿಕ್ಷಣ ನೀತಿಗೆ ಸಂಬಂಧಿಸಿ ಕರಾವಳಿಯಲ್ಲಿ ಇರುವ ಗೊಂದಲ, ಆಕ್ಷೇಪ ಹಾಗೂ ಕುತೂಹಲದ ವಿಷಯ ಗಳಿಗೆ ಉತ್ತರ ನೀಡಲು ವಿಶೇಷ ಕಾರ್ಯಾಗಾರವನ್ನು ಮಂಗಳೂರು ವಿ.ವಿ. ಆಯೋಜಿಸಲಿದೆ. ಆ. 30 ಅಥವಾ 31ರಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌.ಅಶ್ವತ್ಥ ನಾರಾಯಣ ಅವರು  ಉದ್ಘಾಟಿಸುವ ನಿರೀಕ್ಷೆಯಿದ್ದು, ವಿ.ವಿ. ವ್ಯಾಪ್ತಿಯ  ಕಾಲೇಜುಗಳ ಪ್ರಾಂಶುಪಾಲರು, ಶಿಕ್ಷಕರು, ಎನ್‌ಜಿಒ, ಶಿಕ್ಷಣತಜ್ಞರು ಭಾಗವಹಿಸುವ ಸಾಧ್ಯತೆಯಿದೆ ಎಂದು ವಿ.ವಿ. ಮೂಲಗಳು ತಿಳಿಸಿವೆ.

Advertisement

ತಿದ್ದುಪಡಿ: ವಿ.ವಿ.ಗಳಿಗೆ ಅವಕಾಶ :

ಹೊಸ ಶಿಕ್ಷಣ ನೀತಿಯ ಅನುಷ್ಠಾನಕ್ಕಾಗಿ ತಜ್ಞರ ಸಮಿತಿಯು ಸರಕಾರಕ್ಕೆ ವರದಿ ನೀಡಿದೆ. ಇದೀಗ ಉಪ ಸಮಿತಿಗಳ ಮುಖೇನ ಮಾದರಿ ಪಠ್ಯಕ್ರಮ ರಚಿಸ ಲಾಗುತ್ತಿದ್ದು ಮಾಸಾಂತ್ಯಕ್ಕೆ ಲಭ್ಯ ವಾಗಲಿದೆ. ಮಾದರಿ ಪಠ್ಯಕ್ರಮ ವನ್ನು ಇಟ್ಟುಕೊಂಡು ಆಯಾಯ ವಿ.ವಿ.ಗಳ ಅಧ್ಯಯನ ಮಂಡಳಿ, ನಿಕಾಯ, ಶೈಕ್ಷಣಿಕ ಮಂಡಳಿಯಲ್ಲಿ ಚರ್ಚಿಸಲಾಗುತ್ತದೆ. ಆಗ ಸ್ಥಳೀಯ ವಾಗಿ ಬೇಕಾದರೆ ಆಯ್ದ ತಿದ್ದುಪಡಿ ಮಾಡಲು ಕೂಡ ಸ್ಥಳೀಯವಾಗಿ ಅವಕಾಶ ನೀಡಲಾಗುತ್ತದೆ.ಪ್ರೊ| ಪಿ.ಎಸ್‌. ಯಡಪಡಿತ್ತಾಯ, ಕುಲಪತಿಗಳು, ಮಂಗಳೂರು ವಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next