Advertisement

ಶಿಕ್ಷಕರಿಗಾಗಿ ಹೊಸ ಕೋರ್ಸ್‌?

06:00 AM May 23, 2018 | Team Udayavani |

ನವ ದೆಹಲಿ: ರಾಷ್ಟ್ರಮಟ್ಟದಲ್ಲಿ ಪ್ರತಿಭಾನ್ವಿತ ಶಿಕ್ಷಕರನ್ನು ರೂಪಿಸಲು ಪದವಿ ಮಟ್ಟದಲ್ಲಿ ಬಿಎ.ಎಜುಕೇಷನ್‌ ಹಾಗೂ ಬಿಎಸ್‌ಸಿ. ಎಜುಕೇಷನ್‌ ಎಂಬ ನಾಲ್ಕು ವರ್ಷಗಳ ಅಂತರ್ಗತ ಕೋರ್ಸ್‌ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರದ ಸಮಿತಿ ಶಿಫಾರಸು ಮಾಡಿದೆ. ಈ ಪದವಿ ಕೋರ್ಸ್‌ಗಳ ಜವಾಬ್ದಾರಿಯನ್ನು ನೂತನವಾಗಿ ಸ್ಥಾಪಿಸಲಾಗುವ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಸಂಸ್ಥೆ (ಎನ್‌ಐಟಿಇ) ವಹಿಸಿಕೊಳ್ಳಬೇಕೆಂದು ಸಮಿತಿ ಹೇಳಿದೆ.  

Advertisement

ಶಿಕ್ಷಕರಿಗಾಗಿಯೇ ಪ್ರತ್ಯೇಕ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಲು ಇಚ್ಛೆ ಪಟ್ಟಿದ್ದ ಕೇಂದ್ರ ಕಳೆದ ವರ್ಷ ತಜ್ಞರ ಸಮಿತಿ ನೇಮಿಸಿ, ಈ ಕುರಿತಂತೆ ಅಗತ್ಯ ಸಲಹೆಗಳನ್ನು ನೀಡುವಂತೆಯೂ, ವಿವಿಯಲ್ಲಿ ಆರಂಭಿಸಬಹುದಾದ ಕೋರ್ಸ್‌ಗಳ ಬಗ್ಗೆ ವರದಿ ಸಲ್ಲಿಸುವಂತೆಯೂ ಸೂಚಿಸಿತ್ತು. ಅದರಂತೆ, ವರದಿ ನೀಡಿರುವ ಸಮಿತಿ, ಪ್ರತ್ಯೇಕ ವಿವಿ  ಬದಲು ಎನ್‌ಐಟಿಇ ಸ್ಥಾಪನೆ, 4 ವರ್ಷಗಳ 2 ಅಂತರ್ಗತ ಕೋರ್ಸ್‌ಗಳ ಚಾಲನೆಗೆ ಶಿಫಾರಸು ಮಾಡಿದೆ. ಅವುಗಳು ಪ್ರಾಥಮಿಕ ಪೂರ್ವ ಮಟ್ಟದಿಂದ ಮಾಧ್ಯಮಿಕ, ಪ್ರೌಢ ಶಿಕ್ಷಣಗಳ ಅಗತ್ಯಕ್ಕೆ ತಕ್ಕಂತೆ ಶಿಕ್ಷಕರನ್ನು ರೂಪಿಸಲಿದೆ. ಕೋರ್ಸ್‌ಗಳ ಜತೆಗೆ, ಶಿಕ್ಷಕರಲ್ಲಿ ಬೋಧನಾ ಕೌಶಲ್ಯ ಹೆಚ್ಚಿಸಲು ತರಬೇತಿ ಶಿಬಿರಗಳನ್ನು ಎನ್‌ಐಇಟಿ ನಡೆಸಬೇಕೆಂದು ಸಮಿತಿ ಹೇಳದೆ.

Advertisement

Udayavani is now on Telegram. Click here to join our channel and stay updated with the latest news.

Next