Advertisement
ವಿವಿಧ ಆರೋಪ ಹಾಗೂ ಕಾರಣಗಳನ್ನು ಹೇಳಿ ಈ ನ್ಯಾಯವಾದಿಗಳ ಭಡ್ತಿಗೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಅಡ್ಡಗಾಲು ಹಾಕಲು ಪ್ರಯತ್ನಿಸಿದರೂ ಆ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಯಿಂದಲೇ ವರದಿ ಪಡೆಯುವ ಮೂಲಕ ಕೊಲಿಜಿಯಂ, ಎಲ್ಲ ನಾಲ್ವರು ನ್ಯಾಯ ವಾದಿಗಳೂ ಶುದ್ಧಹಸ್ತರು ಎಂದು ತಿಳಿಸಿ ಭಡ್ತಿಗೆ ಒಪ್ಪಿಗೆಯ ಮುದ್ರೆ ಒತ್ತಿದೆ.
ಸರಕಾರದ ಆಕ್ಷೇಪಗಳಿಗೆ ಏಕಾಏಕಿ ಮಣೆ ಹಾಕದ ಕೊಲಿಜಿಯಂ ಗುಪ್ತ ಚರ ಇಲಾಖೆಯ ಮೂಲಕ ಮಾಹಿತಿ ಸಂಗ್ರಹಿಸಿತು. ಅದರಂತೆ ಈ ನ್ಯಾಯವಾದಿಗಳು ಶುದ್ಧಹಸ್ತರಾಗಿದ್ದು, ವೃತ್ತಿಪರವಾಗಿಯೂ, ವೈಯಕ್ತಿಕವಾಗಿಯೂ ಉತ್ತಮ ವರ್ಚಸ್ಸು ಹೊಂದಿದ್ದಾರೆ ಎಂದು ವರದಿ ನೀಡಿದೆ. ಯಾರಿವರು ವಕೀಲರು?
2019ರ ಮಾರ್ಚ್ 25ರಂದು ಕೊಲಿಜಿಯಂ 9 ವಕೀಲರ ಹೆಸರು ಗಳನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿತ್ತು. ಈ ಪೈಕಿ ನಾಲ್ವರ ಹೆಸರನ್ನು ಸರಕಾರ ವಾಪಸ್ ಕಳುಹಿಸಿತ್ತು. ಅವರೆಂದರೆ ಸವಣೂರು ವಿಶ್ವಜಿತ್ ಶೆಟ್ಟಿ, ಮರಲೂರು ಇಂದ್ರ ಕುಮಾರ್ ಅರುಣ್, ಮೊಹಮ್ಮದ್ ಘೌಸ್ ಶುಕೂರೆ ಕಮಾಲ್ ಮತ್ತು ಎಂಗಳಗುಪ್ಪೆ ಸೀತಾರಾಮಯ್ಯ ಇಂದಿರೇಶ್.