Advertisement

ಮಹಾರಾಷ್ಟ್ರ: ಹೊಸದಾಗಿ 1,045 ಕೊರೊನಾ ಸೋಂಕು ಪ್ರಕರಣ

11:50 PM Jun 02, 2022 | Team Udayavani |

ಮುಂಬಯಿ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದ್ದು,  ಸತತ ಎರಡನೇ ದಿನವಾದ ಗುರುವಾರವೂ ಕೊರೊನಾ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ.

Advertisement

ರಾಜ್ಯದಲ್ಲಿ ಹೊಸದಾಗಿ 1,045 ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, 517 ರೋಗಿಗಳು ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಇದೇ ವೇಳೆ ಓರ್ವರು ಸಾವನ್ನಪ್ಪಿದ್ದಾರೆ.   ಮಹಾರಾಷ್ಟ್ರದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 78,89,212ಕ್ಕೇರಿದೆ. ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಒಟ್ಟು 4,559 ಸಕ್ರಿಯ ರೋಗಿಗಳನ್ನು ಗುರುತಿಸಲಾಗಿದ್ದು, ಮುಂಬಯಿಯಲ್ಲಿ ಅತೀ ಹೆಚ್ಚು 3,324 ಸಕ್ರಿಯ ರೋಗಿಗಳನ್ನು ನೋಂದಾಯಿಸಲಾಗಿದೆ. ಥಾಣೆಯಲ್ಲಿ 555 ಸಕ್ರಿಯ ರೋಗಿಗಳಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 8,09,77,908 ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಶೇ.9.74ರಷ್ಟು ಮಾದರಿಗಳು ಪಾಸಿಟಿವ್‌ ಆಗಿದೆ.

ಬಿಎಂಸಿ ಎಚ್ಚರಿಕೆ :

ಮುಂಬಯಿಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಸೋಂಕಿತರ ಚಿಕಿತ್ಸೆಗೆ ಸನ್ನದ್ಧವಾಗಿರುವಂತೆ ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಜಂಬೋ ಕೋವಿಡ್‌ ಕೇಂದ್ರ ಮತ್ತು ಇತರ ಪ್ರಮುಖ ಆಸ್ಪತ್ರೆಗಳಿಗೂ ಎಚ್ಚರಿಕೆ ನೀಡಲಾಗಿದೆ ಎಂದು ಮುಂಬಯಿ ಮಹಾನಗರ ಪಾಲಿಕೆಯ ಆಯುಕ್ತ ಡಾ| ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next