Advertisement

ಒಟ್ಟಿಗೆ ಮಲಗುವಂತಿಲ್ಲ, ಕಿಸ್ ಮಾಡುವಂತಿಲ್ಲ..!; ಇದು ಹೊಸ ಕೋವಿಡ್ ನಿಯಮ

08:37 AM Apr 08, 2022 | Team Udayavani |

ಬೀಜಿಂಗ್‌: “ಇಂದು ರಾತ್ರಿಯಿಂದ ಎಲ್ಲರೂ ಪ್ರತ್ಯೇಕವಾಗಿಯೇ ಮಲಗಬೇಕು, ಒಬ್ಬರಿಗೊಬ್ಬರು ಚುಂಬಿಸಬಾರದು, ಆಲಿಂಗಿಸಿಕೊಳ್ಳಬಾರದು, ಊಟವನ್ನೂ ಒಟ್ಟಿಗೇ ಮಾಡಬಾರದು…’ ಇದು ಚೀನದ ಶಾಂಘೈ ನಗರದ ಜನತೆಗೆ ಸರಕಾರ ಮಾಡಿರುವ ಕಟ್ಟಪ್ಪಣೆ.

Advertisement

ಶಾಂಘೈಯಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕು ಗಣನೀಯವಾಗಿ ಏರಿಕೆಯಾಗುತ್ತಿದ್ದು, ಚೀನದ ಹೊಸ ಸುತ್ತಿನ ಕೊರೊನಾ ನ್ಪೋಟಕ್ಕೆ ಈಗ ಶಾಂಘೈ ನಗರವೇ ಹಾಟ್‌ಸ್ಪಾಟ್‌ ಆಗಿದೆ. ಇಲ್ಲಿ ಸತತ ಒಂದು ವಾರದಿಂದ ದಿನಕ್ಕೆ 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢಪಡು ತ್ತಿವೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿದ್ದು, ನಗರದ 2.60 ಕೋಟಿ ಜನರು ಮನೆಗಳಲ್ಲೇ ಬಂಧಿಯಾಗಿದ್ದಾರೆ.

ಘೋಷಣೆಗೆ ಡ್ರೋನ್‌ ಬಳಕೆ: ಲಾಕ್‌ಡೌನ್‌ ಹೇರಿಕೆಯಾಗಿ 2 ವಾರಗಳು ಕಳೆದಿವೆ. ಮನೆಯೊಳಗಿರುವ ಜನರಿಗೆ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ. ಹೀಗಾಗಿ, ಆಕ್ರೋಶಭರಿತ ನಾಗರಿಕರು ಮನೆಗಳ ಬಾಲ್ಕನಿಗಳಿಗೆ ಬಂದು ಜೋರಾಗಿ ಕೂಗುತ್ತಾ, ಹಾಡುತ್ತಾ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಆಗಸದಲ್ಲಿ ಡ್ರೋನ್‌ಗಳ ಹಾರಾಟ ಕಂಡುಬಂದಿದೆ.

ಚೀನ ಸರಕಾರವು ಡ್ರೋನ್‌ಗಳ ಮೂಲಕ ನಾಗರಿಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. “ಎಲ್ಲರೂ ಕೊರೊನಾ ನಿರ್ಬಂಧ ಗಳನ್ನು ಪಾಲಿಸಿ ಮತ್ತು ನಿಮ್ಮ ಸ್ವಾತಂತ್ರ್ಯದ ಬಯಕೆಯನ್ನು ಅದುಮಿಟ್ಟುಕೊಳ್ಳಿ’ ಎಂದು ಸೂಚಿಸಲಾಗಿದೆ. ಮನೆಯೊಳಗೂ ಯಾರೂ ಒಟ್ಟಿಗೇ ಊಟ ಮಾಡಬಾರದು, ಒಟ್ಟಿಗೆ ಮಲಗಬಾರದು, ಕಿಸ್‌ ಕೊಡಬಾರದು, ಮುತ್ತಿಕ್ಕಬಾರದು ಎಂಬ ಕಟ್ಟಪ್ಪಣೆಯನ್ನೂ ವಿಧಿಸಲಾಗಿದೆ.

ಇದನ್ನೂ ಓದಿ:ಮಾತೃಪೂರ್ಣ ಯೋಜನೆ ನಿಯಮ ಬದಲು: ಹೊರಗುಳಿದವರ ಸಂಖ್ಯೆಯೇ ಅತೀ ಹೆಚ್ಚು

Advertisement

ಶಾಂಘೈಯಲ್ಲಿ ಈ ಪರಿಸ್ಥಿತಿ ಸೃಷ್ಟಿಯಾಗಲು ಒಮಿಕ್ರಾನ್‌ನ ಉಪ ರೂಪಾಂತರಿಯೇ ಕಾರಣ ಎನ್ನಲಾಗಿದೆ. ಬಿಎ.1.1ಗೆ ಸೇರಿದ ಉಪ ಪ್ರಭೇದ ದಿಂದ ಇಷ್ಟೆಲ್ಲ ಸಮಸ್ಯೆ ಸೃಷ್ಟಿಯಾಗುತ್ತಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಕಳೆದ ವಾರವಷ್ಟೇ 4 ಕಾಲುಗಳ ರೊಬೋಟ್‌ಗಳು ಶಾಂಘೈ ಬೀದಿ ಬೀದಿಗಳಲ್ಲೂ ಸಂಚರಿಸಿ, ಆರೋಗ್ಯ ಸಂಬಂಧಿ ಘೋಷಣೆಗಳನ್ನು ಕೂಗುತ್ತಿ ದ್ದುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next