Advertisement

ರಾಜ್ಯದಲ್ಲಿಂದು ಅರ್ಧ ಲಕ್ಷ ಕೋವಿಡ್ ಪ್ರಕರಣಗಳು: 346 ಜನರು ಬಲಿ

07:51 PM May 05, 2021 | Team Udayavani |

ಬೆಂಗಳೂರು: ಕೋವಿಡ್ ಕರ್ಫ್ಯೂ ಜಾರಿ ಮಾಡಿದ್ದರೂ ಸಹ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ. ಇಂದು ಬಿಡುಗಡೆಯಾದ ವರದಿಗಳ ಪ್ರಕಾರ ಕರ್ನಾಟಕದಲ್ಲಿ ಅರ್ಧ ಲಕ್ಷ ಕೋವಿಡ್ ಹೊಸ ಪ್ರಕರಣಗಳು ದಾಖಲಾಗಿವೆ.

Advertisement

ಇಂದು ಸಂಜೆ ( ಮೇ.05) ಕರ್ನಾಟಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ ( ದಿನಾಂಕ: 04.05.2021,00:00 ರಿಂದ 23:59) ಬರೋಬ್ಬರಿ 50112 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 487288ಕ್ಕೆ ಏರಿಕೆಯಾಗಿದೆ.

ಇನ್ನು ಇದೇ ಅವಧಿಯಲ್ಲಿ ಕೋವಿಡ್ ಸೋಂಕಿಗೆ ದಾಖಲೆ ಪ್ರಮಾಣದಲ್ಲಿ ಸಾವು ಸಂಭವಿಸಿವೆ. ವರದಿಗಳ ಪ್ರಕಾರ ಬರೋಬ್ಬರಿ 346 ಜನರು ಕೋವಿಡ್ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಜಿಲ್ಲಾವಾರು ಕೋವಿಡ್ ಪ್ರಕರಣಗಳು :

ಬಾಗಲಕೋಟೆ-719, ಬಳ್ಳಾರಿ-927, ಬೆಳಗಾವಿ-920, ಬೆಂಗಳೂರು ಗ್ರಾಮಾಂತರ-1033, ಬೆಂಗಳೂರು ನಗರ-23106, ಬೀದರ್-482, ಚಾಮರಾಜನಗರ-542, ಚಿಕ್ಕಬಳ್ಳಾಪುರ-830, ಚಿಕ್ಕಮಗಳೂರು-1009, ಚಿತ್ರದುರ್ಗ-152, ದಕ್ಷಿಣ ಕನ್ನಡ-1529, ದಾವಣಗೆರೆ-548, ಧಾರವಾಡ-1030, ಗದಗ-189, ಹಾಸನ-1604, ಹಾವೇರಿ-224, ಕಲಬುರಗಿ-1097, ಕೊಡಗು-768, ಕೋಲಾರ-1115, ಕೊಪ್ಪಳ-182, ಮಂಡ್ಯ-1621, ಮೈಸೂರು-2790, ರಾಯಚೂರು-427, ರಾಮನಗರ-475, ಶಿವಮೊಗ್ಗ-702, ತುಮಕೂರು-2335, ಉಡುಪಿ-1655, ಉತ್ತರ ಕನ್ನಡ-849, ವಿಜಯಪುರ-513, ಯಾದಗಿರಿ-739.

Advertisement
Advertisement

Udayavani is now on Telegram. Click here to join our channel and stay updated with the latest news.

Next