Advertisement
ಇದೇ ವರ್ಷ ಮಾ. 12ರಂದು ಜಾರಿಗೊಂಡಿದ್ದ 2021ರ ಮಾನವರಹಿತ ವಿಮಾನ ವ್ಯವಸ್ಥೆಯ ನಿಯಮಾವಳಿಗಳನ್ನು ರದ್ದುಗೊಳಿಸಿ ಹೊಸ ಸರಳೀಕೃತ ನಿಯಮಾವಳಿ ಜಾರಿಗೆ ತೀರ್ಮಾನಿಸಲಾಗಿದ್ದು, ಈ ಉದ್ದೇಶಕ್ಕಾಗಿ “2021ರ ಡ್ರೋನ್ ನಿಯಮಾವಳಿಗಳ’ ಕರಡನ್ನು ಸಿದ್ಧಪಡಿಸಲಾಗಿದೆ. ಇದನ್ನು ಕೇಂದ್ರ ನಾಗರಿಕ ವಿಮಾನಯಾನ ಇಲಾಖೆಯ ಅಧಿಕೃತ ವೆಬ್‌ಸೈಟ್ https://www.civilaviation.gov.in/) ನಲ್ಲಿ ಪ್ರಕಟಿಸಲಾಗಿದೆ. ಅದಕ್ಕೆ ಆ.5ರ ಒಳಗೆ ಸಾರ್ವಜನಿಕರು ತಮ್ಮ ಸಲಹೆ, ಅಭಿಪ್ರಾಯ ಸಲ್ಲಿಸಬಹುದು. ಅದು ಜಾರಿಯಾದರೆ ಪರಿಷ್ಕೃತ ನಿಯಮವೇ ಅನುಷ್ಠಾನಗೊಳ್ಳಲಿದೆ.
- ಡ್ರೋನ್ ಪರವಾನಿಗೆಗೆ ತುಂಬಬೇಕಾದ ಅರ್ಜಿಗಳ ಸಂಖ್ಯೆ 25ರಿಂದ 6ಕ್ಕೆ ಇಳಿಕೆ.
- ಅನುಸರಣ ಪ್ರಮಾಣಪತ್ರ, ನಿರ್ವಹಣ ಪ್ರಮಾಣ ಪತ್ರ, ಆಮದು ಕ್ಲಿಯರೆನ್ಸ್, ಬಳಕೆಯಲ್ಲಿರುವ ತಮ್ಮ ಡ್ರೋನ್‌ಗಳ ಬಗ್ಗೆ ಒಪ್ಪಿಗೆ ಪ್ರಮಾಣಪತ್ರ, ಬಳಕೆಯ ನಿರ್ಬಂಧದ ಪ್ರಮಾಣ ಪತ್ರಗಳು ರದ್ದು.
- ಡ್ರೋನ್ ಪರವಾನಿಗೆ ಶುಲ್ಕದಲ್ಲಿ ಗಣನೀಯ ಇಳಿಕೆ. ಡ್ರೋನ್ ಗಾತ್ರಕ್ಕನುಗುಣವಾಗಿ ಶುಲ್ಕ ನಿಗದಿ ಪದ್ಧತಿಗೆ ತಿಲಾಂಜಲಿ.
- ಮೈಕ್ರೋ, ನ್ಯಾನೋ ಹಾಗೂ ಸಂಶೋಧನೆ- ಅಭಿವೃದ್ಧಿ ಉದ್ದೇಶಗಳಿಗಾಗಿ ಬಳಸುವ ಡ್ರೋನ್‌ಗಳಿಗೆ ಪೈಲಟ್ ಪರವಾನಿಗೆ ಬೇಡ.
- ಭಾರತದಲ್ಲಿ ನೊಂದಾಯಿಸಲ್ಪಟ್ಟಿರುವ ವಿದೇಶಿ ಡ್ರೋನ್ ಕಂಪೆನಿಗಳಿಗೆ ಭಾರತದಲ್ಲಿ ಕಾರ್ಯ ನಿರ್ವಹಿಸಲು ಮುಕ್ತ ಅವಕಾಶ. ಆದರೆ ವಿದೇಶಿ ಮೂಲದ ಡ್ರೋನ್‌ಗಳ ಬಳಕೆ ವಿದೇಶ ವ್ಯವಹಾರಗಳ ಮಹಾ ನಿರ್ದೇಶಕರ ಕಚೇರಿಯಿಂದ ನಿಯಂತ್ರಣ.
- ಹಸುರು ವಲಯಗಳಲ್ಲಿ 400 ಅಡಿ ಎತ್ತರದ ಹಾರಾಟ, ವಿಮಾನ ನಿಲ್ದಾಣಗ ಳಿಂದ 8ರಿಂದ 12 ಕಿ.ಮೀ.ಗಳ ಪರಿಧಿಯಲ್ಲಿ 8ರಿಂದ 12 ಅಡಿ ಎತ್ತರದವರೆಗೆ ಹಾರಾಟಕ್ಕೆ ಅನುಮತಿ ಬೇಕಿಲ್ಲ.
- ಸುಲಭ ಡ್ರೋನ್ ಸೌಕರ್ಯಕ್ಕಾಗಿ “ಡಿಜಿಟಲ್ ಸ್ಕೈ’ ಎಂಬ ಏಕಗವಾಕ್ಷಿ ಆನ್‌ಲೈನ್ ವ್ಯವಸ್ಥೆ.
- ಡ್ರೋನ್ ಉತ್ತೇಜನ ಕೌನ್ಸಿಲ್ ರಚಿಸಲು ಉದ್ದೇಶ. ಡ್ರೋನ್ ಆಧಾರಿತ ಸರಕು ಸಾಗಣೆ ಗಾಗಿ ಡ್ರೋನ್ ಕಾರಿಡಾರ್ ಅಭಿವೃದ್ಧಿಗೆ ಒತ್ತು.
- ಸ್ಟಾರ್ಟ್ ಅಪ್‌ಗ್ಳಿಗೆ ಕೇಂದ್ರ ಕೈಗಾರಿಕೆ ಹಾಗೂ ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯಿಂದ ಮಾನ್ಯತೆ. ಕಂಪೆನಿಗಳು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ.