Advertisement

373 ಹೊಸ ಕೋವಿಡ್‌ ಪ್ರಕರಣ ದಾಖಲು: ಬೆಂಗಳೂರಿನಲ್ಲಿ ನಾಲ್ವರು ಕೋವಿಡ್‌ ಸೋಂಕಿಗೆ ಬಲಿ

07:34 PM Dec 09, 2021 | Team Udayavani |

ಬೆಂಗಳೂರು: ರಾಜ್ಯವ್ಯಾಪಿ ಗುರುವಾರ 373 ಕೋವಿಡ್‌ನ‌ ಹೊಸ ಪ್ರಕರಣಗಳು ಪತ್ತೆಯಾಗಿದ್ದು ರಾಜಧಾನಿ ಬೆಂಗಳೂರಿನಲ್ಲಿ  ನಾಲ್ವರು ಕೋವಿಡ್‌ ಸೋಂಕಿಗೆ ಬಲಿಯಾಗಿದ್ದಾರೆ.

Advertisement

ಬೆಂಗಳೂರನ್ನು ಹೊರತು ಪಡಿಸಿದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಕೋವಿಡ್‌ ಸೋಂಕಿನಿಂದ ಸಾವಿಗೀಡಾಗಿರುವುದು ವರದಿ ಆಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಆಸ್ಪತ್ರೆಯಿಂದ 292 ಜನರು ಬಿಡುಗಡೆಹೊಂದಿದ್ದು ಆಸ್ಪತ್ರೆಯಿಂದ ಈವೆರೆಗೂ ಬಿಡುಗಡೆ ಆಗಿರುವವ ಸಂಖ್ಯೆ 2,95,3857 ತಲುಪಿದೆ. ಗುರುವಾರ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 7332 ಆಗಿದ್ದು ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 29,99,9,471ಆಗಿದೆ.

ಕೋವಿಡ್‌  ಸೋಂಕಿಗೆ ಈವೆರೆಗೂ 3,8,253 ಜನರ ಸಾವೀಗಿಡಾಗಿದ್ದಾರೆ. ಕೋವಿಡ್‌ ಸೋಂಕಿತ ಖಚಿತ ಪ್ರಕರಣಗಳ ಶೇಕಡವಾರು ಪ್ರಮಾಣ 0.31ಆಗಿದ್ದು ಮೃತಪಟ್ಟವರ ಶೇಕಡವಾರು ಪ್ರಮಾಣ 1.07ರಷ್ಟಿದೆ.

ಒಮಿಕ್ರಾನ್‌ ಹೊಸ ರೂಪಾಂತರ ವೈರಸ್‌ ಇರುವ ಆಫ್ರಿಕನ್‌ ದೇಶಗಳಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾವುದೇ ಪ್ರಯಾಣಿಕರು ಆಗಮಿಸಿಲ್ಲ.

Advertisement

ಬೆಂಗಳೂರಿನಲ್ಲೆ ಹೆಚ್ಚು ಪ್ರಕರಣ, ಸಾವು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿಯಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಲಿಕೆ ಮಾಡಿದೆ ಗುರುವಾರ ರಾಜಧಾನಿ ಬೆಂಗಳೂರಿನಲ್ಲೆ ಅಧಿಕ ಕೋವಿಡ್‌  ಪ್ರಕರಣಗಳು ಕಂಡಿಬಂದಿವೆ.ಜತೆಗೆ ಕೋವಿಡ್‌ ಸೋಂಕಿನಿಂದಾಗಿ ಸಾವಿಗೀಡಾದವರ ಸಂಖ್ಯೆಯಲ್ಲೂ ದ್ವಿಗುಣ ಕಂಡುಬಂದಿದೆ.

ಬೆಂಗಳೂರಿನಲ್ಲಿ 211 ಹೊಸ ಕೋವಿಡ್‌ ಸೋಂಕಿನ ಪ್ರಕರಣಗಳು ಕಂಡುಬಂದಿದ್ದು ನಾಲ್ವರು ಸೋಂಕಿಗೆ ಬಲಿಯಾಗಿದ್ದಾರೆ.ಬೆಂಗಳೂರಿನಲ್ಲಿ  ಒಟ್ಟು ಸೋಂಕಿತರ ಸಂಖ್ಯೆ 1,25,8,330ಕ್ಕೆ ಏರಿದೆ. ಹಾಗೆಯೇ ಸಾವಿಗೀಡಾದವ ಸಂಖ್ಯೆ 1,6,358ಕ್ಕೆ ಹೆಚ್ಚಳವಾಗಿದೆ. ರಾಜ್ಯಧಾನಿ ಬೆಂಗಳೂರನ್ನು ಹೊರತು ಪಡಿಸಿದರೆ ಶಿವಮೊಗ್ಗದಲ್ಲಿ 33, ಕೊಡಗಿನಲ್ಲಿ 21, ಮೈಸೂರಿನಲ್ಲಿ 18, ಹಾಸನದಲ್ಲಿ 12, ತುಮಕೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ 11 ಕೋವಿಡ್‌ ಸೋಂಕಿನ ಹೊಸ ಪ್ರಕರಣಗಳು ಕಂಡುಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next