Advertisement
ಇದೇನಪ್ಪಾ? ಮಿಷನ್ ಲರ್ನಿಂಗ್ ಕೋರ್ಸ್ ಅನ್ನಬೇಡಿ. ಸರಳ ಉದಾಹರಣೆ ಕೇಳಿ; ನೀವು ಇಂಟರ್‌ನೆಟ್‌ನಲ್ಲಿ ಕೆಮ್ಮಿಗೆ ಔಷಧ ಯಾವುದೆಂದು ಹುಡುಕಾಡುತ್ತಿದ್ದರೆ, ವಿವಿಧ ಕಂಪೆನಿಗಳ ರಾಶಿರಾಶಿ ಮೆಡಿಸನ್ ನಿಮ್ಮ ಮುಂದೆ ಮಾರ್ಚ್‌ಫಾಸ್ಟ್ ಮಾಡುತ್ತಿರುತ್ತದೆ. ಹಾಗೆಯೇ, ನಿಮ್ಮ ಮನೆಗೆಅದ್ಬುತವಾದ ಟಿ.ವಿಬೇಕು ಅಂತ ತಡಕಾಡುತ್ತಿದ್ದರೆ. ಸಾವಿರದಿಂದ ಒಂದು ಲಕ್ಷದವರೆಗಿನ ಟಿ.ವಿಗಳು, ಅದರ ಹೋಲಿಕೆಗಳು ಎಲ್ಲವೂ ಕ್ಷಣಾರ್ಧದಲ್ಲಿ ನಿಮ್ಮ ಇಮೇಲ್‌ಗೆ ಬರುತ್ತದೆ. ಹಾಗೆಯೇ, ನೀವು ಫೇಸ್‌ಬಕ್ ತೆರೆದರೆ, ಅಲ್ಲಿ ಟಿ.ವಿಯಲ್ಲಿ ಜಾಹೀರಾತುಕಾಣುತ್ತದೆ. ನಿಮ್ಮ ಟಿ.ವಿ ಕೊಳ್ಳುವ ಆಸೆ ಮುಗಿದಿದ್ದರೂ ಈ ಜಾಹೀರಾತುಗಳು ಮತ್ತೆ ಆಸೆ ಹುಟ್ಟಿಸುವುದಂತೂ ಖರೆ. ಈ ರೀತಿ ನಿಮಗೆ ಬೇಕಾದ ವಸ್ತುಗಳನ್ನು ನಿಮ್ಮ ಮುಂದೆ ತಂದಿರಿಸುವುದೇ ಮಿಷನ್‌ಲರ್ನಿಂಗ್ ಎಂಜಿನಿಯರ್‌ಗಳ ಕೆಲಸ.
Related Articles
Advertisement
ಅಮೆರಿಕದ ಒಂದು ಸಂಸ್ಥೆಯ ಹೇಳಿಕೆಯಂತೆ, ಮುಂದಿನ 10 ವರ್ಷಗಳಲ್ಲಿ ಈ ಕ್ಷೇತ್ರದವಹಿವಾಟು15 ಶತಕೋಟಿ ಡಾಲರ್ ತಲುಪುವ ನಿರೀಕ್ಷೆಇದೆ. ಮೆಷಿನ್ ಲರ್ನಿಂಗ್ ಮತ್ತು ಕೃತಕ ಬುದ್ಧಿಮತ್ತೆ ಒಂದೇ ನಾಣ್ಯದ ಎರಡು ಮುಖಗಳು. ಸದ್ಯದ ಮಟ್ಟಿಗೆವಿಶ್ವಮಟ್ಟದಲ್ಲಿ ಗ್ರಾಹಕ ಸೇವಾ (ಕಸ್ಟಮರ್ ಸರ್ವಿಸ್) ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕಂಪನಿಗಳ ಒಳಗಡೆ ಇವೆರಡರ ಬಳಕೆ ಹೆಚ್ಚಾಗಿದೆ. ಮುಂದಿನ ವರ್ಷದಾಂತ್ಯದೊಳಗೆ ಶೇಕಡ 90% ರಷ್ಟು ಗ್ರಾಹಕ ಸೇವೆಗಳು ಮೆಷಿನ್ ಲರ್ನಿಂಗ್ ಎಂಜಿನಿಯರ್‌ಗಳ ಮೇಲೆಯೇ ಅವಲಂಬಿಸಲಿವೆ ಎಂದು ಅಂದಾಜು ಮಾಡಲಾಗಿದೆ.
ಜೆ.ಪಿ.ಮೊರ್ಗನ್, ನೆಟ್ ಫ್ಲೀಕ್ಸ್ ಫ್ಲಿಪ್ ಕಾರ್ಟ್, ಅಮೆಜಾನ್ , ಗೂಗಲ್ ಮೈಕ್ರೋ ಸಾಫ್ಟ್ ನಂಥ ಬಹುದೊಡ್ಡ ಕಂಪನಿಗಳು ಸುಮಾರು ಎರಡುವರ್ಷಗಳಿಂದ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಮುಖ್ಯವಾಗಿ, ಮೆಷಿನ್ ಲರ್ನಿಂಗ್ ಸ್ಟಾಟರ್ಜಿ , ಕ್ಲೌಡ್ ಮೆಷಿನ್ ಲರ್ನಿಂಗ್ ಇಂಜಿನಿಯರಿಂಗ್, ಮೆಷಿನ್ ಲರ್ನಿಂಗ್ ಸ್ಟುಡಿಯೋ ಮೊದಲಾದವುಗಳನ್ನು ಆರಂಭಿಸಿ ಬಹಳಷ್ಟು ಉದ್ಯೋಗ ಅವಕಾಶಗಳನ್ನು ಒದಗಿಸಿವೆ.
ಅರ್ಹತೆ ಏನು? : ಮೆಷಿನ್ ಲರ್ನಿಂಗ್‌ನಲ್ಲಿ ಈ ಎಲ್ಲಾ ವಿಚಾರಗಳು ಇರುತ್ತವೆ. ಬೇಸಿಕ್ಸ್ ಆಫ್ಪೈ ತಾನ್, ಸ್ಪಾರ್ಕ್ ಮತ್ತು ಸ್ಟ್ಯಾಟಿಸ್ಟಿಕ್ಸ್, ಡೀಪ್ ಲರ್ನಿಂಗ್ ಆಲ್ಗರಿದಮ್ಸ್ ಡಾಟಾ ಮಾಡೇಲಿಂಗ್ ವಿತ್ ಪೈತಾನ್, ಫೀಚರ್ಸ್ ಎಂಜಿನಿಯರಿಂಗ್ ಅಪ್ಲೆ„ಡ್ ಮಶೀನ್ ಲರ್ನಿಂಗ್, ಬಿಲ್ಡ್ ಫೌಂಡೇಶನಲ್ ಎಂ ಎಲ್ ಮಾಡೆಲ್ಸ್ ಇನ್ ಪೈತಾನ್ ಸ್ಟ್ಯಾಟಿಸ್ಟಿಕ್ಸ್, ಪ್ರೋಗ್ರಾಮಿಂಗ್ ಅಂಡ್ ಆಲ್ಗರಿದಮ್ಸ್ ಸೂಪರ್ವೆಸ್ಡ್ ಲರ್ನಿಂಗ್, ಅಪ್ಲಿಕೇಶನ್ಸ್ ಆಫ್ ಮಶೀನ್ ಲರ್ನಿಂಗ್ ಲೈಕ್ ಫೇಸ್ ಡಿಟೆಕನ್, ಸ್ಪೀಚ್ ರೆಕಗ್ನಿಶನ್ ಡಿಸ್ಕ್ರಿಪ್ಟಿವ್ ಅನಲೈಟಿಕ್ಸ್ ಹೀಗೆ ಮುಂತಾದವು ಇರುತ್ತದೆ. ಹೀಗಾಗಿ, ಕನಿಷ್ಠ ಎಂಜಿನಿಯರಿಂಗ್‌ನಲ್ಲಿ (ಯಾವುದೇ ವಿಭಾಗದಲ್ಲಿ) ಪದವಿ ಅಥವಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದರೆ ಮೆಷಿನ್ ಲರ್ನಿಂಗ್ ಕೋರ್ಸ್ ಸುಲಭ ವಾಗುತ್ತದೆ.
ಸರ್ಟಿಫಿಕೇಟ್ ಕೋರ್ಸ್ ಕಲಿಸುವ ಸರ್ಕಾರಿ ವಿದ್ಯಾಸಂಸ್ಥೆಗಳು ಹೀಗಿವೆ–ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು ಇಂಟರ್‌ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ಇ ನ್‌ಫರ್‌ವೆುಷನ್ ಟೆಕ್ನಾಲಜಿ ಬೆಂಗಳೂರು ಮೆಷಿನ್ ಲರ್ನಿಂಗ್ ಸರ್ಟಿಫಿಕೇಟ್ ಕೋರ್ಸ್ ಕಲಿಸುವ ಖಾಸಗಿ ವಿದ್ಯಾಸಂಸ್ಥೆಗಳು ಬೆಂಗಳೂರಿನ ಮಣಿಪಾಲ್ ಪ್ರೋ ಲರ್ನ್, ಮೈ ಟೆಕ್ಟ್ರ , ಇಟೇಂಜ್, ಸ್ಪ್ರಿಂಗ್ ಪೀಪಲ್ ಸಿಂಪ್ಲಿ ಲರ್ನ್, ಲರ್ನ್ ಬೇ ಗಳಲ್ಲಿ ಹೇಳಿ ಕೊಡಲಾಗುತ್ತದೆ.
–ವಿಜಯ್ ಕುಮಾರ್ ಎಚ್.ಕೆ