Advertisement

Srinivas University ಯಲ್ಲಿ ಹೊಸ ಕೋರ್ಸ್‌: ನವೀಕೃತ ಶಿಕ್ಷಣದೊಂದಿಗೆ ಕೌಶಲ ಅಭಿವೃದ್ಧಿ

12:37 PM Sep 01, 2023 | Team Udayavani |

ಮಂಗಳೂರು: ವಿಶ್ವವಿದ್ಯಾನಿಲಯ ವ್ಯವಸ್ಥೆಯಲ್ಲಿ ಮೊದಲ ಹೆಜ್ಜೆ ಇಡುತ್ತಿರುವ ಶ್ರೀನಿವಾಸ ವಿ.ವಿ.ಯು ತನ್ನ ಶಿಕ್ಷಣ ವ್ಯವಸ್ಥೆಯನ್ನು ನವೀಕರಿಸುವ ಮೂಲಕ ವಿದ್ಯಾರ್ಥಿಗಳಿಗೆ ಭವಿಷ್ಯದ ಶಿಕ್ಷಣ, ತರಬೇತಿ ನೀಡುತ್ತಿದೆ.

Advertisement

ಉದ್ಯಮ ಆಧಾರಿತ ಪಠ್ಯಕ್ರಮವನ್ನು ಗುರುತಿಸುವ ಮೂಲಕ, ವಿವಿಧ ಹೆಸರಾಂತ ಕಂಪೆನಿಗಳೊಂದಿಗೆ ಸಹಯೋಗ ನೀಡುವ ಮೂಲಕ ಹಾಗೂ ವಿದ್ಯಾರ್ಥಿಗಳ ಕೌಶಲಗಳನ್ನು ಗುರುತಿಸುವ ಮೂಲಕ ಮತ್ತು ಮುಂದಿನ ತಾಂತ್ರಿಕತೆಗಳನ್ನು ಗುರುತಿಸಿ ಪಠ್ಯದಲ್ಲಿ ಅಳವಡಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹೊಸತನ ತರುತ್ತಿದೆ. ಪಠ್ಯಕ್ರಮದಲ್ಲಿ ನೂತನ ಶಿಕ್ಷಣ ಕ್ರಮವನ್ನು ಅಳವಡಿಸಲು ಯೋಜನೆ ಕೈಗೊಂಡಿದೆ. ಶ್ರೀನಿವಾಸ್‌ ವಿ.ವಿ.ಯು ಉದ್ಯೋಗ ಆಧಾರಿತ, ಸಂಶೋಧನ ಕೇಂದ್ರೀಕೃತ ಎಂಜಿನಿಯರಿಂಗ್‌, 21ನೇ ಶತಮಾನಕ್ಕೆ ಅನುಗುಣವಾದ ಮಾದರಿ ಪಠ್ಯಕ್ರಮವನ್ನು ಅನುಸರಿಸುತ್ತಿದೆ.

ಬಿಟೆಕ್‌ ಕೋರ್ಸ್‌ಗಳು
ಬಿಟೆಕ್‌ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌, ಬಿಟೆಕ್‌ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಷನ್‌ ಎಂಜಿನಿ ಯರಿಂಗ್‌, ಏರ್‌ಕ್ರಾಫ್ಟ್‌ ಮೈಂಟೆನೆನ್ಸ್‌ ಎಂಜಿನಿ ಯರಿಂಗ್‌, ಸೈಬರ್‌ ಸೆಕ್ಯುರಿಟಿ ಆ್ಯಂಡ್‌ ಫೊರೆನ್ಸಿಕ್‌ ಸೈನ್ಸ್‌, ಕಂಪ್ಯೂಟರ್‌ ಸೈನ್ಸ್‌ ಆ್ಯಂಡ್‌ ಎಂಜಿನಿಯರಿಂಗ್‌.

ಸಂಶೋಧನೆ ಕೇಂದ್ರಿತ ಬಿಟೆಕ್‌
ಮೆಕ್ಯಾನಿಕಲ್‌ ಎಂಜಿನಿಯರಿಂಗ್‌, ಬಿಟೆಕ್‌ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌, ಮಷಿನ್‌ ಲರ್ನಿಂಗ್‌, ರೋಬೋಟಿಕ್‌, ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮತ್ತು ಮೆಶೀನ್‌ ಲರ್ನಿಂಗ್‌, ಇಂಟರ್ನೆಟ್‌ ಆಫ್‌ ಥಿಂಗ್ಸ್‌, ರೊಬೊಟಿಕ್ಸ್‌ ಮತ್ತು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌, ಏರ್‌ಕ್ರಾಫ್ಟ್‌ ಮೆಂಟೆನೆನ್ಸ್‌ ಎಂಜಿನಿಯರಿಂಗ್‌ ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಮಾಸ್ಟರ್‌ ಆಫ್‌ ಟೆಕ್ನಾಲಜಿ.

ವಿ.ವಿ.ಯು ಬಿಎಸ್ಸಿ ಹಾಗೂ ಎಂಎಸ್ಸಿ ಅಲೈಡ್‌ ಸೈನ್ಸಸ್‌ನಲ್ಲಿ ವಿವಿಧ ವಿಷಯಗಳು, ಬಿಎಸ್ಸಿ ನರ್ಸಿಂಗ್‌, ಬ್ಯಾಚುಲರ್‌ ಆಫ್‌ ಫಿಸಿಯೋಥೆರಪಿ, ಡಾಕ್ಟರ್‌ ಆಫ್‌ ಫಿಸಿಕಲ್‌ ಥೆರಪಿ, ಹೊಟೇಲ್‌ ಮ್ಯಾನೇಜ್‌ಮೆಂಟ್‌, ಬಿಎಸ್ಸಿ ಏವಿಯೇಶನ್‌ನೊಂದಿಗೆ ಹೋಟೆಲ್‌ ಮ್ಯಾನೇಜ್‌ಮೆಂಟ್‌, ಬಿಎಸ್ಸಿ ಇಂಟೀರಿಯರ್‌ ಡಿಸೈನ್‌, ಬ್ಯಾಚುಲರ್‌ ಆಫ್‌ ಡಿಸೈನ್‌, ಬ್ಯಾಚುಲರ್‌ ಆಫ್‌ ಬುಸಿನೆಸ್‌ ಅಡ್ಮಿನಿಸ್ಟ್ರೇಷನ್‌ನಲ್ಲಿ ವಿವಿಧ ವಿಷಯಗಳು, ಬ್ಯಾಚುಲರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಷನ್‌ನಲ್ಲಿ ವಿವಿಧ ವಿಷಯಗಳು, ಎಸಿಸಿಎಯೊಂದಿಗೆ ಬ್ಯಾಚುಲರ್‌ ಆಫ್‌ ಕಾಮರ್ಸ್‌, ಮಾಸ್ಟರ್‌ ಆಫ್‌ ಬುಸಿನೆಸ್‌ ಅಡ್ಮಿನಿಸ್ಟ್ರೇಶನ್‌, ಮಾಸ್ಟರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಶನ್‌, ಮಾಸ್ಟರ್‌ ಆಫ್‌ ಸೋಶಿಯಲ್‌ ವರ್ಕ್‌, ಫೋರೆನ್ಸಿಕ್‌, ಡಿಜಿಟಲ್‌ ಹಾಗೂ ಸೈಬರ್‌ ಸೆಕ್ಯೂರಿಟಿಯಲ್ಲಿ ಮಾಸ್ಟರ್‌ ಆಫ್‌ ಸೆ„ನ್ಸ್‌, ಮಾಸ್ಟರ್‌ ಆಫ್‌ ಸೈನ್ಸ್‌, ಮಾಸ್ಟರ್‌ ಆಫ್‌ ಫಿಸಿಯೋಥೆರಪಿ, ಬ್ಯಾಚುಲರ್‌ ಆಫ್‌ ಎಜ್ಯುಕೇಶನ್‌ ಇವುಗಳನ್ನು ಅಳವಡಿಸಿಕೊಂಡಿದೆ.

Advertisement

ವಿವರಗಳಿಗೆ ಶ್ರೀನಿವಾಸ್‌ ವಿ.ವಿ., ಆಡಳಿತ ಕಚೇರಿ, ಗಣಪತಿ ಹೈಸ್ಕೂಲ್‌ ರಸ್ತೆ, ಮಂಗಳೂರು-575001. ಅಥವಾ www.srinivasuniverity.edu.in ಸಂಪರ್ಕಿಸಬಹುದು.

ಇದನ್ನೂ ಓದಿ: ISRO ಸೂರ್ಯ ಯಾನದ ಯಶಸ್ಸಿಗಾಗಿ ಆದಿತ್ಯ ಹೃದಯ ಸ್ತೋತ್ರ: ಪೇಜಾವರ ಶ್ರೀ ಕರೆ

Advertisement

Udayavani is now on Telegram. Click here to join our channel and stay updated with the latest news.

Next