Advertisement

ಆಗಸ್ಟ್‌ನಲ್ಲಿ ರಕ್ಷಣಾ ನೀತಿ

09:30 AM Jul 30, 2018 | Team Udayavani |

ಹೊಸದಿಲ್ಲಿ: ದೇಶವನ್ನು ರಕ್ಷಣಾ ಉತ್ಪಾದನಾ ವಲಯವನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಆಗಸ್ಟ್‌ನಲ್ಲಿ ಪ್ರಮುಖ ನೀತಿಯೊಂದನ್ನು ಹೊರತರಲಿದೆ. ಮುಂದಿನ 10 ವರ್ಷಗಳಲ್ಲಿ ಮಿಲಿಟರಿ ಸಲಕರಣೆಗಳ ಉತ್ಪಾದನೆಯ ಟಾಪ್‌ 5 ರಾಷ್ಟ್ರಗಳಲ್ಲೊಂದಾಗಿಸಲು ರಕ್ಷಣಾ ಉತ್ಪಾದನಾ ಕೈಗಾರಿಕೆಗೆ ಪ್ರೋತ್ಸಾಹ ನೀಡಲು ನೀಲನಕ್ಷೆ ಸಿದ್ಧಪಡಿಸಲು ಸರಕಾರ ಉದ್ದೇಶಿಸಿದೆ. ರಕ್ಷಣಾ ಉತ್ಪಾದನಾ ನೀತಿಗೆ (ಡಿಪಿಪಿ) ಅಂತಿಮ ಸ್ಪರ್ಶ ನೀಡಲಾಗುತ್ತಿದ್ದು, ಅನುಮೋದನೆಗಾಗಿ ಕೇಂದ್ರ ಸಂಪುಟ ಸಭೆಗೆ ಕಡತ ಹೋಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕರಡು ನೀತಿಯಲ್ಲಿ, 2025ರ ವೇಳೆಗೆ ಸೇನಾ ಸರಕು ಮತ್ತು ಸೇವೆಯ ವಹಿವಾಟು 1.7 ಲಕ್ಷ ಕೋಟಿ ರೂ. ಸಾಧಿಸುವ ಗುರಿ ಹಾಕಿಕೊಳ್ಳಲಾಗಿದೆ. ಕಳೆದ 6 ದಶಕಗಳಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ಬಹುತೇಕ ಎಲ್ಲಾ ಸೇನಾ ಸಾಮಗ್ರಿಗಳನ್ನು ದೇಶದಲ್ಲೇ ಉತ್ಪಾದಿಸಲು ಯೋಜಿಸಲಾಗಿದೆ. ಜತೆಗೆ ಖರೀದಿ ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗುತ್ತಿರುವ ಅನೇಕ ಹಂತದ ಅನುಮೋದನೆಗಳನ್ನೂ ಈ ನೀತಿ ಸರಳಗೊಳಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next