Advertisement

ಹೊಸ ಪೊಲೀಸ್‌ ಠಾಣೆ ಪ್ರಸ್ತಾವ ಕಡತದಲ್ಲೇ ಬಾಕಿ 

01:00 AM Feb 07, 2019 | Harsha Rao |

ಕೋಟ: ಕೋಟ ಪೊಲೀಸ್‌ ಠಾಣೆ ಜಿಲ್ಲೆಯಲ್ಲೇ ಅತಿ ದೊಡ್ಡ ಸರಹದ್ದು ಹೊಂದಿದೆ. ಆದ್ದರಿಂದ ಬ್ರಹ್ಮಾವರ ಹಾಗೂ ಕೋಟ ಠಾಣೆಯ ಕೆಲವು ಭಾಗಗಳನ್ನು ವಿಂಗಡಿಸಿ ಹೊಸ ಠಾಣೆ ಸ್ಥಾಪಿಸಬೇಕೆನ್ನುವ ಪ್ರಸ್ತಾವನೆ 2017ರಲ್ಲೇ ಸರಕಾರಕ್ಕೆ ಸಲ್ಲಿಕೆಯಾಗಿದ್ದರೂ ಇನ್ನೂ ನೆರವೇರಿಲ್ಲ.  

Advertisement

30 ಗ್ರಾಮಗಳ ವ್ಯಾಪ್ತಿ 
ಕೋಟ ಠಾಣೆಗೆ ಗಿಳಿಯಾರು, ತೆಕ್ಕಟ್ಟೆ, ಕೆದೂರು, ಬೇಳೂರು, ಹೊಂಬಾಡಿ-ಮುಂಡಾಡಿ, ಯಡ್ಯಾಡಿ-ಮತ್ಯಾಡಿ, ಬಾಳೆಕುದ್ರು, ಐರೋಡಿ, ಗುಂಡ್ಮಿ, ಕಾರ್ಕಡ, ಕೋಡಿ, ಪಾಂಡೇಶ್ವರ, ಕಾವಡಿ, ಬಿಲ್ಲಾಡಿ, ಶಿರಿಯಾರ, ಮಣೂರು, ಉಳೂ¤ರು, ಮೊಳಹಳ್ಳಿ, ಹಳ್ಳಾಡಿ-ಹರ್ಕಾಡಿ, ಹಾರ್ದಳ್ಳಿ-ಮಂಡಳ್ಳಿ, ಅಚಾÉಡಿ, ಬನ್ನಾಡಿ, ಚಿತ್ರಪಾಡಿ, ಕೋಟತಟ್ಟು, ವಡ್ಡರ್ಸೆ, ಮೂಡಹಡು, ಪಾರಂಪಳ್ಳಿ, ಕಕ್ಕುಂಜೆ, ಆವರ್ಸೆ, ನಂಚಾರು ಸೇರಿ 30 ಗ್ರಾಮಗಳು ಒಳಪಟ್ಟಿದೆ. 2011ರ ಗಣತಿಯಂತೆ ಠಾಣಾ ವ್ಯಾಪ್ತಿಯಲ್ಲಿ 95,577 ಜನಸಂಖ್ಯೆ ಇದೆ. ಈಗ ಇದು ಇನ್ನೂ ಹೆಚ್ಚಾಗಿದೆ. 

ಕೆಲವು ಗ್ರಾಮಗಳು 35 ಕಿ.ಮೀ. ದೂರ 
ಕೋಟ ಠಾಣೆ 127.2 ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. ನಂಚಾರು, ಹಾರ್ದಳ್ಳಿ-ಮಂಡಳ್ಳಿ, ಆವರ್ಸೆ, ಮೊಳಹಳ್ಳಿ ಹೊಂಬಾಡಿ-ಮುಂಡಾಡಿ ಮುಂತಾದ ಗ್ರಾಮಗಳು  30-35ಕಿ.ಮೀ. ದೂರ ದಲ್ಲಿದ್ದು ಕೆಲವು ದುರ್ಗಮವಾಗಿವೆ. ಈ ಪ್ರದೇಶದಲ್ಲಿ ಘಟನೆಗಳು ಸಂಭವಿಸಿದಾಗ ಪೊಲೀಸರು ಭೇಟಿ ನೀಡಲು 45 ನಿಮಿಷ ಬೇಕಾಗುತ್ತವೆ. ಮತ್ತು ನಿರಂತರ ಭೇಟಿ ನೀಡಲೂ ಸಾಧ್ಯವಿಲ್ಲ.  

ಹೊಸ ಠಾಣೆಯ ಪ್ರಸ್ತಾವನೆ 
ವಿಶಾಲ ಸರಹದ್ದಿನ ಕಾರಣ ಕಾನುನು ಸುವ್ಯವಸ್ಥೆಗೆ ಸಮಸ್ಯೆಯಾಗುತ್ತದೆ ಎಂದು ಠಾಣೆ ವ್ಯಾಪ್ತಿಯ ಶಿರಿಯಾರ, ಬಿಲ್ಲಾಡಿ, ಆವರ್ಸೆ, ಕಕ್ಕುಂಜೆ, ಅಚಾÉಡಿ, ಕಾವಡಿ, ಹಳ್ಳಾಡಿ-ಹರ್ಕಾಡಿ, ನಂಚಾರು, ಹಾರ್ದಳ್ಳಿ-ಮಂಡಳ್ಳಿ ಹಾಗೂ ಬ್ರಹ್ಮಾವರ ಪೊಲೀಸ್‌ ಠಾಣೆ ವಾಪ್ತಿಯ ಪಜೆಮಂಗೂರು, ಯಡ್ತಾಡಿ, ಹೆಗ್ಗುಂಜೆ, ಶಿರೂರು, ನಡೂರು, ಕುದಿ, ಕೆಂಜೂರು, ಕಾಡೂರು ಗ್ರಾಮಗಳನ್ನು ಪ್ರತ್ಯೇಕಿಸಿ ಮಂದಾರ್ತಿಯಲ್ಲಿ ಹೊಸ ಠಾಣೆ ಸ್ಥಾಪಿಸಬೇಕು ಎನ್ನುವ ಪ್ರಸ್ತಾವನೆ 2017 ನ. 9ರಂದು ಬ್ರಹ್ಮಾವರ ವೃತ್ತ ನಿರೀಕ್ಷಕರ ಕಚೇರಿಯಿಂದ ಸರಕಾರಕ್ಕೆ ಸಲ್ಲಿಕೆಯಾಗಿತ್ತು. ಬಳಿಕ ಶಿರಿಯಾರದಲ್ಲೇ ಠಾಣೆ ಆಗಬೇಕೆಂದು ಸಾಮಾಜಿಕ ಹೋರಾಟಗಾರರೊಬ್ಬರು ಡಿ.ಜಿ. ಅವರಿಗೆ ಮನವಿ ಸಲ್ಲಿಸಿದ್ದರು. ಬಳಿಕ ಶಿರಿಯಾರ ಸೂಕ್ತ ಎಂದು ಪರಿಷ್ಕೃತ ವರದಿ ಸಲ್ಲಿಕೆಯಾಗಿತ್ತು.  

ಹೊಸ ಠಾಣೆಗೆ ಬೇಕಾದ ಎಲ್ಲ ಅರ್ಹತೆ
ಠಾಣಾ ವ್ಯಾಪ್ತಿಯಲ್ಲಿ 50-60 ಸಾವಿರಕ್ಕಿಂತ ಜಾಸ್ತಿ ಜನಸಂಖ್ಯೆ ಇದ್ದಲ್ಲಿ ಹಾಗೂ ವರ್ಷಕ್ಕೆ 300ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದಲ್ಲಿ ಹೊಸ ಠಾಣೆ ಸ್ಥಾಪಿಸಬಹುದು ಎನ್ನುವ ನಿಯಮವಿದೆ. ಕೋಟ ಠಾಣೆ ವ್ಯಾಪ್ತಿಯೊಂದರಲ್ಲೇ  95,577 ಜನಸಂಖ್ಯೆ ಇದ್ದು, 2015ರಲ್ಲಿ 309 ಪ್ರಕರಣಗಳು, 2016ರಲ್ಲಿ 350 ಪ್ರಕರಣ ದಾಖಲಾಗಿತ್ತು ಮತ್ತು ಅನಂತರ ಕೂಡ ಪ್ರತಿ ವರ್ಷ 300ಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಹೊಸ ಠಾಣೆಗೆ ಎಲ್ಲ ರೀತಿಯ ಅರ್ಹತೆಗಳಿವೆ.  

Advertisement

ಕಡತದಲ್ಲೇ ಬಾಕಿ ಉಳಿಯಿತೇಕೆ ?
ಮನವಿ ಸಲ್ಲಿಕೆಯಾದ ಮೇಲೆ  ಸ್ಥಳೀಯರು ಸಾಕಷ್ಟು ಹೋರಾಟ ನಡೆಸಿದ್ದರು. ಸರಕಾರ ವರ್ಷಂಪ್ರತಿ ಕೆಲವು ಠಾಣೆಗಳನ್ನು ಸ್ಥಾಪನೆ ಮಾಡುತ್ತದೆ. ಆದರೆ ಅತಿ ಅಗತ್ಯ ಮತ್ತು ಅರ್ಹತೆಯಿರುವ ಪ್ರದೇಶಕ್ಕೆ ಆದ್ಯತೆ ನೀಡುತ್ತದೆ. ಜನಸಂಖ್ಯೆ, ವಿಸ್ತೀರ್ಣ, ಕೇಸ್‌ಗಳ  ಪ್ರಮಾಣ ಮಾತ್ರ ಮಾನದಂಡವಾಗದೆ ಇನ್ನೂ ಕೆಲವು ಅಂಶಗಳಿವೆ. ಇವುಗಳಲ್ಲಿ ಯಾವುದಾದರೊಂದು ಕೊರತೆ ಕೋಟಕ್ಕೆ ಹಿನ್ನಡೆಯಾಗಿರಬಹುದು ಎನ್ನಲಾಗಿದೆ.  ಠಾಣೆ ಕುರಿತಾಗಿ 2018 ಡಿ. 18ರಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ್‌ ಪೂಜಾರಿ ಕ್ರಮಕ್ಕೆ ಜಿಲ್ಲಾ ಎಸ್ಪಿಗೆ ಮತ್ತೂಮ್ಮೆ  ಮನವಿ ಸಲ್ಲಿಸಿದ್ದಾರೆ.

ಶೀಘ್ರ ಕ್ರಮ ಕೈಗೊಳ್ಳಲಿ 
 ಕೋಟ ಹಾಗೂ ಹತ್ತಿರದ ಬ್ರಹ್ಮಾವರ ಠಾಣಾ ವ್ಯಾಪ್ತಿಯ 17ಗ್ರಾಮಗಳನ್ನು ಸೇರಿಸಿಕೊಂಡು ಹೊಸ ಠಾಣೆ ತೆರೆಯುವ ಪ್ರಸ್ತಾವನೆ ಇಲಾಖೆಗೆ 2017ರಲ್ಲಿ ಸಲ್ಲಿಕೆಯಾಗಿತ್ತು. ಅನಂತರ ನೂತನ ಠಾಣೆಯನ್ನು ಶಿರಿಯಾರದಲ್ಲಿ ಸ್ಥಾಪಿಸುವಂತೆ ಮನವಿ ಮಾಡಲಾಗಿದೆ. ಈಗ ಪರಿಷ್ಕೃತ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೂ ಅನುಷ್ಠಾನವಾಗಿಲ್ಲ. ಇಲಾಖೆ ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳಬೇಕು.  
-ಕೋಟ ಗಿರೀಶ್‌ ನಾಯಕ್‌, ಸಾಮಾಜಿಕ ಹೋರಾಟಗಾರರು

ಪ್ರಸ್ತಾವನೆಗೆ ಹಿನ್ನಡೆಯಾಗಿರಬಹುದು
ಠಾಣೆ ಪ್ರಸ್ತಾವನೆ ಸಲ್ಲಿಕೆಯಾಗಿರುವುದು ನಿಜ. ಆದರೆ ಎಲ್ಲಾ ಮಾನದಂಡಗಳನ್ನು ಪರಿಗಣಿಸಿ ಸರಕಾರ ಹೊಸ ಠಾಣೆ ಸ್ಥಾಪನೆಗೆ ಅನುಮತಿ ನೀಡುತ್ತದೆ. ಇತ್ತೀಚಿನ ವರ್ಷದಲ್ಲಿ  ಪ್ರತ್ಯೇಕ ಠಾಣೆಗೆ ಬೇಕಾದ ಯಾವುದೋ ಅರ್ಹತೆ ಇಲ್ಲದಿರುವುದರಿಂದ ಹಿನ್ನಡೆಯಾಗಿರಬಹುದು.
-ಲಕ್ಷ್ಮಣ ನಿಂಬರ್ಗಿ, ಪೊಲೀಸ್‌ ವರಿಷ್ಠಾಧಿಕಾರಿ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next